Sunday, January 25, 2026

*ಗಾಳಿಯ ಗರ್ವಭಂಗ*

-ಮಕ್ಕಳ ಕಥನ ಕವನ-

ರಸ್ತೆಯಲ್ಲಿ ಹೊರಟನೋರ್ವ
ಹೊಲದಿ ದುಡಿಯಲು
ಕಂಬಳಿಯ ಹೊದ್ದು ನಡೆದ
ಚಳಿಯ ತಡೆಯಲು

ಅವನ ಕಂಡ ಗಾಳಿ ಮನದಿ
ತವಕಗೊಂಡಿತು
ಸೂರ್ಯನ ಬಳಿ ತನ್ನೆದೆಯ
ಮಾತು ಹೇಳಿತು

ಬೆಳಕು ಕೊಡುವೆ ಬೆಂಕಿ ಕೊಡುವೆ
ಜಗವ ಕಾಯುವೆ
ಅದಕೆ ನೀನು ಎಲ್ಲ ಸಹಿಸಿ
ಮನದಿ ಬೇಯುವೆ

ನಾನು ನಿನಗೆ ಕಡಿಮೆ ಏನು?
ಬಿಡದೆ ಓಡುವೆ
ನೀನು ಹೆಚ್ಚೊ ನಾನು ಹೆಚ್ಚೊ
ಬಾರೊ ನೋಡುವೆ

ಕಂಬಳಿ ಹೊದ್ದವನು ಅದನು
ತೆಗೆದು ಎಸೆಯಲಿ
ಹಾಗೆ ಮಾಡಿದವರಿಗೆ ತಿಳಿ
ಗೆಲುವು ಬಳಿಯಲಿ

ಮೊದಲು ನಾನೆ ನನ್ನ ಶಕ್ತಿ
ನಿನಗೆ ತೋರುವೆ
ಆಗದಿರಲು ನೀನೆ ಮಾಡು
ಎಂದು ಕೋರುವೆ

ಗಾಳಿ ತನ್ನ ಬಲವನೆಲ್ಲ
ಹಾಕಿ ನೋಡಿತು
ಕಂಬಳಿ ಹೊದ್ದವನ ಮೇಲೆ
ಭರದಿ ಓಡಿತು

ಬೀಸಿದಷ್ಟು ಬಿಗಿಯಾಗಿಯವ
ಕಚ್ಚಿ ಹಿಡಿದನು
ಕಂಬಳಿಯ ಬಿಡದೆ ಬೀಸೊ
ಗಾಳಿ ತಡೆದನು

ಸೋತ ಗಾಳಿ ಸಪ್ಪೆ ಮೋರೆ
ಯೊಡನೆ ಬಂದಿತು
ತೋರು ಸೂರ್ಯ ನಿನ್ನ ಶೌರ್ಯ
ಎಂದು ನಿಂದಿತು

ಸೂರ್ಯ ಪ್ರಖರ ಬಿಸಿಲು ಸುರಿಸೆ
ಬಡವ ಬಳಲಿದ
ಧಗೆಯು ತಡೆಯದಾಗೆ
ಒಳಗೆ ತಾನು ತೊಳಲಿದ

ಬಿಸಿಲು ಹೆಚ್ಚಿ ಬೆವರು ಹರಿಯೆ
ಅವನು ಬೆದರಿದ
ಹೊದ್ದುಕೊಂಡ ಕಂಬಳಿಯ
ಒಡನೆ ಒದರಿದ

ಗಾಳಿ ತನ್ನ ಸೋಲನೊಪ್ಪಿ
ಶುಭವ ಹೇಳಿತು
ಸೂರ್ಯನೆದುರು ತಲೆಯ ಬಾಗಿ
ಕ್ಷಮೆಯ ಕೇಳಿತು

 

#ನೀ.ಶ್ರೀಶೈಲ ಹುಲ್ಲೂರು

More from the blog

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...

ವಿಟ್ಲ ಜಾತ್ರೋತ್ಸವದಲ್ಲಿ ಮನರಂಜಿಸಿದ ವಿಟ್ಲೋತ್ಸವ..

ವಿಟ್ಲ: ವಿಟ್ಲ ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯುತ್ತಿರುವ ಕಾಲಾವಧಿ ಜಾತ್ರೋತ್ಸವದಲ್ಲಿ ಮಂಗಳವಾರ ರಾತ್ರಿ ದೇವರ ಹೂ ತೇರು ಉತ್ಸವ ನಡೆಯಿತು. ವಿಆರ್ ಸಿ ವಿಟ್ಲ ಇದರ ಆಶ್ರಯದಲ್ಲಿ ರಮಾನಾಥ ವಿಟ್ಲ ಸಾರಥ್ಯದಲ್ಲಿ 33...

ಮಾಣಿ : ಸ್ವಚ್ಛ ಗ್ರಾಮ ಅಭಿಯಾನ ಕಾರ್ಯಕ್ರಮ..

ಬಂಟ್ವಾಳ : ಮಾಣಿ ಗ್ರಾಮ ಪಂಚಾಯತ್, ಜನ ಶಿಕ್ಷಣ ಟ್ರಸ್ಟ್, ಮಹಿಳಾ ಸಾಂತ್ವನ ಕೇಂದ್ರ ಬಂಟ್ವಾಳ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಾಣಿಕ್ಯ ಸಂಜೀವಿನಿ ಒಕ್ಕೂಟ ಹಾಗೂ ಸಂಘ ಸಂಸ್ಥೆಗಳ ಜಂಟಿ...