ಬದಲಾಗಬೇಕು
ಬದಲಾಗಿ
ಬದಲಾವಣೆ ಜಗದ ನಿಯಮ..!

ಅಡುಗೆ ಮನೆಯ ಕುಕ್ಕರ್
ವಿಷಲ್ ಗೆ ಓಡಿ ಬರುವ
ಹೌಸ್ ವೈಫ್ ಆಗುವ ಕನಸು
ಬಿಟ್ಟು ಬಿಡಿ
ಗಡಿಯಲ್ಲಿ ಶತ್ರುವಿನ
ಗುಂಡಿಗೆಯ ಸದ್ದಡಗಿಸುವ
ವೀರ ರಾಣಿ
ಆಗಿ ಬಿಡಿ..!
ತರಕಾರಿ ವ್ಯಾಪಾರಿ ಜೊತೆ
ಚೌಕಾಸಿ ಮಾಡಿ
ಬಂದು ಬೀಗಬೇಡಿ
ಪಾರ್ಲಿಮೆಂಟ್ ನಲ್ಲಿ ಕೂತು
ವಿರೋಧ ಪಕ್ಷ
ಮಾತಾಡದಂತೆ ಮಾತಾಡಿ
ಗಂಡನಲ್ಲಿ ವಾಷಿಂಗ್ ಮಿಷನ್ ತನ್ನಿ
ಮಿಕ್ಸಿ ತನ್ನಿ
ಫ್ರಿಜ್ ತನ್ನಿ
ಎಂದೆಲ್ಲಾ ಪೂಸಿ ಒಡೆಯುತ್ತ
ಕೂರಬೇಡಿ
ಜಗತ್ತಿಗೆ ಹೊಸ
ಮಿಷನ್ ಗಳ ಪರಿಚಯ
ಮಾಡಿ ಬಿಡಿ..
ಅವಳೆಂದರೆ ಕ್ಷಮಾಧರಿತ್ರಿ
ಅವಳೆಂದರೆ ಕರುಣಾಮಯಿ
ಅವಳೆಂದರೆ ತ್ಯಾಗಮಯಿ
ಈ ಡೈಲಾಗ್ ಉಬ್ಬಿ ಹೋಗುವುದನ್ನು
ಬಿಟ್ಟುಬಿಡಿ
ಅವಳೆಂದರೆ ಶಕ್ತಿ
ಅವಳೆಂದರೆ ದುರ್ಗಿ
ಅವಳೆಂದರೆ ಕಾಳಿ
ಎನ್ನುವಂತೆ ಆಗಿ ಬಿಡಿ..!
ಆಗ ಗಾಂಧೀಜಿ
ಕಂಡ ಕನಸು
ನನಸಾಗುವುದು…!
✍ಯತೀಶ್ ಕಾಮಾಜೆ