ವಿಟ್ಲ: ಒಡಿಯೂರುಶ್ರೀ ಗುರುದೇವಾನಂದ ಸ್ವಾಮೀಜಿಯವರ ಜನ್ಮ ದಿನೋತ್ಸವದ ಅಂಗವಾಗಿ ಒಡಿಯೂರು ಶ್ರೀ ಗ್ರಾಮವಿಕಾಸ ಯೋಜನೆ ಕೇಪು ಘಟ ಸಮಿತಿ ವತಿಯಿಂದ ಕೇಪು ಗ್ರಾಮ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಗ್ರಾಮಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು ತುಂಬಾ ಒಳ್ಳೆಯ ವಿಚಾರ. ಪ್ಲಾಸ್ಟಿಕ್ ದೇಶದ ಅತಿದೊಡ್ಡ ಸಮಸ್ಯೆ. ಇವು ಮಣ್ಣಿನಲ್ಲಿ ಕರಗಿ ಹೋಗುವುದಿಲ್ಲ. ಇದನ್ನು ದೂರ ಇಡುವುದು ನಾವೆಲ್ಲರೂ ಮಾಡಬೇಕಾದ ಮೊಟ್ಟ ಮೊದಲ ಕೆಲಸ. ನಮ್ಮ ಮನ-ಮನೆ ಪರಿಸರವನ್ನು ಪ್ರತಿನಿತ್ಯ ಸ್ವಚ್ಛವಾಗಿಟ್ಟುಕೊಳ್ಳುವವರು ನಾವಾಗಬೇಕು, ಪ್ರತಿಯೊಬ್ಬರು ಸ್ವಚ್ಛತೆಯನ್ನು ಕಾಪಾಡುವಲ್ಲಿ ಕೈಜೋಡಿಸಬೇಕು ಎಂದು ಕಾರ್‍ಯಕ್ರಮ ಉದ್ಘಾಟಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರ ಅಡ್ಯನಡ್ಕ ಇದರ ಆರೋಗ್ಯ ಸಹಾಯಕಿಯಾದ ಮಮತ ತಿಳಿಸಿದರು.
ಈ ಸಂದರ್ಭದಲ್ಲಿ ಘಟ ಸಮಿತಿ ಅಧ್ಯಕ್ಷರಾದ ಭವಾನಿ, ಉಪಾಧ್ಯಕ್ಷರಾದ ಸುನಂದ, ಸಂಘಟನಾ ಕಾರ್‍ಯದರ್ಶಿ ಕುಸುಮ, ಲೆಕ್ಕಪರಿಶೋಧಕಿ ರೇಶ್ಮಾ, ಸೇವಾದೀಕ್ಷಿತರಾದ ವಾರಿಜ, ಗೀತಾ ಉಪಸ್ಥಿತರಿದ್ದರು.
ಸಂಘದ ಸದಸ್ಯರಾದ ನಳಿನಾಕ್ಷಿಯವರು ಸ್ವಾಗತಿಸಿದರು. ಜಯಂತಿ ವಂದಿಸಿದರು. ಸಂಘಟನಾ ಕಾರ್‍ಯದರ್ಶಿ ಕುಸುಮ ಕಾರ್‍ಯಕ್ರಮವನ್ನು ನಿರೂಪಿಸಿದರು. ಘಟ ಸಮಿತಿ ಪದಾಧಿಕಾರಿಗಳು, ಸಂಘದ ಸದಸ್ಯರು ಮತ್ತು ಆದರ್ಶ ಯುವಕಮಂಡಲದ ಸದಸ್ಯರು ಸಹಕರಿಸಿದರು.
