ಒಂದೇ ಒಂದು
ಟಚ್ ಸಾಕು
ಸಾಯಲು ಬದುಕಲು..!

ಆಗ ಶತ್ರು ದೇಶವನ್ನು ಬಡಿಯಬೇಕೆಂದರೆ
ಕತ್ತಿ ಹಿಡಿದು ಕುಸ್ತಿ ಕಲಿಬೇಕಿತ್ತು
ಈಗ ಜಸ್ಟ್ ಒನ್ ಟಚ್ ಸಾಕು
ಕೂತಲ್ಲಿಂದ ಮಿಂಚಿನ ವೇಗದಲ್ಲಿ
ಶತ್ರು ರಾಷ್ಟ್ರಭಸ್ಮವಾಗಬಹುದು..!
ಅತಿಥಿ ಮನೆಗೆ ಬಂದಾಗ
ಕುಳ್ಳಿರಿಸಿ ನಗು ಬೀರಿ
ನೀರು ಕೊಟ್ಟು
ಆಮೇಲೆ ಮಾತು
ಅದು ಪ್ರೀತಿ ತುಂಬಿದ ಮಾತು
ಈಗ ಹಾಗೇನಿಲ್ಲ
ಕೆಲವು ಫಾರ್ಮ್ಯಾಲಿಟಿಗಳಿವೆ
ಬರೋ ಮುನ್ನ ಒಂದು ಮೆಸೇಜ್ ಕೊಡಬೇಕು
ಪಕ್ಕ ಟೈಮ್ ಫಿಕ್ಸ್ ಆಗಿರಬೇಕು
ಬಂದ ತಕ್ಷಣ ನಗು
ಕುಡಿಯಲು ಆರ್ಡರ್ ಕೇಳುವರು
ಜಸ್ಟ್ ಒನ್ ಟಚ್ ಸಾಕು
ಕಾಫಿ ಯಾದರೆ ಕಾಫಿ
ಚಾ ಬೇಕಾದರೆ ಚಾ
ಅದರಲ್ಲೂ ಕೋಲ್ಡ್ ಹಾಟ್
ಏನು ಬೇಕು ಅದು
ಪ್ರೀತಿಗಿಂತ ಹೆಚ್ಚು ಸ್ಟೇಟಸ್ ದೇ ಮಾತು
ಊರ ಹೆಸರ ನೆನಪಿಟ್ಟು
ಅವರಿವರ ಕೇಳಿ
ಊರ ದಾರಿಯ ಕಂಡು ಹಿಡಿಯಬೇಕಿಲ್ಲ
ಜಸ್ಟ್ ಒನ್ ಟಚ್ ಸಾಕು
ಊರ ದಾರಿ ಕಣ್ಣಮುಂದೆ
ನಿನ್ನ ಮನೆ ಪಕ್ಕ ಏನಿದೆ ಎಂದು ಕೇಳಲ್ಲ ಈಗ
ನಿನ್ನ ಲೊಕೇಷನ್ ಕಳಿಸು
ಎಂದರೆ ಸಾಕು
ಜಸ್ಟ್ ಒನ್ ಟಚ್ ನಲ್ಲಿ
ಹುಟ್ಟಲು ಬಹುದು
ನಾವು ಬೂದಿಯಾಗಲೂಬಹುದು
ಊರ ಸೇರಬಹುದು
ಮಸಣ ಸೇರಬಹುದು
ಹಣವನ್ನು ಮಾಡಬಹುದು
ಕಳೆದೂ ಕೊಳ್ಳಬಹುದು
ಏನು ಬೇಕಾದರೂ ಆಗಬಹುದು
ಪ್ರೀತಿಯೊಂದನ್ನು
ಸಂಪಾದಿಸಲಾಗದು..!
✍ಯತೀಶ್ ಕಾಮಾಜೆ