ಒಳ್ಳೆಯವನಾಗಿ
ಕಾಣಿಸಿ ಕೊಳ್ಳಲು ನೀವು
ಮಾಡಬೇಕಾದದ್ದು ಇಷ್ಟೇ…!

ಭಿಕ್ಷುಕನಿಗೆ ಭಿಕ್ಷೆ ಹಾಕಿದರೆ ಸಾಲದು.
ಹಾಕುವಾಗ ಒಂದು ಸೆಲ್ಫಿ ತೆಗೆಯಬೇಕು..!
ಅದನ್ನು ವಾಟ್ಸ್ ಆಪ್ ನಲ್ಲಿ
ಫೇಸ್ ಬುಕ್ ನಲ್ಲಿ
ಅಪ್ಡೇಟ್ ಮಾಡಬೇಕು..
ಆಕ್ಸಿಡೆಂಟ್ ಆಗಿ ಬಿದ್ದಾಗ
ಓಡಿ ಹೋಗಿ ಕಾಪಾಡುವುದಲ್ಲ
ಮೊದಲು ವಿಡಿಯೋ ಮಾಡಬೇಕು..!
ಅವನ್ನು ವಾಟ್ಸ್ ಆಪ್ ಗ್ರೂಪ್ ಗಳಿಗೆ
ಫಾರ್ವರ್ಡ್ ಮಾಡಬೇಕು
“ನಾನೇ ಮೊದಲು ನೋಡಿದ್ದು”
ಅಡಿ ಬರಹದೊಂದಿಗೆ..!
ಅತ್ಯಾಚಾರ ಆದಾಗ ತಪ್ಪದೆ
ವಾಟ್ಸ್ ಆಪ್ ಸ್ಟೇಟಸ್ ಗೆ
ಕ್ಯಾಂಡಲ್ ಹಚ್ಚಿದ,
ಜಸ್ಟೀಸ್ ಫರ್ ಸಿಸ್ಟರ್ ವೇದ ವಾಕ್ಯದ
ಫೋಟೋ ಹಾಕವುದು
ವನ ಮಹೋತ್ಸವಕ್ಕೆ ಗಿಡ ನೆಟ್ಟು
ಫೋಟೋ ತೆಗೆಯುವುದು
‘ಕಾಡು ಬೆಳೆಸಿ ನಾಡು ಉಳಿಸಿ’
ಹೇಳುವುದು ಮರೆಯಬಾರದು..!
ಹಸಿದವನಿಗೆ ಕೊಡದಿದ್ದರು ಪರವಾಗಿಲ್ಲ
ಫೋಟೋಗಾಗಿ ದಾನ ಮಾಡಬೇಕು
ಆಗಲೇ ದಾನ ಶೂರ ಕರ್ಣ ..
ಆಪತ್ತಿನವನ ರಕ್ಷಣೆ ಮಾಡೋ ಮೊದಲು
ಅವನ ನೋವಿನ ಮಂಪರಲ್ಲಿ ಕೂಗುವ
ವಿಡಿಯೋ ಹರಿಯಬಿಡಬೇಕು..
ಆಗಲೇ ನೀನು ಕರುಣಾಮಯಿ..
ಇದ್ದ ಹೋದ ಹುಡುಗಿಯರಿಗೆ
ಕಣ್ಣ ಹಾಕಿದರು ಪರವಾಗಿಲ್ಲ
ರೇಪ್ ಆದಾಗ ಸ್ಟೇಟಸ್ ಹಾಕುವುದ ಮರೆಯಬಾರದು..
ಆಗಲೇ ನೀನು ಪರಮಾತ್ಮ..
ಗಿಡ ನೆಟ್ಟು ಮತ್ತೆ ಅತ್ತ ತಿರುಗಿ
ನೋಡದಿದ್ದರು ಪರವಾಗಿಲ್ಲ
ಗಿಡ ನೆಟ್ಟಾಗ ಫೋಟೋ ಇದ್ದರೆ ಸಾಕು
ನೀನೆ ಪರಿಸರ ಪ್ರೇಮಿ…
ನೆನಪಿಡಿ
ಇದು “ಒಳ್ಳೆಯವನು” ಎನಿಸಿಕೊಳ್ಳಲಿರುವ
ಮಾರ್ಗಗಳಷ್ಟೆ..!?
ಒಳ್ಳೆಯವನಾಗಲು ಅಲ್ಲ…!
✍ಯತೀಶ್ ಕಾಮಾಜೆ