ವಿಟ್ಲ: ಮೊಬೈಲ್ ಅಂಗಡಿಗೆ ಹಾಡು ಹಾಕಲು ತೆರಳಿದ್ದ ಅನ್ಯಧರ್ಮದ ಅಪ್ರಾಪ್ತ ಬಾಲಕಿ ಮೇಲೆ ಅಂಗಡಿ ಮಾಲಕ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ನೀಡಿದ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಣಿ ಗ್ರಾಮದ ಎಂಟು ವರ್ಷ ಪ್ರಾಯದ ಅಪ್ರಾಪ್ತ ಬಾಲಕಿ ಗಡಿಯಾರ ಸಮೀಪದ ಸತ್ತಿಕಲ್ಲು ನಿವಾಸಿ ಸಲಾಂ(30) ಎಂಬಾತನ ಮಾಣಿಯಲ್ಲಿರುವ ಮೊಬೈಲ್ ಅಂಗಡಿಗೆ ಹಾಡು ಹಾಕಲೆಂದು ತೆರಳಿದ್ದರು. ಈ ಸಂದರ್ಭ ಆರೋಪಿ ಸಲಾಂ ಹಾಡು ಹಾಕುವ ನೆಪದಲ್ಲಿ ಬಾಲಕಿಯ ಮೈ ಮೇಲೆ ಕೈ ಹಾಕಿ ಲೈಂಗಿಕ ದೌರ್ಜನ್ಯ ಎಸೆಗಿದ್ದಾನೆ. ಈ ಬಗ್ಗೆ ಬಾಲಕಿ ಮನೆಯಲ್ಲಿ ತಿಳಿಸಿದ್ದು, ಇದರಿಂದ ಎಚ್ಚೆತ್ತ ಬಾಲಕಿ ಹೆತ್ತವರು ವಿಟ್ಲ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪೋಸ್ಕೋ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ತಲೆಮರೆಸಿಕೊಂಡಿದ್ದು, ಆತನ ಪತ್ತೆಯಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

