Tuesday, July 15, 2025

*ಮಾಡರ್ನ್ ಕವನ* – *ಅಸ್ತ್ರ*

ಅವಕಾಶ ಮಾಡಿ ಕೊಟ್ಟಿತ್ತು
ಕೊನೆಗೂ ಸರಕಾರ
ಪ್ರತಿಯೊಬ್ಬನಿಗೂ
ಶಸ್ತ್ರಾಸ್ತ್ರ ಖರೀದಿಗೆ..!

ಯಾರಿಗಿಲ್ಲ ಹೇಳಿ
ವೈರಿಗಳು
ನನಗೂ ಇದ್ದರೂ..!
ಅವರು ಇವರು ಪಕ್ಕದಮನೆಯವರು
ಏನೇನೋ ಅಸ್ತ್ರಗಳನ್ನು ಖರೀದಿಸಿದ್ದರು..
ಅದಕ್ಕಾಗಿಯೇ ನಾನು ಖರೀದಿಸಿದ್ದು..

ಅವನದು ಕಬ್ಬಿಣದ ಗೇಟ್
ನನ್ನದು ಲೇಸರ್ ಗೇಟ್
ಅವನದು ಸಾಮಾನ್ಯ ಗನ್ ,
ನನ್ನದು ಏ.ಕೆ ಫಾರ್ಟಿಸವೆನ್.
ಅವನಿಗೆ ಸಾಮಾನ್ಯ ರಾಕೆಟ್,
ನಮ್ಮನೆಗೆ ಅಟೋಮೆಟಿಕ್ ರಾಕೆಟ್.

ಊರ ಬಲಿಷ್ಠ ವ್ಯಕ್ತಿಗಳ
ಮನೆಯಲ್ಲಿರುವ ಅಸ್ತ್ರ ನಮ್ಮನೆಯಲ್ಲೂ ಇರಬೇಕು.
ಅವರೆಲ್ಲರಿಗಿಂತ ನಾ ಬಲಿಷ್ಠನಾಗಿರಬೇಕು.
ಶತ್ರು ಗಡ ಗಡ ನಡುಗಬೇಕು.
ನಾ ಎದೆ ಉಬ್ಬಿಸಿ ನಡೆಯಬೇಕು..
ಶಸ್ತ್ರಕ್ಕೊಂದು ಶಸ್ತ್ರ ಹುಟ್ಟುತ್ತಿರಬೇಕು..!

ಉದ್ದೇಶಗಳಿಷ್ಟೇ..!?
ನಾ ಗೆಲ್ಲಬೇಕು,
ಗೆದ್ದು ಬೀಗಬೇಕು
ಎಲ್ಲರೂ ನನ್ನ
ಕೈಯ್ಯೊಳಗಿರಬೇಕು.
ಶತ್ರು ಸಾಯಬೇಕು..!

ನಾವು ಅದೆಷ್ಟೋ ಯುದ್ಧ ಈಗಾಗಲೇ ಮಾಡಿದ್ದೇವೆ,
ಆದರೆ..,
ಯಾವತ್ತೂ ನಾನಾಗಲಿ ಅವನಾಗಲಿ
ಗೆಲ್ಲುವ ಪ್ರಯತ್ನ ಮಾಡಲೇ ಇಲ್ಲ..!
ಶತ್ರುತ್ವ ಕಡಿಮೆಯಾಗಲು ಇಲ್ಲ

ಗೆಲುವೆಂದರೆ ಶತ್ರುವಿನ
ನಾಶವಲ್ಲ..!?
ಬುದ್ಧ ಅಂಗುಲಿಮಾಲನ ಗೆದ್ದದ್ದು
ನಿಜವಾದ ಗೆಲುವು..!

 

 yathish

 

✍ಯತೀಶ್ ಕಾಮಾಜೆ

More from the blog

ಆ. 24ರಂದು ಕೃಷ್ಣ ಕೃಷ್ಣ ಶ್ರೀ ಕೃಷ್ಣಾ ಸೀಸನ್ 3 ಮತ್ತು ನಮ್ಮೂರ ಟೆಕ್ನೀಶಿಯನ್..

ಬಂಟ್ವಾಳ : ಬಾಲ್ಯದಿಂದಲೇ ಮಕ್ಕಳಿಗೆ ವೇದಿಕೆ ಹತ್ತಲು ಅವಕಾಶ ಸಿಗುವುದು ಕೃಷ್ಣ ವೇಷದ ಮೂಲಕ. ಇಂತಹ ಅವಕಾಶವನ್ನು ಇಲ್ಲಿನ ಪೊಸಳ್ಳಿಯ ಬಂಟ್ವಾಳ ತಾಲೂಕು ಕುಲಾಲ ಸುಧಾರಕ ಸಂಘದ ಆಶ್ರಯದಲ್ಲಿರುವ ಕುಲಾಲ ಸೇವಾದಳವು ಕೃಷ್ಣ...

ಕನ್ನಡದ ಹಿರಿಯ ನಟಿ ಬಿ.ಸರೋಜಾದೇವಿ ನಿಧನ.. 

'ಅಭಿನಯ ಸರಸ್ವತಿ' ಎಂದೇ ಖ್ಯಾತಿ ಗಳಿಸಿರುವ ಕನ್ನಡದ ಹಿರಿಯ ನಟಿ ಬಿ. ಸರೋಜಾದೇವಿ(87) ಅವರು ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ. ಬಿ.ಸರೋಜಾದೇವಿ ಅವರು ದಕ್ಷಿಣ ಭಾರತದ ಧೀಮಂತ ಅಭಿನೇತ್ರಿಯಲ್ಲೋರ್ವರು. ಸುಮಾರು 6 ದಶಕಗಳ ಕಾಲ ಚಿತ್ರರಂಗಕ್ಕೆ...

ಕೇಂದ್ರ ಸರ್ಕಾರದಿಂದ ಮಂಗಳೂರಿಗೆ 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳ ಮಂಜೂರು : ಸಂಸದ ಕ್ಯಾ. ಬ್ರಿಜೇಶ್‌ ಚೌಟ

ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಇ-ಬಸ್ ಸೇವಾ ಯೋಜನೆಯಡಿ ಮಂಗಳೂರಿಗೆ ಒಟ್ಟು 100 ಹೊಸ ಇಲೆಕ್ಟ್ರಿಕ್‌ ಬಸ್‌ಗಳನ್ನು ಮಂಜೂರು ಮಾಡಿರುವುದಾಗಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌...

ಶ್ರೀನಿವಾಸ್ ನಾಯಕ್ ಇಂದಾಜೆ ಅವರಿಗೆ ಹುಬ್ಬಳ್ಳಿಯ ಅವ್ವ ಸೇವಾ ಟ್ರಸ್ಟ್ ದತ್ತಿ ನಿಧಿ ಪ್ರಶಸ್ತಿ ಪ್ರದಾನ..

ಮಂಗಳೂರು : ಕಾಸರಗೋಡು ಕನ್ನಡ ಪತ್ರಕರ್ತರ ಕ್ಷೇಮಾಭಿವೃದ್ಧಿ ಸಂಘ ವತಿಯಿಂದ ಮಾಧ್ಯಮ ಹಾಗೂ ಸಾಮಾಜಿಕ ಕ್ಷೇತ್ರದ ಸಾಧನೆಗೆ ನೀಡಲಾಗುವ ಪ್ರತಿಷ್ಠಿತ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಮಾರ್ಗದರ್ಶನದ ಹುಬ್ಬಳ್ಳಿ ಅವ್ವ ಸೇವಾ...