Tuesday, July 1, 2025

*ಸರಸಿಗೆ ಮನವಿ*

ಹರೆಯವ ಕರಗಿಸಿ
ಮರಮರ ಮರುಗಿಸಿ
ಸಾಗಿದೆ ಏತಕೆ ನನ್ನೊಲವೆ?
ಮೈಯನು ಕಾಯಿಸಿ
ಮನವನು ಬೇಯಿಸಿ
ಬೀಗಿದೆ ತೋಯಿಸಿ ಓ ಚೆಲುವೆ!

ತಳಮಳವಿಲ್ಲದ
ಕಳವಳದೈಸಿರಿ
ಚಿಗುರಿಸಿ ಎರಗಿದೆ ಇಂಪಿನಲಿ!
ಒಲವನು ಕಾಣದೆ
ನೆಲವನು ನೋಡದೆ
ನಡೆದೆ ನೀ ಏತಕೆ ಬಿಂಕದಲಿ?

ಗಾಳಿಯ ತೇಲಿಸಿ
ಹಾಳೆಯ ಹರವಿದೆ
ಬರೆಯದ ಲೇಖನಿ ಕೈಗಿರಿಸಿ!
ಹೊಸ ಬೆಳಕಿನ
ಹೊಂಗಿರಣವ ಸೂಸಿದೆ
ನೋಡುತ ನಿಂದಿಹೆ ನನ್ನರಸಿ!

ಕಾಡಿದ ಎದೆಯಲಿ
ಮೂಡಿದ ಕವನವ
ಕಳಿಸಿಹೆ ನಿನ್ನನೆ ನಾ ಬಯಸಿ!
ಸೊಗಸಿನ ಸರಸಕೆ
ಕಾದಿದೆ ಮೈಮನ
ನಲಿದು ಉಲಿದು ಬಿಡು ಮನತಣಿಸಿ

#ನೀ. ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More from the blog

B.C. Road : ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನ..

ಬಂಟ್ವಾಳ: ಕಾನೂನು ಸುವ್ಯವಸ್ಥೆಯನ್ನು ಭದ್ರಗೊಳಿಸುವ ನಿಟ್ಟಿನಲ್ಲಿ ಬಂಟ್ವಾಳಕ್ಕೆ ಆಗಮಿಸಿದ್ದ ವಿಶೇಷ ಕಾರ್ಯಪಡೆಯಿಂದ ಕೈಕಂಬದ ಶಾಂತಿ ಅಂಗಡಿಯಿಂದ ಬಿಸಿರೋಡುವರೆಗೆ ಪಥಸಂಚಲನ ನಡೆಯಿತು. ವಿಶೇಷ ಕಾರ್ಯಪಡೆ ಜೊತೆ ಬಂಟ್ವಾಳ ನಗರ ಪೋಲೀಸ್ ಠಾಣಾ ಪೋಲೀಸ್ ಇನ್ಸ್ ಪೆಕ್ಟರ್...

ಅಡಿಕೆ ವ್ಯಾಪಾರಿಯಿಂದ ವಂಚನೆ ಪ್ರಕರಣ : ರೈತರಿಂದ ಹೋರಾಟದ ಎಚ್ಚರಿಕೆ..

ಬಂಟ್ವಾಳ: ಅಡಿಕೆ ವ್ಯಾಪಾರಿಯೋರ್ವ ಕೃಷಿಕರಿಗೆ ಕೋಟ್ಯಾಂತರ ‌ರೂಪಾಯಿ ವಂಚಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ ಅಶೋಕ್ ಶೆಟ್ಟಿ ಸರಪಾಡಿ ನೇತೃತ್ವದಲ್ಲಿ ರೈತರು ತಹಶೀಲ್ದಾರ್, ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲು ಮುಂದಾಗಿದ್ದಾರೆ. ರಂಗೋಲಿಯಲ್ಲಿ ನಡೆದ...

ಕರಾವಳಿ, ಮಲೆನಾಡಿನಲ್ಲಿ ಜು. 3ರಿಂದ ಮಳೆ ಮತ್ತಷ್ಟು ಬಿರುಸು : ಯೆಲ್ಲೋ ಅಲರ್ಟ್ ಘೋಷಣೆ..

ಮಂಗಳೂರು : ರಾಜ್ಯದ ಕೆಲವು ಕಡೆಗಳಲ್ಲಿ ವರುಣನ ಆರ್ಭಟ ಕಡಿಮೆಯಾಗಿದೆ. ಆದರೆ ಕರಾವಳಿ, ಮಲೆನಾಡು ಹಾಗೂ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಜುಲೈ 3 ರಿಂದ ಮಳೆ ಬಿರುಸುಗೊಳ್ಳುವ ಸಾಧ್ಯತೆ ಇದೆ ಎಂದು...

ರಕ್ತದ ಕಾನ್ಸರ್‌ಗೆ ತುತ್ತಾದ ಮಗುವಿಗೆ ಯುವವಾಹಿನಿ ಬಂಟ್ವಾಳ ಆಸರೆ..

ಬಂಟ್ವಾಳ : ರಕ್ತದ ಕಾನ್ಸರ್ ಖಾಯಿಲೆಯಿಂದ ಬಳಲುತ್ತಿರುವ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ಕುಟ್ಟಿಕಳ ನಿವಾಸಿಯಾದ ಹಿರಣ್ಯಾಕ್ಷ ಸೌಮ್ಯ ದಂಪತಿಗಳ ಮಗಳಾದ ಮನಶ್ವಿ (5 ವರ್ಷ) ಮಗುವಿನ ಹೆಚ್ಚಿನ ಚಿಕಿತ್ಸೆಗಾಗಿ ಯುವವಾಹಿನಿ ಬಂಟ್ವಾಳ...