Sunday, June 29, 2025

*ಮಾಡರ್ನ್ ಕವನ* *ಬುದ್ಧಿ*

ಬುದ್ಧಿಯೇ ಇರಬಾರದು
ಈ ಮಾನವನಿಗೆ
ಪ್ರಾಣಿಗೂ ಇವನಿಗೂ
ವ್ಯತ್ಯಾಸವೇ ಇರಬಾರದಿತ್ತು..!

ಆಗ ಬಟ್ಟೆಯ ಗೊಡವೆಯೇ ಇರುತ್ತಿರಲಿಲ್ಲ
ಬಟ್ಟೆಯಲ್ಲೇ ಶ್ರೀಮಂತಿಕೆಯ ಅಳೆಯುತ್ತಿರಲಿಲ್ಲ
ನಾಳೆಯ ರುಚಿಯೇ ಮುಖ್ಯವಾಗುತ್ತಿರಲಿಲ್ಲ
ನೂರಾರು ಪ್ಲೇವರ್ ಗಳು ಹುಟ್ಟುತ್ತಲೇ ಇರಲಿಲ್ಲ
ಇರಲೊಂದು ಸುಂದರ ಮನೆಬೇಕೆಂಬ
ಆಸೆ ಬೆಳೆಯುತ್ತಿರಲಿಲ್ಲ
ಆಸೆ ಪೂರೈಕೆಗೆ ಪ್ರಕೃತಿಯ ನಾಶವಾಗುತ್ತಿರಲಿಲ್ಲ
ನಿದ್ದೆಗೊಂದು ತಲೆದಿಂಬಿನ ಬೇಡಿಕೆ ಇಡುತ್ತಿರಲಿಲ್ಲ
ನನಸಾಗಿಸುವ ಪ್ರಯತ್ನದ ಕನಸುಗಳು ಹುಟ್ಟುತ್ತಿರಲಿಲ್ಲ..!

ಸಾವಿರಾರು ದೇವರು
ಊರಿಗೊಂದು ಹೆಸರು
ಜಾತಿ ಗೀತಿ
ಬಡವ ಬಲ್ಲಿದ
ವಿದ್ಯಾವಂತ ಅವಿದ್ಯಾವಂತ
ಯಾವುದು ಕಾಣಸಿಗುತ್ತಿರಲಿಲ್ಲ..!

ತಿಂದು ಮಲಗೋದು ಜೀವನ
ಸಸ್ಯಹಾರಿಯಾದರೆ ಆಯ್ದು ತಿನ್ನೊದು
ಮಾಂಸಹಾರಿಯಾದರೆ ಬೇಟೆಯಾಡೋದು
ಸ್ವಾರ್ಥ ಗಳಿಲ್ಲ
ಮುಗಿಲೆತ್ತರದ ಆಸೆಗಳಿಲ್ಲ
ಸತ್ತಾಗಲು ತಿಥಿ ಬೇಕಾಗಿಲ್ಲ
ಸತ್ತ ಹೆಣವು ಹದ್ದಿಗೋ ನರಿಗೋ
ಹೊಟ್ಟೆ ತುಂಬಿಸುತ್ತಿತ್ತು
ಅಂತೂ ಬೂದಿಯಾಗಿ ಹೋಗುತ್ತಿರಲಿಲ್ಲ..!

ಅವನಂತೆ ನಾನಾಗಬೇಕು
ಊರಿಗೆ ಅರಸನಾಗಬೇಕು
ಚಂದ್ರನ ಮೇಲೆ ಲಗ್ಗೆ ಇಡಬೇಕು
ಭೂಮಿಯನ್ನು ಅಳೆಯಬೇಕು
ಸಮುದ್ರವನ್ನ ಈಜಬೇಕು
ಈ ಯಾವ ಮಹದಾಸೆಗಳು ಇರುತ್ತಿರಲ್ಲ…

ಪ್ರಕೃತಿಯಲ್ಲಿ
ಸುಖದ ಬೆನ್ನಟ್ಟುವ
ದುಃಖಿ ಜೀವಿ ನಾನಾಗುತ್ತಿರಲ್ಲಿಲ್ಲ…!

 

✍ಯತೀಶ್ ಕಾಮಾಜೆ

More from the blog

Farewell : ಬೀಳ್ಕೊಡುಗೆ ಸಮಾರಂಭ..

ಕೊಯಿಲ : ಸರಕಾರಿ ಪ್ರೌಢ ಶಾಲೆಯಲ್ಲಿ ಸುಮಾರು 14 ವರ್ಷಗಳ ಕಾಲ ಶಿಕ್ಷಕ ವೃತ್ತಿಯನ್ನು ಗೈದು, ನಿವೃತ್ತಿ ಹೊಂದಿರುವ ಶ್ರೀ. ರಮೇಶ್ ಮಯ್ಯ ಹಾಗೂ ಪ್ರಥಮ ದರ್ಜೆ ಸಹಾಯಕರಾಗಿ 14 ವರ್ಷ ಕರ್ತವ್ಯ...

ಅಂಚೆ ಗ್ರಾಹಕರಿಗೆ ಗುಡ್ ನ್ಯೂಸ್ : ಪೋಸ್ಟ್ ಆಫೀಸ್ ಗಳಲ್ಲಿ ಇನ್ನುಂದೆ ಡಿಜಿಟಲ್ ಪಾವತಿ ಶುರು!

ಭಾರತೀಯ ಪೋಸ್ಟ್ ಇಲಾಖೆ ಆಧುನಿಕ ತಂತ್ರಜ್ಞಾನದೊಂದಿಗೆ ಜನರಿಗೆ ವೇಗದ, ಸುರಕ್ಷಿತ ಸೇವೆಗಳನ್ನು ಒದಗಿಸಲು ವಿವಿಧ ಪ್ರಯತ್ನಗಳನ್ನು ಮಾಡುತ್ತಿದೆ. ಇದರ ಭಾಗವಾಗಿ, ಆಗಸ್ಟ್‌ನಿಂದ ದೇಶಾದ್ಯಂತ ಪೋಸ್ಟ್ ಆಫೀಸ್‌ಗಳಲ್ಲಿ UPI ಮೂಲಕ ಪಾವತಿ ಸೌಲಭ್ಯ ಜಾರಿಗೆ...

Police Hat : ರಾಜ್ಯದ ಪೊಲೀಸ್ ಪೇದೆಗಳಿಗೆ ಹೊಸ ಟೋಪಿ..!  

ರಾಜ್ಯದ ಪೊಲೀಸ್ ಹಾಗೂ ಮುಖ್ಯ ಪೇದೆಗಳ ಟೋಪಿಯಲ್ಲಿ ಬದಲಾವಣೆಯಾಗಲಿದೆ. ರಾಜ್ಯ ಪೊಲೀಸ್ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ನಡೆದ ಪೊಲೀಸ್‌ ಅಧಿಕಾರಿಗಳ ವಾರ್ಷಿಕ ಸಮಾವೇಶದಲ್ಲಿ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ತೆಲಂಗಾಣ ಪೊಲೀಸರು ಬಳಸುವ...

ಸರಕಾರಿ ಹಿ. ಪ್ರಾ. ಶಾಲೆ ಕೆಮ್ಮಾನುಪಲ್ಕೆ : ಶಾಲಾ ಮಂತ್ರಿಮಂಡಲ ಪ್ರಮಾಣವಚನ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಡೇಶಿವಾಲಯ ಗ್ರಾಮದ ಸರಕಾರಿ ಹಿ ಪ್ರಾ ಶಾಲೆ ಕೆಮ್ಮಾನುಪಲ್ಕೆ ಇಲ್ಲಿ 2025-26 ನೇ ಸಾಲಿನ ಶಾಲಾ ಮಂತ್ರಿಮಂಡಲದ ಮಂತ್ರಿಗಳಿಗೆ ಪ್ರಮಾಣವಚನ ವನ್ನು ಶಾಲಾ ಮುಖ್ಯ ಶಿಕ್ಷಕ ಉದಯಕುಮಾರ್...