ಒಂದು ಅಲ್ಲ


ಎರಡು ಅನ್ನುವುದು
ಕೂಡಾ ಸುಳ್ಳು
ಒಬ್ಬನಿಗೆ ನೂರಾರು..
ಆಗ ಮಾತಾಡಿದ್ದು
ಈಗ ಮಾತಾಡಿದ್ದು
ಬೇರೆ ಬೇರೆಯೇ
ನಿನ್ನೆ ಹೇಳಿದ್ದು
ಇವತ್ತು ಅಂದದ್ದು
ಅದೂ ಬೇರೆ ಬೇರೆಯೇ
ನಾಳೆಯ ಕಥೆಯೂ ಬೇರೆ..
ನಾನು ನಿಂತ ದಿಕ್ಕು
ಆ ಸಮಯ
ನನ್ನಿಂದ ಎಂತಹ ಮಾತನ್ನು
ಆಡಿಸಬಹುದು..
ಸತ್ಯ ಅಂದದ್ದೇ ಸುಳ್ಳಾಗಿರಬಹುದು.,
ಸುಳ್ಳೇ ಸತ್ಯವಾಗಿರಬಹುದು..
ಕೇಳಿದ್ದೊಂದು, ಆಡಿದ್ದೊಂದು.
ನಾಲಗೆ ಹೇಗೆ ಬೇಕಾದರೂ
ತಿರುಗುವುದು..!?
ನಗಿಸುವುದು
ಅಳಿಸುವುದು
ಪ್ರೇರೇಪಿಸಿವುದು
ಎಲ್ಲಾ ತಿಳಿದಿದೆ..
ಬಣ್ಣ ಹಚ್ಚಿದ್ದು,
ದ್ವೇಷ ಹುಟ್ಟಿಸಿದ್ದು,
ಮೋಸ,ಪ್ರೀತಿ
ಎಲ್ಲಾ ಇದೇ ನಾಲಗೆಯಲ್ಲಿ
ಬಿಡಿ
ಇದು ಮುಗಿಯದ ಕಥೆ
ಎಲುಬಿಲ್ಲದ ನಾಲಗೆ..!

✍ಯತೀಶ್ ಕಾಮಾಜೆ












