Thursday, June 26, 2025

*ಜೇಡನ ಸಾಹಸ*

ಪಕ್ಕದ ರಾಜನ ದಾಳಿಗೆ ನಲುಗಿ
ತಡವರಿಸಿದನು ರವಿತೇಜ
ದುಷ್ಟ ರಾಜನ ಉಪಟಳ ಸಹಿಸದೆ
ಕಾಡಲಿ ಅವಿತನು ಮಹಾರಾಜ

ಸೈನ್ಯವು ಸಣ್ಣದು ರಾಜ್ಯವು ಸಣ್ಣದು
ಸೋತು ಸೇರಿದ ಗವಿಯನ್ನು
ಹೇಗಾದರು ಸರಿ ಸೋಲಿಸಬೇಕು
ಕೊರೆಯಿತು ಚಿಂತೆಯು ತಲೆಯನ್ನು

ಇಂತಿರೆ ಗವಿಯಲಿ ಜೇಡವು ಒಂದು
ಬಲೆಯನು ಹೆಣೆಯುತ ನಡೆದಿತ್ತು
ಬಲೆಯಾ ಎಳೆಯನು ಏರುತ ಜಾರುತ
ಸರ್ರನೇ ಕೆಳಗೇ ಬರುತಿತ್ತು

ಛಲವನು ಬಿಡದೇ ಹೊರಟಿತು ಜೇಡವು
ತಲುಪಿತು ತನ್ನಯ ಗುರಿಯನ್ನು
ನೋಡುತ ಕುಳಿತಿಹ ರಾಜನು ಅಂದನು
ಪಡೆದೇ ಪಡೆಯುವೆ ಜಯವನ್ನು

ಸಣ್ಣಯ ಹುಳುವಿದು ಬಿದ್ದರೂ ಏರಿತು
ಸೋತ ನನಗಿದುವೆ ಹೊಸ ಪಾಠ
ಏನಾದರು ಸರಿ ಸೈನ್ಯ ಸಂಘಟಿಸಿ
ಬಿಡದೆ ಸಾಧಿಸುವೆ ನನ್ನ ಹಠ

ಪಕ್ಕದಲಿರುವ ರಾಜರ ಸೇರಿಸಿ
ಕಟ್ಟಿದನೊಂದು ದೊಡ್ಡ ಪಡೆ
ದುಷ್ಟ ರಾಜನ ಸೋಲಿಸಿ ಹಿಗ್ಗಿದ
ವಿಜಯ ದುಂದುಭಿ ಎಲ್ಲ ಕಡೆ

ವಿಫಲರಾದರೂ ಬಿಡದಿರಿ ಮಕ್ಕಳೆ
ನೋಟವು ಇರಲಿ ಗೆಲುವಿನೆಡೆ
ಸೋಲಿಗೆ ತಪ್ಪದೆ ಹೊಡೆಯಿರಿ ಸೆಡ್ಡು
ನುಗ್ಗಿರಿ ಸಾಗಿಸಿ ನಲಿವಿನೆಡೆ

 

#ನೀ.ಶ್ರೀಶೈಲ ಹುಲ್ಲೂರು

More from the blog

Railway – ರೈಲು ಪ್ರಯಾಣಿಕರಿಗೆ ದರ ಏರಿಕೆ ಬಿಸಿ.. ಜುಲೈ 1ರಿಂದ ಟಿಕೆಟ್ ದರ ಹೆಚ್ಚಳ!

ಭಾರತೀಯ ರೈಲ್ವೆ ಪ್ರಯಾಣ ದರವನ್ನು ಹೆಚ್ಚಿಸಲು ಸಿದ್ಧವಾಗಿದ್ದು, ಜುಲೈ 1 ರಿಂದ ಜಾರಿಗೆ ಬರಲಿದೆ ಎಂದು ವರದಿಯಾಗಿದೆ. ಮೂಲಗಳ ಪ್ರಕಾರ, ನಾನ್-AC ಮೇಲ್/ಎಕ್ಸ್‌ಪ್ರೆಸ್ ರೈಲುಗಳ ದರವು ಪ್ರತಿ ಕಿಲೋಮೀಟರ್‌ಗೆ 1 ಪೈಸೆ ಹೆಚ್ಚಾಗಲಿದೆ. AC...

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...