ಅಮುದ ನೀಡುವ ಮುದ್ದು ಮನದನ್ನೆ
ದಿನದಿಂದ ದಿನಕ್ಕೆ ನೀ ಸುಂದರ
ನಿನ್ನ ಆತ್ಮೀಯ ಅಪ್ಪುಗೆಯ ಒಡನಾಟ
ಜೀವನವೀಗ ಸುಖ ಶಾಂತಿಯ ಸಾಗರ

ನಿನ್ನಿಂದ ಪರಿಪೂರ್ಣನಾಗುವೆ ನಾ
ಬರಸೆಳೆದು ಬಳ್ಳಿಯಂತೆ ನೀ ಅಪ್ಪಿದೊಡನೆ
ಎತ್ತಕೊಂಡು ಮುದ್ದಾಡುವೆ ನಿನ್ನ
ಒಂದಿಷ್ಟು ತಡ ಮಾಡದೆ ಬಂದೊಡನೆ
ಬಾಹುಗಳಲ್ಲಿ ಬಂಧನವಾಗುವಂತೆ ಕೆಣಕಿ
ಎದೆಯ ರೋಮದಲ್ಲಿ ಚೆಲ್ಲಾಟವಾಡು
ಭುಜಕ್ಕೆ ಒರಗಿ ಇದ್ದಕ್ಕಿದ್ದಂತೆ
ಹಿತವಾಗಿ ಎಲ್ಲೆಂದರಲ್ಲಿ ಕಚಗುಳಿ ಇಡು
ಮೆಲ್ಲನೆ ಗಿಲ್ಲು ಹಾಗೆ ಸ್ವಲ್ಪ
ಚುರುಕು ಮುಟ್ಟುವಂತೆ ಆಗಿ ಚಿಲಿಪಿಲಿ
ತುದಿ ಮೂಗು ಕೆಂಪು ದಾಸವಾಳ
ಸುವಾಸಿಸುವಂತೆ ಸ್ಪರ್ಶಿಸಿಗೊಳಿಸು ಗಲಿಬಿಲಿ
ರಸಮಯ ಕ್ಷಣಗಳ ರೋಮಾಂಚನ
ಹೆಚ್ಚಾಗುವಂತೆ ಸಾಗಲಿ ಸರಸ
ನಿನ್ನ ಕೋಮಲ ಕೆನ್ನೆಯು ತಾಗಿ
ತೋರ್ಪಡಿಸುವೆ ನಕ್ಕು ಚೆಂದದ ಆವೇಶ
ಅನುಸರಿಸುವೆ ನಿನ್ನದೇ ಶೈಲಿ
ಮುಂದುವರಿಸುತ್ತಲೇ ಸಹಕರಿಸುತ್ತಿರು ಹೀಗೆ
ಬೆರಳುಗಳ ಸಹಿತ ಬೆಸೆದು
ಬೆವರ ಬಸಿದರೂ ಸುರಿಸು ಮುತ್ತುಗಳ ಹಾಗೆ

ಬಸವರಾಜ ಕಾಸೆ