ಸತ್ತೇ ಬಿಟ್ಟಳು
ಅಲ್ಲಿವರೆಗೆ ಹಿಡಿದಿಟ್ಟ
ಪ್ರಾಣವ ಬಿಟ್ಟು..!


ಈಗ ಶುರು
ವಿಧಿ ವಿಧಾನಗಳು
ಒಬ್ಬೊಬ್ಬರಾಗಿ
ರಾಶಿ ಹಾಕಿದರು ಊದುಬತ್ತಿಗಳ.,
ಬಿಳಿ ಬಟ್ಟೆಯ,
ಬಗೆ ಬಗೆಯ ಹೂವಾ..
ಸ್ನಾನ ಮಾಡಿಸಿ ಇಟ್ಟರು ಶೃಂಗಾರಕ್ಕೆ
ನಿನ್ನೆಯವರೆಗೆ ಒಂದೇ ಬಟ್ಟೆಯಲ್ಲಿದ್ದಳು
ತೊಡಿಸುವವರಾರಿರಲಿಲ್ಲ..!
ಒಬ್ಬೊಬ್ಬರಾಗಿ ನೀರು ಬಿಟ್ಟರೂ.
ಬಾಯಾರಿಕೆಗೆ ನೀರು ಕೊಟ್ಟವರಾರಿರಲಿಲ್ಲ..!
ಹೂ ಮೇಲಿಂದ ಮೇಲೆ ಹಾಕಿದರು.
ಹೂವಂತೆ ಮಾತಾಡಿದವರು ಯಾರಿಲ್ಲ..!
ಇಟ್ಟ ಕಟ್ಟಿಗೆ
ಸುಡಲು ಹಿಂದು ಮುಂದು ನೋಡಲಿಲ್ಲ..
ಸತ್ತ ಜೀವಕ್ಕೆ ಸುಡುವ ಮಾತಿನಷ್ಟು
ನೋವು ನೀಡಲಿಲ್ಲ.!
ಏರಿ ಬಂದ ಚಟ್ಟ ನಿದ್ದೆಯಿಂದ ಏಳಿಸಲಿಲ್ಲ..
ಜೀವ ಇದ್ದಾಗ ನಿದ್ದೆಗೂ ಬಿಡಲಿಲ್ಲ.!
ಅವಳದೆಲ್ಲ ಸುಡಲಾಯಿತು.
ಚಿನ್ನವ ತೆಗೆದಿರಿಸಲಾಯಿತು.!
ಅವಳನ್ನೂ ಸುಡಲಾಯಿತು.
ನೆನಪುಗಳನ್ನು ಅಳಿಸಲಾಯಿತು..!
ಸುಟ್ಟದರ ಪ್ರಶ್ನೆ ಅಲ್ಲ.,
ಸತ್ತಾಗ ಕೇಳದನ್ನೆಲ್ಲ ಕೊಟ್ಟವರಿಗೆ
ಜೀವದಲ್ಲಿರುವಾಗ ಯಾಕೆ ಕೊಡಲಾಗಲಿಲ್ಲ…!?

✍ಯತೀಶ್ ಕಾಮಾಜೆ