Friday, July 4, 2025

ಮಾಡರ್ನ್ ಕವನ- ಹಗಲಾಗದಿದ್ದರೆ

ರಾತ್ರಿ ಹಗಲಾಗಲಿಲ್ಲ
ಹಾಗೆ ಮುಸುಕು
ಹಾಕಿ ಮಲಗಿದ್ದು
ಎಚ್ಚರವಾಗಲೂ ಇಲ್ಲ..!

ಹಿಂದಿನ ನೋವುಗಳ
ಪಾಠವಾಗಿಸಿ
ನಾಳೆಗಳ ನೆನೆಯುತ್ತ
ಮಲಗಿದ್ದು ಖಾಲಿ ಹೊಟ್ಟೆಗೆ
ನಿದ್ದೆಯ ಕಟ್ಟಿ…

ಬರೀ ಕನಸುಗಳು
ಇಲ್ಲದನ್ನು ಇದೆಯೆಂದು ಭಾವಿಸಿ
ಮೂರು ಹೊತ್ತು ಬಿರಿಯಾನಿ ತಿಂದಂತೆ
ಕೈಗೊಂದು ಕಾಲಿಗೊಂದು ಆಳಿದ್ದಂತೆ
ಮೈಸೂರು ಪ್ಯಾಲೇಸ್ ನಂತ ಮನೆಯ ಮುಂದೆ
ಆಡಿ ಫೆರಾರಿಯಂತ ಕಾರು..!

ಮುಗಿಯದ ಮುಗಿಲೆತ್ತರದ ಆಸೆಗಳಿಗೆ
ಕನಸೊಂದು ಸಹಕಾರ ನೀಡುತ್ತಿತ್ತು.
ಕನಸ ಬೆನ್ನತ್ತಿ ಹೋದವನಿಗೆ
ನಿದ್ದೆಯ ಮೊರೆ ಹೋಗುವುದೇ
ಖುಷಿ ಎನಿಸಿತು..

ಬಾರದಿರಲಿ ಹಗಲೊಂದು
ಕನಸುಗಳ ಕಟ್ಟುವ ರಾತ್ರಿಗೆ
ಹಸಿವು ಮರೆತು ಹೋಗಲಿ
ಕಣ್ಣಿಗೆ ಕತ್ತಲೆಯೊಂದೇ ಉಳಿಯಲಿ….

 

✍ಯತೀಶ್ ಕಾಮಾಜೆ

More from the blog

ದ. ಕ., ಉಡುಪಿ ಜಿಲ್ಲೆಗಳ ಭೂ ಸಮಸ್ಯೆ ಬಗೆಹರಿಸಲು ನಗರಾಭಿವೃದ್ಧಿ ಸಚಿವರಿಗೆ ಮತ್ತು ಸರ್ಕಾರದ ಕಾರ್ಯದರ್ಶಿಗೆ ಸ್ಪೀಕರ್ ಪತ್ರ

ಮಂಗಳೂರು : ಕರ್ನಾಟಕ ವಿಧಾನ ಸಭೆಯ ಗೌರವಾನ್ವಿತ ಸ್ಪೀಕರ್ ಯು. ಟಿ. ಖಾದರ್ ರವರನ್ನು ಭೇಟಿ ಮಾಡಿದ ನಗರಾಭಿವೃದ್ಧಿ ಪ್ರಾಧಿಕಾರ ದ ಒಕ್ಕೂಟ ದ ಅಧ್ಯಕ್ಷ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸದಾಶಿವ...

School holiday:ಬಂಟ್ವಾಳ ತಾಲೂಕಿನ ಶಾಲಾ,ಕಾಲೇಜುಗಳಿಗೆ ರಜೆ

ತಾಲೂಕಿನಲ್ಲಿ ನಿರಂತರ ಮಳೆಯಾಗುತ್ತಿರುವುದರಿಂದ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳು ,ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳು ಹಾಗೂ ಪದವಿಪೂರ್ವ ಕಾಲೇಜುಗಳಿಗೆ ದಿನಾಂಕ 04.07.2025 ರಂದು ರಜೆ ಘೋಷಿಸಲಾಗಿದೆ...

Mangalore : ಹಬ್ಬಗಳ ಋತು ಆರಂಭ – ಆಚರಣೆಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ..

ಮಂಗಳೂರು : ಕೆಲವೇ ದಿನಗಳಲ್ಲಿ ಹಬ್ಬಗಳ ಋತು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಮುಹರ್ರಂ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ,...

ಸ್ವಯಂ ಸೇವಕರ ತರಬೇತಿ ಕಾರ್ಯಗಾರ..

ವಿಟ್ಲ : ಕರ್ನಾಟಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್ ಕೆ ಡಿ ಆರ್ ಡಿ ಪಿ ಯ 10460 ಮಂದಿ ಶೌರ್ಯ ಸ್ವಯಂಸೇವಕರು ಎನ್ ಡಿ ಆರ್ ಎಫ್ ತಂಡದ ಕಾರ್ಯದಲ್ಲಿ ಬೆಂಬಲವನ್ನು...