Tuesday, February 3, 2026

ಹನಿ ಮಿಡಿತ

ಬೆನ್ನಿಗಂಟಿದ ಕೊಳೆಯ ತಿರುತಿರುಗಿ
ತಿಕ್ಕೋದೇ ಆಯ್ತು ! ನೋಡಿದವರೆಲ್ಲ ಹೇಳಿದರೂ ನಂಬಲಾಗುತ್ತಿಲ್ಲ!
ಇನ್ನೂ
ಇದೆಯಂತೆ ಕೊಳೆ!
*****
ಕಾಣುವ ತವಕವ
ಕದಿವ ಮನಕದಾರು
ಮೂಗುದಾರ ಹಾಕುವರು?
ಸಿಗುವ ಸುಖವ
ತೂರುವ ತನುವಿಗದಾರು
ಬಿಡದೆ ತೇಕುವರು?
*****
ಅಡ್ಡಡ್ಡ ಬರುವವರನೆಲ್ಲ ಉದ್ದುದ್ದ ಸೀಳುವ ತವಕ!
ತಾನೇ ಅಡ್ಡ ಬಂದಾಗ ಉದ್ದುದ್ದ ಸೀಳಬೇಕೆನ್ನುವವರ ನೋಡಿ ಕುಹಕ!
*****
ಅವನ ಇರಿಯಲು
ತೆಗೆದುಕೊಂಡ ಚೂರಿ
ತನ್ನೆಡೆಗೇ ದುರುಗುಟ್ಟಿ
ನೋಡಿದಾಗ
ಉದಯಿಸಿತು ಪಲಾಯನವಾದ!
*****
ಕಾಡುವ ಮನದ
ಹಿಂದೆ ಅವಿತ
ಮೋಡಗಳ ಲೆಕ್ಕ ಹಾಕುತಿರುವೆ
*****
ಭರವಸೆಯ ಬೆಳಕೊಂದು
ಉಷೆಯ ಕಿರಣದಲಿಹುದು
ಅರಿತ ಮನಸ ಮಾತಿಗೆ
ಗೆಲುವು ಜಗದೊಳಿಹುದು
*****
ಅವನ ಕೈ
ಇವನ ಕಿಸೇದಾಗ ಇವನ ಕೈ
ಅವನ ಕಿಸೇದಾಗ ! ಓಟ್ ಹಾಕೋ
ನಮ್ಮಜನ ಮಾತ್ರ ಯಾವಾಗಲೂ
ನಿಶೇದಾಗ!
*****
ನೀ ಬಿತ್ತಿದ
ಬೀಜದತ್ತಲೇ
ಎಲ್ಲರ ಬೊಟ್ಟು!
ನಿರುಪದ್ರವಿ ಈ
ಬುವಿಯ ಮೇಲೆ
ನಿನಗೇಕೆ ಸಿಟ್ಟು?

*****
ತೆರೆಗಳು
ಉಕ್ಕುವಾಗಲೆಲ್ಲ
ತೆರೆದುಕೊಂಡು
ತೆಕ್ಕೆಗರೆವ ಅಂಬುಧಿಯ
ಆಳದ ಬೆಂಕಿಯ
ಅಳೆದವರುಂಟೆ?
*****
ಬೆತ್ತಲೆ ಜಗಕೆ
ಕತ್ತಲೆಯೇ ಬೇಕು!
ಕತ್ತಲೆ ಬೆಳಕಿನ
ಕತ್ತೊತ್ತಲೇ ಬೇಕು!!

 

#ನೀ.ಶ್ರೀಶೈಲ ಹುಲ್ಲೂರು
ಮಂದಹಾಸ ಬಸವೇಶ್ವರ ವೃತ್ತ
ಜಮಖಂಡಿ – 587301

More from the blog

ಸಂಗಬೆಟ್ಟು ಗ್ರಾ.ಪಂ ವಿಶೇಷ ಗ್ರಾಮ ಸಭೆ : ವಿಬಿ-ಜಿ ರಾಮ್ ಜಿ ಯೋಜನೆ ಅನುಷ್ಠಾನಕ್ಕೆ ತೀರ್ಮಾನ 

ಬಂಟ್ವಾಳ : ಕೇಂದ್ರ ಸರಕಾರವು ಹೊಸದಾಗಿ ಜಾರಿಗೆ ತಂದಿರುವ ವಿಬಿ-ಜಿ ರಾಮ್ ಜಿ ("ವಿಕಸಿತ್ ಭಾರತ್ "ಗ್ಯಾರಂಟಿ ಯೋಜಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ್) ಯೋಜನೆಯು ಒಂದು ಅತ್ಯುತ್ತಮ ಯೋಜನೆಯಾಗಿದ್ದು, ಇದರಲ್ಲಿನ ಕೆಲವೊಂದು...

ಸೂರಿಕುಮೇರು : ರಾಷ್ಟ್ರೀಯ ಹೆದ್ದಾರಿಯಲ್ಲಿ ಡಿವೈಡರ್ ಹತ್ತಿ ನಿಂತ ಸರಕಾರಿ ಬಸ್

ಮಾಣಿ : ಇಲ್ಲಿನ ಸೂರಿಕುಮೇರು ರಾಜ್ ಕಮಲ್ ಹಾಲ್ ಸಮೀಪ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಸರಕಾರಿ ಬಸ್ ಡಿವೈಡರ್ ಹತ್ತಿ ನಿಂತ ಘಟನೆ ಸೋಮವಾರ ಬೆಳಗ್ಗಿನ ಜಾವ ನಡೆದಿದೆ. ಘಟನೆಯಿಂದ ಬಸ್‌ಗೆ...

ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ – ಅಶೋಕ ಕುಮಾರ್ ರಾಜ್ಯ ಮಟ್ಟಕ್ಕೆ ಆಯ್ಕೆ..

ಬಂಟ್ವಾಳ : ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಮಂಗಳೂರು ಮಹಾನಗರ ಪಾಲಿಕೆ ಹಾಗೂ ಕರ್ನಾಟಕ ಸರಕಾರಿ ನೌಕರ ಸಂಘ, ದಕ್ಷಿಣ...

ಲಕ್ಷ್ಮೀ ಪ್ರಸಾದ್ ಬೊಟ್ಯಾಡಿ ವಿರುದ್ಧ FIR

  ಇತ್ತೀಚೆಗೆ ಪುತ್ತೂರು ವಿಧಾನಸಭಾ ಕ್ಷೇತ್ರದ ಭವಿಷ್ಯತ ಅಭ್ಯರ್ಥಿಯಾಗಿ ಹೆಸರು ಮುನ್ನೆಲೆಗೆ ಬಂದಿದ್ದ ಲಕ್ಷ್ಮಿ ಪ್ರಸಾದ್ ಬೊಟ್ಯಾಡಿ ವಿರುದ್ಧ FIR ದಾಖಲಾಗಿರುವುದು ಪುತ್ತೂರಿನ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಜ.21 ರಂದು ಹಿಂದೂ ಮುಖಂಡ...