ಹಾಡು ಮುಗಿಸಿದ
ನಾಡ ದೇವರೆ
ನಡೆದಿರಿ ನೀವೆಲ್ಲಿಗೆ?
ಮರಳಿ ಬಾರದ
ದಾರಿ ತೊರೆದು
ಬೇಗ ಬನ್ನಿ ನೀವಿಲ್ಲಿಗೆ!

ಎಳೆಯ ಮಕ್ಕಳ
ಹಸುವಿನಂದದಿ ಉಣಿಸಿ
ಪೊರೆದಿರಿ ಮಮತೆಯ!
ಮೇಲು ಕೀಳಿನ
ಭೇದ ಭಾವವ ಅಳಿಸಿ
ಮೆರೆದಿರಿ ಸಮತೆಯ!
ಸಿದ್ಧಗಂಗೆಯಲಿ
ಜ್ಞಾನಗಂಗೆಯನು
ಬಿಡದೆ ಹರಿಸಿ ತಣಿದಿರಿ!
ಕಾಲನೋಟಕೆ
ತಡೆಯ ಹಾಕದೆ
ಏಕೆ ಹೀಗೆ ಮಣಿದಿರಿ?
ತಿಂದು ತೇಗುವ
ತರಲೆ ತಲೆಗಳ
ನಡುವೆ ಅಡಗಿದೆ ಕತ್ತಲು!
ಬೆಳಕ ತೋರಲು
ಮರಳಿ ಬನ್ನಿರಿ
ಹಚ್ಚಿ ಜ್ಯೋತಿಯ ಸುತ್ತಲೂ!
#ನೀ.ಶ್ರೀಶೈಲ ಹುಲ್ಲೂರು