ಮಾನವ ಉಸಿರು ಬಿಡಲು
ತಯಾರಿರಲಿಲ್ಲ
ಬದುಕುವ ಆಸೆ ಬರಗಾಲದಲ್ಲೂ
ಚಿಗುರುತ್ತಿತ್ತು..!

ಪ್ರಪಂಚದಾದ್ಯಂತ ಬರಗಾಲ..
ನೀರು ಆವಿಯಾಗಿ ಹೋಗಿದೆ.
ಮಣ್ಣು ಫಲವತ್ತತೆ ಕಳೆದು ಕೊಂಡಿದೆ.
ಮಳೆ ನೋಡದೆ ಭೂಮಿ ವರುಷಗಳೇ ಕಳೆದಿದೆ
ಮರ ಗಿಡಗಳು ಉಸಿರು ನಿಲ್ಲಿಸಿದೆ..!
ಕೃತಕ ಗಾಳಿಯಿಂದ ಉಸಿರಾಟ
ಅಳಿದುಳಿದ ಧಾನ್ಯದ ಮಾರಾಟ
ಅವ ಸಾಫ್ಟ್‌ವೇರ್ ಇವ ಹಾರ್ಡವೇರ್
ಅವಳು ಡಾಕ್ಟರ್ ಇವಳು ಟೀಚರ್
ಎಲ್ಲೂ ಇಲ್ಲ ಫಾರ್ಮರ್..!
ಈಗಲೇ ಹಸಿವಿಗೊಂದು ಮಾತ್ರೆ
ಬಾಯಾರಿಕೆಗೊಂದು ಮಾತ್ರೆ
ಕಂಡು ಹಿಡಿಯಲೇ ಬೇಕಾದದ್ದು,
ಕಂಡು ಹಿಡಿದದ್ದು..!
ಒಂದು ಮಾತ್ರೆ ತಿಂದರೆ ಆ ದಿನ
ಹಸಿವಿಲ್ಲ
ಅದು ಹಸಿವನ ಮಾತ್ರೆ
ಇನ್ನೊಂದು ಬಾಯಾರಿಕೆಯಿಂದ ಸೋತ್ರೆ ತಿಂದರಾಯ್ತು
ಆ ದಿನ ಬಾಯಾರಿಕೆ ಇಲ್ಲ..!
ಮಾರುಕಟ್ಟೆ ಹೋಗಿ
ಯಾವ ತರಕಾರಿ ಬೇಕು,
ಇವತ್ತೇನು ಅಡಿಗೆ
ಚಿಂತಿಸಬೇಕಿಲ್ಲ..!
ಹೊಟೇಲ್ ಗೆ ಹೋಗಿ
ಏನ್ ಆರ್ಡರ್ ಮಾಡೋದು,
ನಿಂಗೇನಿಷ್ಟ,
ವೆಜ್-ನಾನ್‌ವೆಜ್ ಏನು ಬೇಕು
ಏನು ಕೇಳುವ ಹಾಗಿಲ್ಲ..!
“ಹಸಿವನ ಮಾತ್ರೆ ಕೊಡಿ…”
ಕೇಳಿದರಾಯ್ತು
“ಹೆಚ್ಚೆಂದರೆ ಯಾವ ಫ್ಲೇವರ್ ಎಂದು ಕೇಳಬಹುದಷ್ಟೆ..!
ಹಾಟ್ ಆರ್ ಕೂಲ್ ಡ್ರಿಂಕ್ಸ್ ಯಾವುದು..?
ಸಾಫ್ಟ್ ಡ್ರಿಂಕ್ಸ್ ಇದ್ಯಾ,
ಏನ್ ಜ್ಯೂಸ್,
ಏನು ಬೇಡ
ಒಂದು ಬಾಟಲ್ ಪೂರಿಫೈಡ್ ನೀರು ಸಾಕು..
ಹೇಳುವಂತಿಲ್ಲ
ದಾಹಕ್ಕೆ ಒಂದೇ ಮಾತ್ರೆ
ಹೆಚ್ಚೆಂದರೆ ಕಂಪೆನಿ ಕೇಳಬಹುದಷ್ಟೇ..!
ತಟ್ಟೆಯ ಅನ್ನ
ಮಾತ್ರೆಯಾಗುವ ಮುನ್ನ..
ಹೊರಬಂದುಬಿಡಿ ಕಲ್ಪನೆಯ ಶ್ರೀಮಂತಿಕೆಯಿಂದ..!
✍ ಯತೀಶ್ ಕಾಮಾಜೆ