ಕಂಬನಿ ಸುರಿಸಿದ
ಕಾರಣಗಳು
ಒಂದಷ್ಟು ಇವೆ..
ಲೆಕ್ಕಕ್ಕೆ ಸಿಗದಷ್ಟು…!

ಆ ಬಿಗ್ ಬಜಾರ್
ಸಿಟಿ ಸೆಂಟರ್ ನ
ದ್ವಾರಪಾಲಕನಿಗೂ ನಾವು ಪರಿಚಯ
ಆಗಾಗ ಹೆಗಲ ಮೇಲೆ ಕೈ ಹಾಕಿ
ಹೋದ ದಿನಗಳಿಗೆ
ಲೆಕ್ಕ ಎಲ್ಲಿ ಹೇಳು..?
ದಿನ ನೋಡಿದವನಿಗೆ ಪರಚಯವಾಗದಿರುವುದೇ..?
ಇಂದು ನಾ ಒಬ್ಬನೇ ಹೋದಾಗ
ನಿನ್ನ ಹುಡುಕುತ್ತಿದ್ದಾನೆ..!
ನೆನೆದು ಕಣ್ಣೀರು
ಸುರಿಸದಿರಲಿ ಹೇಗೆ ಹೇಳು..?
ಆ ಕಡಲ ತೀರದಲ್ಲಿ
ಸಂಜೆಯ ಹೊತ್ತಲ್ಲಿ
ನಾ ಮರಳು ರಾಶಿಯಲ್ಲಿ
ಕೂತು
ನೀ ಕಡಲ ಅಲೆಯಲ್ಲಿ ಆಡುವುದ ನೋಡಿ
ನಗುತ್ತಿದ್ದೆ
ನೀನೊಂದು ಮಗುವಂತೆ ಕಾಣುತ್ತಿದ್ದೆ
ಬೊಗಸೆ ನೀರು ತಂದು
ನನ್ನ ಮುಖಕ್ಕೆ ಚೆಲ್ಲುತ್ತಿದ್ದೆ..!
ಇಂದು ನಾ ಒಬ್ಬಂಟಿಯಾಗಿ ದಡದಲ್ಲಿ ನಿಂತಾಗ
ಕಡಲಲಿ ನಿನ್ನ ಮೊಗದ ಚಿತ್ರ ತೇಲಿ ಬಂದಂತಾಗುತ್ತಿದೆ..!
ಕಣ್ಣೀರು ಹಾಗೆ ಕೆನ್ನೆಯಲಿ ಜಾರುತ್ತಿದೆ..!
ಉಳಿದಿರುವುದು
ಬರಿ ನೆನಪು ಕಣೇ
ಮತ್ತೆ ಮತ್ತೆ ಕಾಡುವ ನೆನಪು
“ಪ್ರೀತಿ ಎಂದರೆ ಮೋಸ”
ಎನ್ನುವ ಅರ್ಥಕ್ಕೆ ಬಂದುಬಿಟ್ಟೇ ಕಣೇ..
ಈ ಕಣ್ಣೀರಿಗೆ
ಕಾರಣ ನೀನು ಎಂದು ಹೇಳುವುದಿಲ್ಲ..
ಇದಕ್ಕೆಲ್ಲ ಕಾರಣ ಪ್ರೀತಿ..!
ಪ್ರೀತಿ ಎಂದರೆ ಕಣ್ಣೀರು…
ಕಣ್ಣೀರು ಎಂದರೆ ಪ್ರೀತಿ..!
✍ ಯತೀಶ್ ಕಾಮಾಜೆ