ಪಕ್ಕ ಪ್ರಾಕ್ಟಿಕಲ್
ಆಗಲು
ಹೊರಟೆ
ಇದ್ದುದನ್ನು ಇದ್ದಂಗೆ
ಹೇಳಿ ಬಿಟ್ಟೆ

ಈ ಸೂಳೆ ಮಗನಿಗೆ
ಸನ್ಮಾನ
ಅದೂ ನನ್ನಿಂದ
ಅಂದಿದ್ದ ನಿನ್ನೆ
ಸನ್ಮಾನ ಹೊತ್ತಿನಲ್ಲಿ
ನಿಮ್ಮಂಥ ಧೀರನಿಗೆ
ಸನ್ಮಾನ ಮಾಡಿದ್ದು ನನ್ನ ಅದೃಷ್ಟ ಅಂದ
ನಾ ನಿಜ ಅಂದೆ
ಒದ್ದು ಹೊರ ಹಾಕಲಾಯಿತು ನನ್ನ.
ಈ ಮಾರಿ ಮುಂಡೆ ಅದೇನು
ಮೋಡಿ ಮಾಡಿ
ಮಗನ ಬುಟ್ಟಿಗೆ ಹಾಕಿದ್ಳೋ
ನಾಯಿ ತರ ಹಿಂದೆ ಸುತ್ತಾನೆ.
ಸೊಸೆ ಬಂದಾಗ
ನಿನ್ನಂತ ಹೆಂಡ್ತಿ ಪಡೆಯೋಕೆ
ನನ್ನ ಮಗ
ಪುಣ್ಯ ಮಾಡಿರಬೇಕಂದಳು
ನಾ ನಿಜ ಅಂದೆ
ಅತ್ತೆ ಸೊಸೆ ಮಧ್ಯೆ ಹುಳಿ
ಹಿಂಡ್ತಿಯೇನೋ
ಅಂದು ಪೊರಕೆ ತೋರಿಸಿದರು.
ಸತ್ಯ
ಬಿಟ್ಟು ಬಿಟ್ಟೇ
ನಿಮಗೆ ಸನ್ಮಾನ ಮಾಡುವ
ಅವಕಾಶ ಸಿಕ್ಕಿದ್ದು
ಪುಣ್ಯ ಅಂತಿದ್ದರು ಅಂದೆ
ಅವನ ಜೊತೆ ನಂಗೂ ಸನ್ಮಾನ
ಮಾಡಲಾಯಿತು
ನಿನ್ನಂತ ಸೊಸೆ
ಎಲ್ಲಾ ಅತ್ತೆಯಂದಿರಿಗು ಸಿಗಲಿ
ಅನ್ನುತ್ತಿದ್ದರು ಅಂದೆ
ಪಾಯಸದ ಊಟ ನೀಡಲಾಯಿತು.
ಮುಖವಾಡ
ಬೇಕು
ಈ ಭೂಮಿಯಲ್ಲಿ
ನಾವು ನೀವು ಬದುಕಬೇಕಾದರೆ..!
✍ಯತೀಶ್ ಕಾಮಾಜೆ