Friday, January 30, 2026

ಕೊರೊನಾ ಸೋಂಕಿತ ಕೇರಳದ ಮೂರು ರೋಗಿಗಳು ಗುಣಮುಖ

ಕೇರಳ: ಚೀನಾದಲ್ಲಿ ಕಾಡುತ್ತಿರುವ ಕೊರೊನಾ ವೈರಸ್​ನ ಸೋಂಕು ಭಾರತದ ಕೇರಳಕ್ಕೂ ಬಂದಿತ್ತು. ಚೀನಾದಿಂದ ಕೇರಳಕ್ಕೆ ಬಂದಿಳಿದಿದ್ದ ಮೂವರು ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾಗಿದ್ದು, ಇದೀಗ ಆ ಮೂರು ರೋಗಿಗಳು ಗುಣಮುಖರಾಗಿದ್ದಾರೆ. ಕೇರಳ ಕೊರೊನಾ ಮುಕ್ತವಾಗುತ್ತಿದೆ ಎಂದು ರಾಜ್ಯದ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಹೇಳಿದರು.

ಈ ವಿಚಾರವಾಗಿ ಮಾತನಾಡಿದ ಆರೋಗ್ಯ ಸಚಿವೆ, ‘ವೈರಸ್​ನಿಂದ ಮುಕ್ತವಾಗುವಲ್ಲಿ ನಾವು ಮೊದಲ ಹಂತವನ್ನು ಮುಗಿಸಿದ್ದೇವೆ. ಸೋಂಕು ತಗುಲಿದ್ದ ಮೂವರು ವಿದ್ಯಾರ್ಥಿಗಳು ಗುಣಮುಖರಾಗಿದ್ದಾರೆ. ನಾವು ಪ್ರತಿಯೊಂದನ್ನು ನಿಯಮಬದ್ಧವಾಗಿ ಪರಿಪಾಲಿಸಿದ್ದೇವೆ’ ಎಂದು ಹೇಳಿದರು.

ನಾವು ಕೇರಳವನ್ನು ಸಂಪೂರ್ಣವಾಗಿ ಕೊರೊನಾ ಮುಕ್ತ ಎಂದು ಘೋಷಿಸಬಹುದು. ಆದರೆ ನಾವು ಹಾಗೆ ಮಾಡುವುದಿಲ್ಲ. ನಮ್ಮಲ್ಲಿ 3,500 ಜನರಲ್ಲಿ ಕೊರೊನಾ ಇರಬಹುದು ಎಂದು ಶಂಕಿಸಿ 28 ದಿನಗಳ ಕಾಲ ಅವರನ್ನು ಪ್ರತ್ಯೇಕಿಸಿಡಲಾಗಿತ್ತು. ಅವರಲ್ಲಿ ಯಾರೊಬ್ಬರಲ್ಲೂ ವೈರಸ್​ ಕಾಣದ ಕಾರಣ ಅವರನ್ನೆಲ್ಲ ಅವರ ಮನೆಗಳಿಗೆ ಕಳಿಸಿದ್ದೇವೆ. ಸದ್ಯ 135 ಜನರನ್ನು ವೈರಸ್​ನ ಶಂಕೆಯಿಂದ ಪ್ರತ್ಯೇಕಿಸಿಟ್ಟಿದ್ದೇವೆ ಎಂದು ಅವರು ಹೇಳಿದ್ದಾರೆ.

ಬೇರೆ ಬೇರೆ ದೇಶಗಳಿಂದ ರಾಜ್ಯಕ್ಕೆ ಬರುವ ಪ್ರತಿಯೊಬ್ಬರನ್ನು ರೋಗದ ಲಕ್ಷಣಗಳಿವೆಯೇ ಎಂದು ಪರಿಶೀಲನೆ ಮಾಡಲಾಗುತ್ತಿದೆ. ಇತ್ತೀಚೆಗೆ ಮಲೇಷಿಯಾದಿಂದ ಬಂದ ಒಬ್ಬ ವ್ಯಕ್ತಿಯಲ್ಲಿ ಥಂಡಿ ಮತ್ತು ಜ್ವರ ಕಾಣಿಸಿಕೊಂಡಿದೆ. ಆತನ ರಕ್ತವನ್ನು ತಪಾಸಣೆಗೆ ಕಳುಹಿಸಲಾಗಿದ್ದು, ಆತನನ್ನು ನಿರ್ಬಂಧಿಸಿಡಲಾಗಿದೆ. ಇಂದು ಆತನ ವೈದ್ಯಕೀಯ ವರದಿ ಬರುವ ನಿರೀಕ್ಷೆಯಿದೆ ಎಂದು ಸಚಿವೆ ತಿಳಿಸಿದರು

More from the blog

ಕಟೀಲು 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಇಲ್ಲಿದೆ..

ಮಂಗಳೂರು: ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇದರ 7 ಮೇಳಗಳ ಜ.30ರ ಸೇವೆಯಾಟಗಳ ವಿವರ ಈ ಕೆಳಗಿನಂತಿವೆ.. ಜ.30ರ ಸೇವೆಯಾಟಗಳ ವಿವರ : ವಾಸು ಶೆಟ್ಟಿ, 'ಶ್ರೀದೇವಿ ಕೃಪಾ, 7ನೇ...

ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆ ಪ್ರಯುಕ್ತ ಗೊನೆ ಮುಹೂರ್ತ

ಬಂಟ್ವಾಳ : ಮಾಣಿ ಶ್ರೀ ಉಳ್ಳಾಲ್ತಿ ಅಮ್ಮನವರ ಕಾಲಾವಧಿ ಮೆಚ್ಚಿ ಜಾತ್ರೆಯು ಫೆ.5 ಗುರುವಾರ ರಾತ್ರಿ ಭಂಡಾರಯೇರಿ, ಮರುದಿನ ಫೆ.6 ಶುಕ್ರವಾರ ಬೆಳಿಗ್ಗೆ ಗಂಟೆ 10ರಿಂದ ಜರುಗಲಿದೆ. ಆ ಪ್ರಯುಕ್ತ ಗೊನೆಮುಹೂರ್ತವು ಗ್ರಾಮದ...

ಕರಾವಳಿ ಜಿಲ್ಲೆಗಳ ಬೆಳೆ ವಿಮೆ ಬಾಕಿ ಮೊತ್ತ ಬಿಡುಗಡೆ ಎಂ.ಎಲ್.ಸಿ ಕಿಶೋರ್ ಕುಮಾರ್ ಪುತ್ತೂರು ಆಗ್ರಹ

ಮಂಗಳೂರು: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಾವಿರಾರು ರೈತರಿಗೆ ಬೆಳೆ ವಿಮೆಯ ದೊಡ್ಡ ಮೊತ್ತ ಇನ್ನೂ ಪಾವತಿಯಾಗದೆ ಬಾಕಿ ಇರುವುದು ಸಾಬೀತಾಗಿದೆ. ರಾಜ್ಯಾದ್ಯಂತ ಕೃಷಿಕರು ಸಂಕಷ್ಟದಲ್ಲಿದ್ದರೂ ಸಹ, ವಿಮಾ ಕಂಪನಿಗಳು ಮತ್ತು...

ಮಹಿಳಾ ನೌಕರರಿಗೆ ಋತುಚಕ್ರ ರಜೆ ನೀಡಲು ಶಿಕ್ಷಣ ಇಲಾಖೆ ಆದೇಶ : ಷರತ್ತುಗಳೇನು?

ಬೆಂಗಳೂರು: ರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳಾ ಶಿಕ್ಷಕಿಯರಿಗೆ ಋತುಚಕ್ರ ರಜೆ ನೀಡಲು ಶಾಲಾ ಶಿಕ್ಷಣ ಇಲಾಖೆ ಅಧಿಕೃತ ಆದೇಶ ಹೊರಡಿಸಿದೆ. ಋತುಚಕ್ರ ರಜೆ ಪಡೆಯಲು ಮಹಿಳಾ ನೌಕರರಿಗೆ ಕೆಲವೊಂದು ಷರತ್ತುಗಳನ್ನು ಸಹ ವಿಧಿಸಲಾಗಿದೆ. ...