ಹಚ್ಚ ಹಸುರಿನ ಗಿಡದೆ,
ಸಂತಸದಿಂದ ಬೆಳೆದಳೀ ಮಲ್ಲಿಗೇ,
ದುಂಬಿಯ ಕೂಗಿ ಕರೆದಿಹಳಾಕೆ
ನವ ವಸಂತನ ಆಗಮನಕೆ,

ಏಳು ಸುತ್ತಿನ ರೇಖುಗಳಲಿ
ಮರಳಿ ಅರಳುತಲಿದೆ ನಗೆಯು,
ಸಪ್ತ ಮಾತೃಕೆಯರ ತೆರದಿ,
ಹೊರ ಹೊಮ್ಮುತಿದೇ ಈ ಸುವಾಸನೆ,,
ಆಘ್ರಾಣಿಸಲೊಂದು ಖುಷಿಯಾಗಿ
ಮೈ ಮರೆತಿಹಳು ಚೆಲುವೆ,
ಉಲ್ಲಾಸದಿ ತೇಲುತಲಿ ಗರಿಬಿಚ್ಚಿ
ಅಂದವ ತಂದಳವಳು ಅರಿವಿಲ್ಲದೆ,
ನೀಲಿಯಾ ಆಗಸದಲ್ಲಿ
ಹರಿದಾಡಿದ ಬೆಳ್ಳಿಮೋಡಗಳಂತೆ,
ಯಾರ ಆಸರೇ, ಭಯವು ಇಲ್ಲದೆ
ಘಮ ಘಮಿಸುತ ಹೂ ಗಳ ರಾಣಿ..
ಕೇದಿಗೆ, ಸಂಪಿಗೆಗಳು
ಹೊಸ ಪರಿಮಳವ ಬೀರುತಿರೆ,
ನಾನೇನ ಕಡಿಮೆಯೆಂದು ಎದೆ ಉಬ್ಬಿಸಿರೆ,
ಅವಳೊನಪಿನ ಉಲ್ಲಾಸ ಹೆಚ್ಚಾಯಿತು,
ಮನದಂಗಳದಿ ಮೂಡಿ ಬಾರೆ,
ನೀ ಏಳು ಸುತ್ತಿನಾ ದುಂಡು ಮಲ್ಲಿಗೆ,
ಸುಂದರವಾದ ಮನಸ್ಸಿನಲ್ಲಿ
ನೀ ಬಾರೆ ಸೂಜಿಗಾದ ಮಲ್ಲಿಗೆ…
✍ *ರವೀ ಚಿನಾ ಹಳ್ಳಿ*