Wednesday, June 25, 2025

ಗಜಲ್

ಹೇಳಿ ಕೇಳಿ ಇಡಬಾರದಿತ್ತೆ ಕಳ್ಳಿ ಮೋಹ ಅದು ಎಂತಹ ಹಾವಳಿ/
ಬಳಿ ಬಂದ ಬಳ್ಳಿ ತಬ್ಬಿದೊಡನೆ ವಾಲಿ ಒದ್ದೆ ಮುದ್ದೆಯಾದ ಕಚಗುಳಿ//

ಹಳಾಹಳಿ ಈ ನಡಾವಳಿ ನಾಲಿಗೆ ಸವರಿ ತುಟಿ ಅಪ್ಪಿ ತುದಿ ಕಚ್ಚುವ ಕಳಾಕಳಿ/
ಹಿಡುವಳಿ ಉನ್ಮಾದ ಕಣ್ಸನ್ನೆ ಅಲಂಕಾರ ರಾತ್ರಿ ಪೂರಾ ಪೋಲಿ ಗೊತ್ತುವಳಿ//

ಹೋಳಿ ಆಡಲು ಕೆನ್ನೆ ಗುಳಿ ಯೌವನದ ಮೊಡವೆ ಹುರುಪು ಹುಳಿ/
ಇಳಿ ಮೇಲಿಂದ ಕೆಳಗೆ ಉಬ್ಬು ಇಳಿಜಾರು ದೇಹ ಏರುವ ದಾಹ ಭಾಷಾವಳಿ//

ಘಟನಾವಳಿ ಬಿಗಿಯಾಯಿತು ಹಸಿ ಸಲ್ಲಾಪ ತುಸು ಬಿಸಿ ಕೆರಳಿ/
ತೆರಳಿ ಸಡಲಿಸಿ ವಸ್ತ್ರ ಸಂಹಿತೆ ಮೈಮಾಟ ಮಾದಕ ಅಚ್ಚುಕಟ್ಟು ಚಳುವಳಿ//

ಮರಳಿ ಬೆರಳಾ ಸರಸ ಅಲ್ಲಲ್ಲಿ ಅರಳಿ ಸ್ಪರ್ಶ ನಾಚಿ ಚಿತ್ತಾರ ಸಾಲಾವಳಿ/
ಹೊರಳಿ ಹಾರಾಡಿ ಚಪ್ಪರಿಸಿ ಮುತ್ತಿಗೆ ಎಲ್ಲೆಲ್ಲೂ ಮುತ್ತುಗಳ ಸರಪಳಿ//

ನರಳಿ ದುಂಡು ಮಲ್ಲಿಗೆ ದಿಂಡು ತುಂಟಾಟ ಒಬ್ಬಟ್ಟು ಖಾನಾವಳಿ/
ರಸಾವಳಿ ಬೆವರಿ ಜಿಲ್ ಜಿಲ್ ಝೇಂಕಾರ ಒಂದಾಗುವ ಬಳುವಳಿ//

ಕರಾವಳಿ ಕಡೆದ ಮಧು ಶಾಲೆ ಮೃದು ಹೆಣ್ಣೆ ನುಣುಪು ಬೆಣ್ಣೆ ವಂಶಾವಳಿ/
ಅವಳಿ ಜವಳಿ ಮುದ್ದಾದ ಸಾಗುವಳಿ ರಾತ್ರಿ ರೋಮಾಂಚನ ದೀಪಾವಳಿ//

ಬಸವರಾಜ ಕಾಸೆ

More from the blog

ತುಳು ನಾಟಕ ಕಾರ್ಯಗಾರ ಉದ್ಘಾಟನಾ ಕಾರ್ಯಕ್ರಮ.. 

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ...

ರಾಜ್ಯ ಸರಕಾರದ ಜನವಿರೋಧಿ ನೀತಿ ಖಂಡಿಸಿ ಮನವಿ ಸಲ್ಲಿಕೆ..

ಬಂಟ್ವಾಳ : ನಿನ್ನೆ ಗ್ರಾಮ ಪಂಚಾಯತ್ ನಲ್ಲಿ ಸರಕಾರದ ಜನ ವಿರೋಧಿ ನೀತಿಗಳನ್ನು ಖಂಡಿಸಿ ನಡೆದ ಪ್ರತಿಭಟನೆಯಲ್ಲಿ ನಿವೃತ್ತ ಶಿಕ್ಷಕರು ಮತ್ತು ಬಂಟ್ವಾಳ ಮಂಡಲ ಬಿಜೆಪಿ ಪ್ರಶಿಕ್ಷಣ ಪ್ರಕೋಷ್ಠ ಸಂಚಾಲಕರು ಶ್ರೀ ವೇದಾನಂದ್...

ರಾಜ್ಯ ಸರಕಾರದ ಜನವಿರೋಧಿ ನೀತಿ ವಿರುದ್ಧ ವಿಟ್ಲದಲ್ಲಿ ಬಿಜೆಪಿ ಪ್ರತಿಭಟನೆ..

ವಿಟ್ಲ: ವಿಟ್ಲ ಪಟ್ಟಣ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಬಿಜೆಪಿಯ ವಿಟ್ಲ ಮಹಾಶಕ್ತಿ ಕೇಂದ್ರದ ನೇತೃತ್ವದಲ್ಲಿ ಬೆಲೆ ಏರಿಕೆ, ಕಟ್ಟಡ ನಿರ್ಮಾಣ ಸಾಮಗ್ರಿಗಳಾದ ಮರಳು ಮತ್ತು ಕೆಂಪುಕಲ್ಲು ಅಭಾವದಿಂದ ಕಾರ್ಮಿಕರಿಗೆ ಆಗುತ್ತಿರುವ ಅನ್ಯಾಯಗಳ ವಿರುದ್ಧ...

ಚಿಣ್ಣರಲೋಕ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮ..

ಬಂಟ್ವಾಳ: ಬಂಟ್ವಾಳ ಚಿಣ್ಣರಲೋಕ ಸೇವಾ ಬಂಧು ಹಾಗೂ ಚಿಣ್ಣರಲೋಕ ಮೋಕೆದ ಕಲಾವಿದೆರ್ ಸೇವಾ ಟ್ರಸ್ಟ್ ಆಶ್ರಯದಲ್ಲಿ ನಡೆದ ವಿದ್ಯಾರ್ಥಿ ವೇತನ, ಉಚಿತ ಪುಸ್ತಕ ವಿತರಣೆ ಹಾಗೂ ಪ್ರತಿಭಾ ಪುರಸ್ಕಾರದ ಶೈಕ್ಷಣಿಕ ಸಂಭ್ರಮ ಕಾರ್ಯಕ್ರಮ...