ವಿಟ್ಲ: ಕೆಲಿಂಜ ಶ್ರೀ ಉಳ್ಳಾಲ್ತಿ ಅಮ್ಮನವರ ದೈವಸ್ಥಾನದಲ್ಲಿ ‘ನವಚಂಡಿಕಾ ಯಾಗ’ ನೀಲೇಶ್ವರ ಉಚ್ಚಿಲತ್ತಾಯ, ವೇದಮೂರ್ತಿ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ಈ ಮೊದಲು 2009 ರ ಜ.5 ರಂದು ಶ್ರೀ ದೈವಸ್ಥಾನದ ಪುನಃ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಅತ್ಯಂತ ವಿಜೃಂಭಣೆಯಿಂದ ನಡೆದಿತ್ತು. ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ 6.15ಕ್ಕೆ ಗಣಪತಿಹವನ, 6.30ಕ್ಕೆ ಶ್ರೀ ವಿಷ್ಣುಪೂಜೆ, 6.45ಕ್ಕೆ ನವಚಂಡಿಕಾಯಾಗದ ಪ್ರಾರಂಭವಾಯಿತು. 10.30 ರಿಂದ ಭಜನೆ, 11 ಗಂಟೆಗೆ ನವಚಂಡಿಕಾಯಾಗದ ಪೂರ್ಣಾಹುತಿ ನಡೆಯಿತು. 12 ಗಂಟೆಗೆ ಹೂವಿನ ಪೂಜೆ ತ್ರಿಮಧುರ ಸೇವೆ, ಮಹಾ ಮಂಗಳಾರತಿ ನಡೆದವು. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅನುವಂಶಿಕ ಮೊಕ್ತೇಸರರು, ಬೆಂಞತ್ತಿಮಾರು ಮನೆಯವರು, ಊರಪರವೂರ ಭಕ್ತಾಭಿಮಾನಿಗಳು ಭಾಗವಹಿಸಿದ್ದರು.
