Wednesday, February 12, 2025

ಭಾರತದ ಪ್ರಥಮ ಹಜ್ಜ್ ತಂಡಕ್ಕೆ ಕೆ.ಸಿ.ಎಫ್ ಮಕ್ಕಾ ಹಜ್ಜ್ ಸ್ವಯಂ ಸೇವಕರಿಂದ ಭವ್ಯ ಸ್ವಾಗತ

ಮುಂಬಯಿ: 2019ನೇ ಸಾಲಿನ ಪವಿತ್ರ ಹಜ್ಜ್ ನಿರ್ವಹಿಸಲು ಭಾರತದ ದೆಹಲಿಯಿಂದ ಅಗಮಿಸಿದ ಪ್ರಥಮ ಹಜ್ಜ್ ತಂಡವು ಇಂದು ಪವಿತ್ರ ಮದೀನಾ ಮುನವ್ವರದಿಂದ ಪುಣ್ಯ ಮಕ್ಕಾ ನಗರಕ್ಕೆ ತಲುಪಿದ್ದು. ಈ ಎಲ್ಲಾ ಹಾಜಿಗಳನ್ನು ಕನಾ೯ಟಕ ಕಲ್ಚರಲ್ ಪೌಂಡೇಷನ್ KCFಹಜ್ಜ್ ಸ್ಟಯಂ ಸೇವಕರು (HVC) ಬಹಳ ಆತ್ಮೀಯವಾಗಿ ಸ್ವಾಗತಿಸಿದರು.
ಇದೇ ವೇಳೆ ಭಾರತದ ರಾಯಭಾರಿಯಾಗಿ ಆಗಮಿಸಿದ ಡಾ| ಆಸಫ್ ಸಯೀದ್ ಹಾಗೂ  ಭಾರತ ದೂತವಾಸ ಕಚೇರಿಯ ಸಲಹೆಗಾರರಾದ ನೂರ್ ರಹ್ಮಾನ್ ಶೇಖ್ ರವರನ್ನು ಕೆ.ಸಿ.ಎಫ್ ಮಕ್ಕತ್ತುಲ್ ಮುಕರ್ರಮಃ ಸೆಕ್ಟರ್ HVC ತಂಡದ ವತಿಯಿಂದ ಪ್ರತ್ಯೇಕ ಹೂ ಗುಚ್ಚಗಳನ್ನು ನೀಡಿ ಸನ್ಮಾನಿಸಲಾಯಿತು.
ಅದೇ ರೀತಿ ಮಕ್ಕಾದ ವಸತಿ ಕೇಂದ್ರಗಳಲ್ಲಿ ಹಾಜಿಗಳ ಕೂಠಡಿ ಗಳಿಗೆ ಲಗೇಜು, ಸಾಮಾಗ್ರಿಗಳನ್ನು ಕೊಂಡೊಯ್ಯಲು ಸಹಾಯಕರಾಗುವುದರೊಂದಿಗೆ ಮುಂದಿನ ದಿನಗಳಲ್ಲಿ ಪುಣ್ಯ ಮಕ್ಕಾ ನಗರಗಳಿಗೆ ಆಗಮಿಸುತ್ತಿರುವ ಎಲ್ಲಾ ರಾಷ್ಟ್ರಗಳ ಹಜ್ಜಾಜಿಗಳ ಸಮಸ್ಯೆಗಳಿಗೆ ಸ್ಪಂದಿಸಲಿದ್ದು, ಮಸ್ಜುದುಲ್ ಹರಮ್ ಸೇರಿದಂತೆ ವಿವಿದ ಕಡೆಗಳಲ್ಲಿ ಅನಾರೋಗ್ಯದಿಂದ ಬಳಲುವ ಹಾಗೂ ತಮ್ಮ ವಸತಿಗಳಿಗೆ ಮರಳಲು ದಾರಿ ತಿಳಿಯದೇ ಆತಂಕಕ್ಕೆ ಒಳಗಾಗುವ ನಿಸ್ಸಹಾಯಕ ಹಾಜಿಗಳಿಗೆ ಮಾರ್ಗದರ್ಶನ ನೀಡಲು ಕೆಸಿಎಫ್ ನ HVC ಸ್ವಯಂ ಸೇವಕರು ಮಕ್ಕಾ ಹಾಗೂ ಮದೀನಾದಲ್ಲಿ ನಿರಂತರ ಸೇವೆಯಲ್ಲಿರುತ್ತಾರೆ.

More from the blog

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...

ಸರಕಾರಿಯೋ, ತಾ.ಪಂ.ಗೆ ಸೇರಿದ ಜಾಗವೋ? ಇದೊಂದು ಬೇಲಿಯ ಕಥೆ!

ಬಂಟ್ವಾಳ: ತಾ.ಪಂ.ಅಧಿಕಾರಿ ವರ್ಗ ಕಚೇರಿ ಮುಂಭಾಗದ ಜಾಗಕ್ಕೆ ಕಬ್ಬಿಣದ ರಾಡ್ ಗಳ ಮೂಲಕ ಬೇಲಿ ಹಾಕಿದ್ದು, ಇದಿಗ ಈ ಜಾಗವು ಸರಕಾರಿ ಯೋ, ಅಥವಾ ತಾಲೂಕು ಪಂಚಾಯತ್ ಗೆ ಸೇರಿದ್ದೊ ಎಂಬ ಚರ್ಚೆಗೆ...

ನಂದಾವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಪ್ರಭಾಕರ್ ಶೆಟ್ಟಿ ಆಯ್ಕೆ

ಬಂಟ್ವಾಳ: ತಾಲೂಕಿನ ಸಜೀಪಮಾಗಣೆಯ ಪ್ರಧಾನ ದೇವಾಲಯ ಪಾಣೆಮಂಗಳೂರಿಗೆ ಸಮೀಪದ ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುಗಾಂಭ ಕ್ಷೇತ್ರದ ನೂತನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾಗಿ ಕಾಂತಾಡಿಗುತ್ತು ಪ್ರಭಾಕರ ಶೆಟ್ಟಿ ಅವರು ಆಯ್ಕೆಯಾಗಿದ್ದಾರೆ. ಉಳಿದಂತೆ ಸಮಿತಿ ಸದಸ್ಯರಾಗಿ...