ಕಟ್ಟಿ ಹಾಕಿ
ಕೋಪ ಹುಟ್ಟಿಸಿದ್ದು
ಅಂಕಣದಲ್ಲಿ
ಕಾದಾಡಬೇಕೆಂದು..

ನಾಲ್ಕು ದಿಕ್ಕಿಗೆ ಕಂಬ ಹಾಕಿ
ನಾಲ್ಕು ಮೂಲೆಗೆ ಹಗ್ಗ ಕಟ್ಟಿ
ಒಂದು ಅಂಕಣದ ಸೃಷ್ಟಿ ಮಾಡಿದ್ದು
ಕೋಳಿ ಜಗಳವಾಡಲು
ಕೊಬ್ಬಿ ಉಬ್ಬಿ
ರೋಷ ಹುಟ್ಟಿಸಿ
ಎದುರಾಳಿ ಜೊತೆ
ಕದನಕ್ಕೆ ಬಿಟ್ಟಾಗ
ಅರಿವಾಗಿರಲಿಲ್ಲ
ಆ ಕೋಳಿಗೆ
ಕಾಲಿಗೆ ಕಟ್ಟಿದ ಆ ಚೂರಿ
ತನ್ನ ಕಾಲಿನ ಚೂರಿ
ತನಗೆ ಚುಚ್ಚಬಹುದು
ಅದರ ಅರಿವೇ ಇರಲಿಲ್ಲ..
ಎದುರಾಳಿಯ ಮೇಲಿನ
ದ್ವೇಷಕ್ಕೆ ಕಾರಣಗಳೂ ಇಲ್ಲ..
ಕಾದಾಡಿ ಜಯಭೇರಿ
ಪಡೆದದ್ದು ಗೊತ್ತೇ ಆಗಲಿಲ್ಲ
ರೋಷ ಇಳಿದಾಗ
ದೇಹಕ್ಕಾದ ಗಾಯ
ನೋವಾಗದಿರಲಿಲ್ಲ…!
ಗೆಲ್ಲಬೇಕೆಂಬ
ಒಡೆಯನ ಮಂತ್ರ
ಅರ್ಥವೂ ಆಗಲಿಲ್ಲ..!
ಬಿಡಿ
ಅದು ಕೋಳಿ ಜಗಳ
ಮಾನವನಷ್ಟು
ದ್ವೇಷ ರೋಷ ಸ್ವಾರ್ಥ ಅದಕ್ಕಿಲ್ಲ
✍ಯತೀಶ್ ಕಾಮಾಜೆ