ಚೆಂದ ಚೆಂದದ ಚೆಂದವಲ್ಲಿ ನೀನು

ಚೆಂದದ ನಗುವಿನ ತಾರೆಯೆ…
ತುಂಟ ಕಂಗಳ ಚೆಲುವ ನೋಟಕೆ
ಚಂದಿರ ತಾನು ಸೋತನೆ?
ಕೆನ್ನೆ ಚುಂಬಿಪ ಮುಂಗುರುಳು
ನಗುವಿಗೆ ಮರೆಯಾಯ್ತು ಕಾರಿರುಳು….
ಕೊರಳನು ತಬ್ಬಿದ ಹೊನ್ನಿನ ಮಾಲೆಯು
ಚೆಲುವಿಗೆ ಮನಸೋತು ಜನಿಸಿದ ಕವಿತೆಯು!!
ಕಪ್ಪನೆ ನೀಳ ಕೇಶರಾಷಿಯನು
ಸಿಂಗರಿಸಿ ನಕ್ಕಿತು ಮಲ್ಲಿಗೆಯು
ನೀ ಮಿಗಿಲೋ,ನಾ ಮಿಗಿಲೋ ಬಣ್ಣದಲ್ಲಿ
ಒಳಗೊಳಗೆ ಸ್ಪರ್ಧೆಯು ಕುಸುಮ ಕೋಮಲೆಯಲ್ಲಿ!!
ಕೆಂಪನೆ ವರ್ಣದ ಮದರಂಗಿಯು
ನಾಳೆಗಳ ಕನಸುಗಳಿಗೆ ಬಣ್ಣ ತುಂಬಿದೆ…
ನೀನುಟ್ಟ ಚೆಂದದ ಜರತಾರಿ ಸೀರೆ
ನಿನ್ನಯ ಸೌಂದರ್ಯಕೆ ಮೆರುಗು ನೀಡಿದೆ!!
ಚೆಲುವ ಚೆನ್ನಿಕೆ ನನ್ನ ಓ ಹೊನ್ನ ತಾರೆ
ಎಂದೆಂದೂ ನಗುತಿರು ಬಾಳ ಹೊಸಿಲಲ್ಲಿ…..
ತುಟಿಯಲ್ಲಿ ಮಿನುಗುವ ಆ ಮಂದಹಾಸ
ಕಡೆವರೆಗೂ ಉಳಿಯಲಿ ಬದುಕಿನಲಿ!!
*ಪ್ರಮೀಳಾ ರಾಜ್*
