Thursday, June 26, 2025

*ಹನ್ನೆರಡು ಜನ ಬುದ್ಧಿವಂತರು*

ಪೆದ್ದ ಗೆಳೆಯರು ಸೇರಿದರು
ಪ್ರವಾಸ ಯೋಜನೆ ಮಾಡಿದರು
ಎಂಕ ತಿಂಮ ಕಾಶೀಮನು ಸೇರಿ
ಹನ್ನೆರಡೂ ಜನ ಕೂಡಿದರು

ಮಂದಿರ ಮಸೀದಿ ಚರ್ಚನು ಸುತ್ತಿ
ನದಿ ಸಾಗರದಿ ಈಜಿದರು
ಅಣೆಕಟ್ಟು ಮೃಗಾಲಯ ತಿರುಗಿ
ಖುಷಿಯಲಿ ಎಲ್ಲ ತೇಲಿದರು

ಪ್ರವಾಸ ಮುಗಿಸಿ ಹೊರಟರು ಎಲ್ಲ
ಹಾಡುತ ಪಾಡುತ ಊರ ಕಡೆ
ಎಂಕನ ತಲೆಯಲಿ ಏನೋ ಹೊಳೆಯಿತು
‘ಎಣಿಸದೆ ನಾನು ನಿಮ್ಮ ಬಿಡೆ’

ಎಣಿಸಿದ ಎಂಕನು ಅಳತೊಡಗಿದನು
ನಾವಿರುವುದು ಹನ್ನೊಂದೆ ಜನ
ತಾ ಎಣಿಸುವೆನು ಎಂದಾ ತಿಂಮನು
ಎಣಿಸಿ ಹೇಳಿದ ಹನ್ನೊಂದೆ ಜನ

ಅವನೂ ಎಣಿಸಿದ ಇವನೂ ಎಣಿಸಿದ
ಎಲ್ಲರೂ ಎಣಿಸಿ ನೋಡಿದರು
ಹನ್ನೆರಡಲ್ಲ ಹನ್ನೊಂದಾಯಿತು
ಯಾರೇ ಎಣಿಸಿ ನೋಡಿದರು

ಎಲ್ಲರೂ ಸೇರಿ ಅಳತೊಡಗಿದರು
ಕಳೆದ ಗೆಳೆಯನ ಅಗಲಿಕೆಗೆ
ಇವರನು ನೋಡಿದ ಹಿರಿಯನು ಬಂದನು
ಕಾರಣ ಕೇಳಿದ ಅಳುವಿಕೆಗೆ

ಬಂದ ಗೆಳೆಯರಲಿ ಒಬ್ಬನೆ ಇಲ್ಲ
ಹೇಳಿದರೆಲ್ಲ ತಮ್ಮ ಕತೆ
ಹಿರಿಯನು ಸಾಲಲಿ ನಿಲಿಸಿದ ಅವರನು
ಎಣಿಸುವೆನಿರಿ ನಾ ಬೇಡ ವ್ಯಥೆ

ಎಣಿಸಿ ನೋಡಲು ಹನ್ನೆರಡೂ ಜನ
ಇರುವುದ ತಿಳಿದು ಹೇಳಿದನು
ನೀವೇ ಎಣಿಸಿರಿ ಒಂದು.. ಎರಡು..
ಬರುವುದೆ ನಿಮಗೆ? ಕೇಳಿದನು

ಎಣಿಸಲು ತಾವೇ ಹನ್ನೆರಡೂ ಜನ
ಇರುವುದ ಕಂಡು ಹಿಗ್ಗಿದರು
ತಂಮನು. ಬಿಟ್ಟೇ ಎಣಿಸಿದ ತಪ್ಪಿಗೆ
ನಾಚಿಕೆಯಿಂದ ಕುಗ್ಗಿದರು

 

#ನೀ.ಶ್ರೀಶೈಲ ಹುಲ್ಲೂರು

More from the blog

ವಿಟ್ಲ: ಪ್ಲಾಸ್ಟಿಕ್ ಜಾಗೃತಿ ಕಾರ್ಯಕ್ರಮ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಸಲುವಾಗಿ ವಿಟ್ಲ ವರ್ತಕರ ಸಂಘದಿಂದ ತಯಾರಿಸಲಾದ ಪ್ಲಾಸ್ಟಿಕ್ ನಿಷೇಧದ ಸ್ಟಿಕ್ಕರ್ ನ್ನು ವರ್ತಕರ ಸಂಘದ ಸಹಕಾರದೊಂದಿಗೆ ವಿಟ್ಲ ಪೇಟೆಯ...

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...