ಸಮಯದ ಹಿಂದೆ
ಓಡುವ
ಕಾಲದ ಸುತ್ತ…!?
ಅಲಾರಾಮ್ ಇಲ್ಲದ ಕಾಲವದು..
ಸೂರ್ಯನ ಚಲನೆಯನ್ನೇ ನೋಡಿ
ಸಮಯ ಹೇಳುತ್ತಿದ್ದರು.
ಕೋಳಿ ಕೂಗಿದಾಗಲೇ ಮುಂಜಾನೆ!
ಮುಂಜಾನೆ ಎದ್ದು
ಕೈ ಕೆಸರು ಮಾಡಿ
ತೃಪ್ತಿಕರವಾಗಿ ಉಣ್ಣುತ್ತಿದ್ದರು..
ನೆಮ್ಮದಿಯಾಗಿ ನಿದ್ದೆ ಮಾಡ್ತಿದ್ರು..
ಜೊತೆಯಾಗಿ ಬಾಳುತ್ತಿದ್ದರು.,
ಸಂಬಂಧಗಳಿಗೊಂದಿಷ್ಟು ಸಮಯ ಕೊಡ್ತಿದ್ರು..
ನಾನು ಅನ್ನುವುದಕ್ಕಿಂತ ಹೆಚ್ಚಾಗಿ ನಾವು ಅಂದವರು..!
ಬೆಳಗ್ಗೆ ಎದ್ಹೇಳಲು ಅಲಾರಾಮ್
ಇಡುವ ಕಾಲವಿದು.
ಎಲ್ಲದಕ್ಕೂ ಟೈಮಿಂಗ್ಸ್ ಇದೆ.,
ಊಟಕ್ಕೆ ,ನಿದ್ದೆಗೆ ,ಆಟಕ್ಕೆ, ಮಾತಿಗೆ,ಪ್ರೀತಿಗೆ..!
ಟೈಮ್ ಸೆನ್ಸ್ ಇಲ್ಲದವನು ಮನುಷ್ಯನಾಗಲ್ಲ!
ಒಮ್ಮೆ ದುಡ್ಡಿನ ಹಿಂದೆ
ಇನ್ನೊಮ್ಮೆ ನೆಮ್ಮದಿಯ ಹಿಂದೆ
ಓಡಿ ಓಡಿ ಹಿಂತಿರುಗಿದಾಗ
ಟೈಮ್ ಮಾತ್ರ ಕೈ ಕೊಟ್ಟಿರುತ್ತೆ..!
ರಾತ್ರಿಯನ್ನು ಹಗಲು ಮಾಡಿದ ಕಾಲದಲ್ಲಿ
ನಿದ್ದೆಯ ಟೈಮೇ ಗೊತ್ತಿಲ್ಲ,
ಊಟಕ್ಕೆ ಟೈಮೇ ಇಲ್ಲ.
ಬ್ಯಾಂಕ್ ತುಂಬಾ ಹಣ,
ಮೈ ತುಂಬಾ ಬಂಗಾರ,
ಮನೆ ತುಂಬಾ ಮೌನ….!
ಹೌದು ಮಾತುಗಳು ಹರಟೆಗಳು
ಮಾಡುವವರು
ನಾನ್‌ಸೆನ್ಸ್ ಪಿಪಲ್ ಗಳು
ಟೈಮ್ ಸೆನ್ಸ್ ಜೀವನದಲ್ಲಿ ಅತೀ ಮುಖ್ಯ
ಆದರೂ ಟೈಮ್ ಇಲ್ಲ ಯಾರಲ್ಲೂ
ಸೂರ್ಯ ಚಂದ್ರನಷ್ಟು
ಟೈಮ್ ಸೆನ್ಸ್ ಯಾರಿಗಿಲ್ಲ…!

✍ಯತೀಶ್ ಕಾಮಾಜೆ