ಸಾಮಾಜಿಕ ಜಾಲತಾಣ
ತುಂಬಾ
ದೇಶ ಭಕ್ತಿ ಹರಿದಾಡಿದೆ..!

ನಾನು ಜನಸಾಮಾನ್ಯ
ಏನೂ ಮಾಡಲಾಗದು
ನನ್ನ ಕೈಯಲ್ಲಿ ದೇಶಕ್ಕಾಗಿ..!
ಮಾಡಿದರೆ ಇಷ್ಟೇ
ವಾಟ್ಸ್ ಪ್ ಸ್ಟೇಟಸ್ ನಲ್ಲಿ
ಫೇಸ್ ಬುಕ್ ವಾಲ್ನಲ್ಲಿ
ಟಿಕ್ ಟಾಕ್ ವೀಡಿಯೋಗಳಲ್ಲಿ
ಜೈ ಹಿಂದ್ ಘೋಷಣೆ
ಏಕೆಂದರೆ ನಾನು ಜನ ಸಾಮಾನ್ಯ..
ಯುದ್ಧ ಮಾಡುವ ಶಕ್ತಿ ನನಗಿಲ್ಲ..!
ನನ್ನ ದೇಶ ಭಕ್ತಿ ಏನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..
ಎಷ್ಟು ಜನ ಲೈಕ್ ಕೊಟ್ಟಿದ್ದಾರೆ
ಎಷ್ಟು ಕಾಮೆಂಟ್ ಬಂದಿದೆ
ಎಷ್ಟು ಜನ ರೀಡ್ ಮಾಡಿದ್ದಾರೆ
ಇಷ್ಟರಲ್ಲೇ ಬ್ಯುಸಿ ನಾನು..!
ಚಪ್ಪಾಳೆ ತಟ್ಟಿದ್ದೇನೆ
ನಮ್ಮ ಸೈನಿಕರು ಹೊಡೆದುರುಳಿಸಿದಾಗ..
ಕಣ್ಣೀರಿಟ್ಟಿದ್ದೇನೆ
ನಮ್ಮ ಸೈನಿಕರು
ಹುತಾತ್ಮರಾದಾಗ…!
ನೀವು ನನ್ನ ವಾಟ್ಸಾಪ್ ಸ್ಟೇಟಸ್
ನೋಡುತ್ತಿದ್ದರೆ ಗೊತ್ತಾಗುತ್ತಿತ್ತು..!
ಅದೆಷ್ಟು ದೇಶ ಪರ
ಫೋಸ್ಟ್ ಗಳನ್ನು
ವಾಟ್ಸಾಪ್ ನಲ್ಲಿ ಫಾರ್ವರ್ಡ್ ಮಾಡಿದ್ದೇನೆ
ಫೇಸ್ಬುಕ್ ನಲ್ಲಿ ಷೇರ್ ಮಾಡಿದ್ದೇನೆ
ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದ್ದೇನೆ
ಇದೆಲ್ಲಾ ದೇಶ ಭಕ್ತಿಯಿಂದ..!
ಎದೆಬಗೆದು ನೋಡಿದರೆ
ದೇಶಭಕ್ತಿ
ಕಾಣದಿರಬಹುದು
ನನ್ನದೇನಿದ್ದರೂ
ಸಾಮಾಜಿಕ ಜಾಲತಾಣದಲ್ಲಿ..!
✍ಯತೀಶ್ ಕಾಮಾಜೆ