ಇದು ಆಕಾಶಕ್ಕೆ ಏಣಿ ಹಾಕಲು
ಅಸಾಧ್ಯ ಎಂದ ಮಾತನ್ನು
ಸುಳ್ಳಾಗಿಸಿದ ಕಥೆ

ಸಾವಿರಾರು ಗಗನ ಚುಂಬಿ
ಕಟ್ಟಡಗಳಲ್ಲಿ
ಇತ್ತೊಂದು ಆಕಾಶ ದಾಟಿದ
ಕಟ್ಟಡ
ಆ ಕಟ್ಟಡದ ತುದಿಯಲ್ಲಿ
ನಿಂತರೆ
ಚಂದಿರ ಸೂಜಿಯಷ್ಟೆ ಅಂತರ
ನಕ್ಷತ್ರ ಎಣಿಸಲು ಸಾಧ್ಯ
ನವಗ್ರಹಗಳ ಚಲನೆಯನ್ನು ನೋಡಲೂ ಬಹುದು..!
ಅಲ್ಲಿ ಹೆಚ್ಚು ಹಣ ಕೊಟ್ಟರೆ ಸ್ಪೀಡ್ ಲಿಫ್ಟ್ ಇದೆ
ಕೆಲವೇ ಗಂಟೆಯಲ್ಲಿ ತಲುಪಬಹುದು
ಅದರ ತುದಿಗೆ..!
ಸ್ವಲ್ಪ ಹಣ ಕೊಟ್ಟರೆ ಸ್ಲೋ ಲಿಫ್ಟ್ ಇದೆ
ಒಂದು ವಾರ ಬೇಕಾದಿತು
ಇನ್ನೂ ನಡೆದು ಕೊಂಡು
ಹೋಗುವ ವ್ಯವಸ್ಥೆಯು ಇದೆ.,
ಆರೇಳು ತಿಂಗಳು ಬೇಕಾಗಬಹುದು
ಎಂಟ್ರಿ ಫೀಸ್ ಕೊಟ್ಟರೆ ಸಾಕು..!
ಅದೊಂದು
ಟೂರಿಸ್ಟ್ ಪ್ಲೇಸ್
ಹಲವಾರು ಸೈಂಟಿಸ್ಟ್
ವಿಜ್ಞಾನ ಕಲಿಯುವ ಸ್ಟೂಡೆಂಟ್ಸ್
ಕೊನೆಯ ಕ್ಷಣದ ಆಸೆ ಹೊತ್ತ ಪೇಷಂಟ್
ಗಲ್ಲಿಗೇರಿ ಸಾಯೋ ಕ್ರಿಮಿನಲ್
ವೈಜ್ಞಾನಿಕ ಸಿನಿಮಾ ರಚಿಸೋ ಚಿತ್ರತಂಡ
ಹೀಗೆ ಹಲವಾರು ಟೂರಿಸ್ಟ್ ಗಳು
ಭೇಟಿ ಕೊಡುತ್ತಿದ್ದರು..!!
ಇಲ್ಲಿ ಎಲ್ಲವೂ ಸಾಧ್ಯ
ಅಸಾಧ್ಯ ಅನ್ನೋದು ಯಾವುದಿಲ್ಲ..!
ದುಡ್ಡೊಂದು ಬೇಕಷ್ಟೆ..!
ಆದರೂ ಅಲ್ಲೊಂದು ಬೋರ್ಡ್ ನೇತು ಹಾಕಿದ್ದರು..!?
“ನಿಮ್ಮ ಪ್ರಾಣಕ್ಕೆ
ನೀವೇ ಜವಾಬ್ದಾರರು..!”
✍ಯತೀಶ್ ಕಾಮಾಜೆ