ಈ ಸಮಯದ ಮುಳ್ಳು ಹೀಗೆ
ನಿಂತು ಬಿಡಲಿ…
ನೀ ಜೊತೆಗಿರೋ ಈ ಕ್ಷಣವು
ಹೀಗೆ ಇರಲಿ….
ಹೇಗೆ ತಿಳಿಸಲಿ ಮನಸನು…
ಅರಿಯಲಾರೆಯ ಒಲವನು…!

ತೋಳ ಚಾಚಿ ಬಳಸಿದೆ ನೀನು
ನನ್ನೆದೆಯ ಬಡಿತದಿ ನೀನಿರುವೆ…
ತಿಳಿದೂ ತಿಳಿಯದೆ ಏತಕೆ ಹೊರಟಿಹೆ
ಒಳಗೊಳಗೆ ನಾ ಸೋತಿರುವೆ…!
ಬಿಚ್ಚುಮನದಿ ತಿಳಿಸಲು ಒಲವ
ಸಂಕೋಚವೂ ತಡೆಯುತಿದೆ…
ಹೇಳದೆ ಹೋದರೆ ಹೃದಯವಿದು
ಒಳಗೇ ಕದನ ಸಾರಿದೆ…!
ಒಂದು ಬಾರಿ ಮನವ ತೆರೆದಿಡು
ನಿನ್ನೊಳಗೆ ಸೇರಿ ನಲಿಯುವೆ…
ತೋಳಿನ ಆಸರೆ ನೀಡು ನಿರಂತರ
ಹೃದಯದ ಬಡಿತವಾಗಿ ನಿಲ್ಲುವೆ…!
*ಪ್ರಮೀಳಾ ರಾಜ್*