ಆಗಸ್ಟ್ 15 ಅಂದ ಕೂಡಲೇ ನೆನಪಾಗುವುದು ನಮಗೆ ಸ್ವಾತಂತ್ರ್ಯ ದಿನಾಚರಣೆ, ಆದರೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದವರ ನೆನಪಾಗುವುದಿಲ್ಲ ನಮಗೆ ಯಾಕೆ ? ಅಂದು ನಮ್ಮ ಹಿರಿಯರು ಬ್ರಿಟಿಷರ ಮುಂದೆ ಗುಲಾಮರಂತೆ ಬದುಕುತ್ತಿದ್ದರೂ. ಇಂದು ನಾವು ನಮ್ಮವರಿಗಾಗಿ ಗುಲಾಮರಂತೆ ಬದುಕುವುದು ಯಾಕೆ ? ಸ್ವಾತಂತ್ರ್ಯದ ದಿವಸಕ್ಕೆ ಬೇಕಾಗಿ ಅದೆಷ್ಟೊ ಬಿಸಿ ರಕ್ತದ ಯುವಕರ ಬಲಿದಾನ ನಡೆಯಿತು. ಆದರೆ ಆ ಬಿಸಿ ರಕ್ತದ ಯುವಕರ ದೇಶಾಭಿಮಾನ ನೆನಪಾಗುವುದಿಲ್ಲ ನಮಗೆ ಯಾಕೆ ? ಅಂದು ಹೋರಾಡಿದರೂ ಕಿತ್ತೂರು ರಾಣಿ ಚೆನ್ನಮ್ಮ ರಂನತಹ ಹಲವಾರು ವೀರ ವನಿತೆಯರು. ಆದರೆ ಇಂದು ನಮ್ಮ ಕೆಲವು ವನಿತೆಯರಿಗೆ ನೆನಪಾಗುವುದಿಲ್ಲ ಯಾಕೆ ? ಅಂದು ಸ್ವಾತಂತ್ರ್ಯಕ್ಕೆ ಬೇಕಾಗಿ ಮೊಲಗಿತ್ತು ವಂದೇ ಮಾತರಂ ಎಂಬ ಉದ್ಘೋಷ ಆದರೆ ಇಂದು ನಮಗೆ ವಂದೇ ಮಾತರಂ ಎಂಬ ಮಂತ್ರ ನೆನಪಾಗುವುದಿಲ್ಲ ಯಾಕೆ ? ಅಂದು ಕಂಡರೂ ಗಾಂಧೀಜಿ ರಾಮರಾಜ್ಯದ ಕನಸು. ಆದರೆ ಇಂದು ನಮಗೆ ಗಾಂಧೀಜಿಯ ಕನಸು ನನಸಾಗಲಿಲ್ಲ. ನೆನಪಾಗಲಿಲ್ಲ ಯಾಕೆ ?



✍ ಗಿರೀಶ್ ತುಳಸೀವನ