ಪೆದ್ದು ಕಣೆ ನೀನು ಪೆದ್ದು
ಬಸ್ ಹಿಂದೆ ಹೋಡೊದು
ಗಂಡು ಮಕ್ಳಿಗೆ ಬಿಟ್ಟಿದ್ದೆಂದು
ನೀ ಓಡದೆ ಆ ಗಂಡು ಡ್ರೈವರ್
ಬಸ್ ನಿಲ್ಸೋದ್ನ ಕಾಯ್ತಿಯಲ್ವೆ
ನೀನೊಮ್ಮೆ ಓಡಿ ನೋಡು
ಪೀಟಿ ಉಷಾನು ನಿಮ್ಮವಳಲ್ವೆ

ನಕ್ಷತ್ರ ನೋಡಿ ಗಂಡನಲ್ಲಿ ಬೇಡಿ
ನಿದ್ದೆಬಿಟ್ಟು ಅತ್ತುಬಿಟ್ಟು
ಅವನ ಕೈಯಲ್ಲಿ ಚೀ ಥೂ ಎಂದು
ಅನ್ನಿಸಿ ಕೊಳ್ಳುವುದ ಬಿಟ್ಟು
ಗೋಣಿ ಹಿಡಿದು ಹೊರಟು ಬಿಡು
ಬಾನೇರಿ ನಕ್ಷತ್ರಗಳ ಲೋಕ
ಸುತ್ತಿದ
ಕಲ್ಪನಾಚಾವ್ಲಳು ನಿಮ್ಮವಳಲ್ವೆ
ಅಡುಗೆ ಮನೆಯಲ್ಲಿ ಎಷ್ಟು
ಮಾತಾಡುವೆ ಸೌಟುಗಳ ಜೊತೆ
ಒದ್ದೆ ಬಟ್ಟೆ ಯ ಜಜ್ಜಿದರು
ಕಲ್ಲಿಗೇನು ಏಟು ಬಿತ್ತೆ
ತಿಕ್ಕಿ ಮಿನುಗಿದ ಬಟ್ಟಳಲಿ
ನಿನ್ನ ಮುಖ ಬೆಳಗಿತೆ
ಮುಟ್ಟಿದ ಕಾಮಿಷ್ಟನ ನೆನೆದು ಅಳುವೆ ಮತ್ತೆ
ಎದೆ ಗುಂದದೆ ಬಡಿದು ಗೆದ್ದು
ಸೌಟು ಹಿಡಿದ ಕೈಗೆ ಬಾಕ್ಸಿಂಗ್ ಕವರ್ ಹಾಕಿಕೊಂಡ
ಮೇರಿಕೊಂ ನಿಮ್ಮವಳಲ್ವೆ
ಪೆದ್ದು ಅಳುಬುರುಕಿ ಅಂಜುಬುರುಕಿ
ಸಾಕು ನಿಲ್ಲಿಸು ನಿನ್ನ ಹಳೆ ರಾಗ
ತಾಯಿ ಅಕ್ಕ ತಂಗಿ ಮಡದಿ ಆದರೆ ಸಾಲದು
ಓಮ್ಮೆ ತಿರುಗಿ ನೋಡು ಎಷ್ಟೊಂದು ಅವತಾರಗಳಿವೆ ನಿನಗೆ
ಆ ಲಕ್ಷ್ಮಿ, ಶಾರದೆ,ಕಾಳಿ ಎಲ್ಲಾ ನಿಮ್ಮವರಲ್ವೆ
✍ಯತೀಶ್ ಕಾಮಾಜೆ