ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ
ಕೊರಗುತ ಮರಗುತ
ನಮ್ಮನೆ ನಾವು ಶಪಿಸುವ ಕಾಲ ದೂರಿಲ್ಲ
ಪರಿತಪಿಸುವ ಕಾಲ ದೂರಿಲ್ಲ.

ಸರ್ಕಾರಿ ನೌಕರ ನಾವಲ್ಲ
ಸೇವಾ ಭದ್ರತೆ ನಮಗಿಲ್ಲ
ಪಿಂಚಣಿಯಂತೂ ಪಡೆಯಲ್ಲ
ಗೊತ್ತಿದ್ದರೂ ಕೆಲಸ ಬಿಟ್ಟಿಲ್ಲ
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ
ಕನಿಷ್ಟ ಸಂಬಳ ನಮಗಿಲ್ಲ
ನಿರ್ದಿಷ್ಟ ಸಮಯ ನಮಗಿಲ್ಲ
ಹಗಲೂ ರಾತ್ರಿ ದುಡಿಯುವ ನಮಗೆ
ಶಹಬ್ಬಾಸ ಅನ್ನುವ ಜನರಿಲ್ಲ
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ
ಪಂಚಾಯಿತಿ ಕೆಲಸ ದಿನವೆಲ್ಲ
ರಾತ್ರಿಯಾದರೂ ಸುಖವಿಲ್ಲ
ನಿಗದಿತ ಸಮಯಕೆ ಸಂಬಳ ಸಿಗದೆ, ಸಾಲಗಾರರು ನಾವೆಲ್ಲ..
ಸಾಲಗಾರರು ನಾವೆಲ್ಲ.
ಬೈಗುಳದಿಂದಲೆ ದಿನಕಳೆಯುವ ನಮಗೆ
ಹೊಗಳಿಗೆ ಮಾತು ಹಿಡಸಲ್ಲ
ಕಾರಣ ಹೊಗುಳುವ ಜನವೆ ಇಲ್ವಲ್ಲ.
ಕೂಡಿ ನಡೆದರೆ ಬಾಳು ಹಸನ
ಕೂಡುವ ಜನರೂ ನಾವಲ್ಲ
ಕೂಡಿದರೂ, ಕೆಲವೆ ಕ್ಷಣದಲಿ ಬೇರೆಲ್ಲ.ನಮಗೆ ಕೂಡಿ ನಡೆಯುವ ಗುಣವಿಲ್ಲ…
ಕೊರಗುವ ಕಾಲ ದೂರಿಲ್ಲ
ಮರಗುವ ಕಾಲ ದೂರಿಲ್ಲ.
*ರಚನೆ: ಸುರೇಶ ಅಳ್ಳಿಮೋರೆ*
*Sponsored By: KRGPNSS_RDPR*