ಬತ್ತಿಹೋಗದ ಹಸಿವಿದು
ಮೊಗೆದಷ್ಟೂ ಮತ್ತೆ ಮತ್ತೆ
ಮನದಾಳದಿ ಉದಯಿಸಿ
ನಿನ್ನ ಹಿಂದೆ ಮುಂದೆ ಸುತ್ತುವಂತೆ ಮಾಡುತ್ತಿದೆ….!

ಜನರ ಸಂತೆಯಿಂದ ದೂರ
ನಿಂತು ಬಿಡುತ್ತೇನೆ
ಜನ ನನ್ನ ಹುಚ್ಚಿಯೆಂದರೂ ಸರಿಯೇ..
ನಿನ್ನೊಡನಾಟವನು ಮರೆಯುವುದಿಲ್ಲ!
ಕುಂತರೂ ನಿಂತರೂ ಒಳಗೊಳಗೆ ಕಾಡುವವು
ಭಾವನೆಗಳ ಹಸಿವು..
ಹೇಗೆ ತಡೆಯಲಿ?
ಹಾಳೆಯ ಮೇಲೆ ಪದಗಳಾಗುವಂತೆ ಮಾಡಿ
ನೆಮ್ಮದಿಯ ಉಸಿರುಬಿಡುತ್ತೇನೆ…!
*ಪ್ರಮೀಳಾ ರಾಜ್*