Friday, July 4, 2025

ಅಡಿಗೆಮನೆ ಕವನ

ಒಲೆ ವ್ಯಗ್ರವಾಗಿತ್ತು, ಗ್ಯಾಸ್ ಖಾಲಿಯಾಗಿತ್ತು!
ನಾಬ್ ತುಕ್ಕು ಹಿಡಿದಿತ್ತು,
ಪೈಪ್ ಲೀಕಾಗಿತ್ತು!
ಸ್ಟಾಂಡ್ ಹಾಳಾಗಿತ್ತು,
ಫ್ಲೇಮ್ ಕೋಪಗೊಂಡಿತ್ತು!

ಅಮ್ಮನ ಕೈಯ ಹಿತವಾದ ಸ್ಪರ್ಶವಿರಲಿಲ್ಲ!
ಪ್ರೀತಿಯ ಗಾನ, ಸಂಗೀತವೂ ಇರಲಿಲ್ಲ!
ಸ್ವಚ್ಛ ಹೃದಯದ ತ್ಯಾಗ ಭಾವನೆಗಳಿರಲಿಲ್ಲ,
ಇತರರಿಗಾಗಿ ಹರಿಸಿದ ಕಣ್ಣೀರ ಹನಿಗಳಿರಲಿಲ್ಲ!

ಯಾರದೋ ಗಡಸು ಕೈಗಳು,
ಬೇಯಿಸಿ, ತಿಂದು ಹೋಗುವುವು,
ಮತ್ತೆ ಹಸಿವಾದಾಗ ವಕ್ಕರಿಸುವವು,
ಅಡಿಗೆ ಮನೆಗೇ ಮನಸಿರಲಿಲ್ಲ,
ಅವರನ್ನು ಸೇರಿಸಲು!

ಅಮ್ಮನ ಪ್ರೀತಿಗೆ ಜೀವಿಗಳು ಮಾತ್ರವಲ್ಲ,
ಪ್ರತಿ ವಸ್ತುಗಳೂ ತಲೆ ಬಾಗುವವು..
ಅಡಿಗೆ ಕೋಣೆಯ “ಬೆಂಕಿಯ ಒಲೆ” ಕೂಡಾ!!!

 

@ಪ್ರೇಮ್@

More from the blog

Mangalore : ಹಬ್ಬಗಳ ಋತು ಆರಂಭ – ಆಚರಣೆಗೆ ಷರತ್ತು ವಿಧಿಸಿದ ಪೊಲೀಸ್ ಇಲಾಖೆ..

ಮಂಗಳೂರು : ಕೆಲವೇ ದಿನಗಳಲ್ಲಿ ಹಬ್ಬಗಳ ಋತು ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ನಗರದಲ್ಲಿ ಹಲವು ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಮೆರವಣಿಗೆಗಳು ನಡೆಯಲಿದೆ. ಅವುಗಳಲ್ಲಿ ಮುಹರ್ರಂ, ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರು ಕುಡಿಕೆ ,...

ಸ್ವಯಂ ಸೇವಕರ ತರಬೇತಿ ಕಾರ್ಯಗಾರ..

ವಿಟ್ಲ : ಕರ್ನಾಟಕದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್ ಕೆ ಡಿ ಆರ್ ಡಿ ಪಿ ಯ 10460 ಮಂದಿ ಶೌರ್ಯ ಸ್ವಯಂಸೇವಕರು ಎನ್ ಡಿ ಆರ್ ಎಫ್ ತಂಡದ ಕಾರ್ಯದಲ್ಲಿ ಬೆಂಬಲವನ್ನು...

ವಿಟ್ಲ ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ..

ವಿಟ್ಲ: ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಕರುಣಾಕರ ನಾಯ್ತೊಟ್ಟು ಅಧ್ಯಕ್ಷತೆಯಲ್ಲಿ ನಡೆಯಿತು. ವಿಟ್ಲ ಪೇಟೆಯಲ್ಲಿ ಕೆಲವು ದಿನಗಳಿಂದ ಸಮರ್ಪಕ ಸಂಚಾರ ವ್ಯವಸ್ಥೆ ಕಲ್ಪಿಸಿದ್ದು ಮಂಗಳವಾರ ಬೆಳಗ್ಗೆ ಏಕಾಏಕಿ ಅಟೋರಿಕ್ಷಾಗಳು ರಸ್ತೆಯಲ್ಲಿ...

ಮಂಚಿ ಕೊಳ್ನಾಡು ಪ್ರೌಢಶಾಲೆಯಲ್ಲಿ ಯಕ್ಷ ಧ್ರುವ – ಯಕ್ಷ ಶಿಕ್ಷಣ ಉದ್ಘಾಟನಾ ಕಾರ್ಯಕ್ರಮ..

ಬಂಟ್ವಾಳ : ಅವಕಾಶವಂಚಿತ ವಿದ್ಯಾರ್ಥಿಗಳಲ್ಲಿ ಯಕ್ಷಗಾನದ ಕಲಾ ನೈಪುಣ್ಯತೆಯನ್ನು ಬೆಳಗಿಸಿ ಸಂಸ್ಕಾರ ಬದ್ಧ ಬುನಾದಿಯನ್ನು ಹಾಕಿಕೊಡುವ ವಿಶಿಷ್ಟ ಯೋಜನೆ ಯಕ್ಷದ್ರುವ - ಯಕ್ಷ ಶಿಕ್ಷಣವು ಯಕ್ಷ ಧ್ರುವ ಪಟ್ಲ ಫೌಂಡೇಶನ್ (ರಿ) ಇದರ...