ಹುಡುಗಿರನ್ನೆಲ್ಲಾ ನಿಲ್ಲಿಸಿ ಸಾಲಿನಲ್ಲಿ ಕಣ್ಣು ಹೊಡೆಯುವ ಆಸೆ ಕನಸಿನಲ್ಲಿ/
ಅಂದ ನೋಡಿ ತೆಗೆದುಕೊಳ್ಳುವ ಮಜಾ ಒಂಥರ ಎನಿಸುವುದು ಮನಸ್ಸಿನಲ್ಲಿ//

ಚೆಂದವಿದ್ದರೂ ತಲೆ ತಗ್ಗಿಸಿ ನಡೆಯುವ ಗೌರಮ್ಮದಿಂರು ಬಹಳ ಬೋರು/
ವರ್ಷವಾದರೂ ಮುಖ ನೋಡುವ ಕಸರತ್ತು ತಾಳಲಾಗದು ನಮಗಿಲ್ಲಿ//
ಬೋಲ್ಡ್ ಬೆಡಗಿಯರ ಅರೆಬರೆ ಬಟ್ಟೆ ನಮ್ಮ ಖುಷಿಗೆ ಎಡೆಬಿಡದೆ ಲಗ್ಗೆ/
ಗುಂಡಿಗೆ ಎಂದರೆ ಅವರದೇ ಶಿಷ್ಯ ಮಂಡಿಗೆ ತಿನ್ನುವೆವು ನಾವಿಲ್ಲಿ//
ವ್ಯಾರಾಯಿಟಿ ವ್ಯಾರಾಯಿಟಿ ಸ್ಟೈಲನಲ್ಲಿ ಥಳುಕು ಬಳುಕು ಬೆಕ್ಕಿನ ನಡಿಗೆ/
ಸಿಕ್ಕಾಪಟ್ಟೆ ಸೆಲ್ಫಿ ಹುಚ್ಚು ಮಸ್ತ್ ಪೋಜು ಕೊಟ್ಟಾಗ ನಮ್ಮ ಕ್ರೇಜ್ ಕಿಚ್ಚಿನಲ್ಲಿ//
ಮೂರ್ಖ ಸುಂದರಿಯರ ಪೆದ್ದು ನಗೆಗೆ ನೂರು ಬಾರಿ ಬಿದ್ದೇಳುವ ಸಡಗರ/
ಮೇಕಪ್ ಇಲ್ಲದೆ ಎದುರಾದಾಗ ನಾವಾಗಿ ಕಮಂಗಿಗಳು ತುರ್ತು ಸ್ಥಿತಿಯಲ್ಲಿ//
ವಾರೆಗಣ್ಣಲ್ಲಿ ನೋಡಿದಾಗ ಶುರುವಾದ ನಡುಕ ನಿಂತಿಲ್ಲ ನೋಡಿ ಇಲ್ಲಿವರೆಗೂ/
ಬೈಯುವ ಲುಕ್ಕು ಹಾರಿಸುವ ಹುಬ್ಬು ಕಂಡರೆ ಇಷ್ಟ ಮೋಹದ ಅಲೆಯಲ್ಲಿ //
ಚುರುಕು ಗೂಬೆಗಳ ತರಲೆ ಮಾತುಗಳು ಆಗುವುದು ಎಂದು ನಮಗೂ ಹಿತ/
ಕಟ್ಟಿ ಹಾಕುವರು ನಿರ್ಬಂಧಗಳಲ್ಲಿ ಅದಕ್ಕೆ ಚಿಂತೆ ಬೀಳಲು ಕಷ್ಟ ಪ್ರೀತಿಯಲ್ಲಿ//

ಬಸವರಾಜ ಕಾಸೆ