ಇದ್ದಕ್ಕಿದ್ದಂತೆ ಭೂಮಿ
ತನ್ನ ಗುರುತ್ವಾಕರ್ಷಣೆ
ಕಳೆದುಕೊಂಡಿತು….!

ರಸ್ತೆಯಲ್ಲಿ ಹೋಗುತ್ತಿದ್ದ ಸಾವಿರಾರು ವಾಹನಗಳು
ಅಲ್ಲಲ್ಲಿ ಬಿದ್ದ ಕಸ ಕಡ್ಡಿಗಳು
ಕನಸುಗಳೆಂದು ಕಟ್ಟಿದ ಮನೆಗಳು
ನೂರಾರು ಉಪಕರಣಗಳು
ಮನುಷ್ಯನ ಆಹಾರಗಳು
ಹರಿಯುತ್ತಿದ್ದ ನೀರು
ಅಷ್ಟೇ ಯಾಕೆ ಮನುಷ್ಯ ಮತ್ತು ಪ್ರಾಣಿಗಳು
ಎಲ್ಲಾ ತೇಲಿಕೊಂಡವು…!
ವಸ್ತುಗಳು
ಒಂದಕ್ಕೊಂದು ಡಿಕ್ಕಿ ಒಡೆಯುತ
ಮತ್ತೆ ಚೂರುಗಳಾಗಿ
ತೇಲುತ್ತಿದ್ದವು
ಪ್ರಾಣಿಗಳು ಚೀರಾಡುತ್ತಿದ್ದವು
ಮಾನವ ಹೊಸ ಸಮಸ್ಯೆಗೆ
ಭಯಗೊಂಡ..
ಯಾವುದೂ ಮನುಷ್ಯನ ಹಿಡಿತದಲ್ಲಿ ಇರಲಿಲ್ಲ..!
ನನ್ನದು ನನ್ನದು ಎಂದು
ಕೂಡಿಟ್ಟ ಆಸ್ತಿಗಳು
ಅವರಿವರ ತಲೆ ಹೊಡೆದು
ಮಾಡಿದ ಗಂಟುಗಳು
ಊರೆಲ್ಲ ಮಾಡಿಟ್ಟ ಹೆಸರು
ಯಾವುದು ಸಹಾಯಕ್ಕೆ ಬರುತ್ತಿರಲಿಲ್ಲ…!
ಮನುಷ್ಯ ತೆಲಾಡಿ ಒಬ್ಬರ ಕೈ ಒಬ್ಬರು
ಹಿಡಿದು ಎಲ್ಲಾ
ಜೊತೆಯಾದರು..
ಸಮಸ್ಯೆಯ ಅವಲೋಕನೆ, ಚರ್ಚೆ
ಹೀಗೆ ಎಲ್ಲಾ ನಡೆಯಿತು
ಪರಿಹಾರ ಇಲ್ಲ..
ಸೈಂಟಿಸ್ಟ್ ಇದಕ್ಕೆಲ್ಲ ಕಾರಣ ನಾವೇ ಎಂದ..!
ಭೂಮಿಯ ಬಳಸಿದ ರೀತಿಯೇ ತಪ್ಪೆಂದ
ಯಾವ ದೇವರಿಗೂ ಪರಿಹರಿಸಲಾಗದೆಂದು ತಿಳಿದಿದ್ದ..!
ಸತ್ಯ ತಿಳಿಯುವ ಹೊತ್ತಿಗೆ
ಪ್ರಾಣಿಗಳ ಜೊತೆ ಮನುಷ್ಯನು
ಆಹಾರ ತಯಾರಿಸಲಾಗದೆ
ಸತ್ತು ಹೋದನು
ಸತ್ತರೂ ತೇಲುತ್ತಿದ್ದನು..!
ಭೂಮಿಯು ಚಂದ್ರನಂತೆ
ಜೀವಿಗಳೇ ಇಲ್ಲದೆ ಬರಡಾಯಿತು..!
ಆದರೆ
ಭೂಮಿಯೊಳಗೆ ಅದೆಷ್ಟೋ
ಕಸ ಕಡ್ಡಿಗಳು ತೇಲುತ್ತಿತ್ತು…!
ಆ ಕಸ ಕಡ್ಡಿಗಳಲ್ಲಿ ಮಾನವನ ದೇಹವೂ ಒಂದು..!
✍ಯತೀಶ್ ಕಾಮಾಜೆ