ಆಗ ತಾನೇ ಆರಂಭ ತಾಜಾ ಎನಿಸುವ ಹಿಗ್ಗು ಗುಲ್ ಮೊಹರ್ ಮೊಗ್ಗು/
ಸೀಮಿತ ಅವಧಿ ಎಂತಹ ಲವಲವಿಕೆಯ ಗುಂಗು ಗುಲ್ ಮೊಹರ್ ಸೋಗು//

ಮುಂಜಾವು ಅರಳಿ ಮನ ನಳನಳಿಸಿ ಮಧ್ಯಾಹ್ನ ಸೂರೆಗೈಯುವ ಸಿಗ್ಗು/
ಸಂಜೆ ಅಷ್ಟೊತ್ತಿಗೆ ಉತ್ಸಾಹ ಬಾಡುವ ಎಗ್ಗು ಗುಲ್ ಮೊಹರ್ ಪಿಡುಗು//
ಸುಂದರ ಕೆಂಬಣ್ಣ ದಾರಿಯುದ್ದಕ್ಕೂ ಮೋಹಕ ಸಾಗಿದಷ್ಟು ನಸುನಗು/
ಕ್ಷಣ ಕ್ಷಣವೂ ವಿಚಲಿತ ಚಂಚಲಗಳ ಮೆರಗು ಗುಲ್ ಮೊಹರ್ ಬೆರಗು//
ಬಣ್ಣದ ಹೂಗಳ ಮೆರೆಯುವ ಸೌಂದರ್ಯ ಆಕರ್ಷಕ ಖುಷಿಯ ಪ್ರಜ್ಞೆ ಕೊಡಗು/
ಗಾಳಿಗೆ ಬಾಗಿ ಚಳಿಗೆ ಕುಗ್ಗಿ ಸ್ವಂತಿಕೆಯ ಗುಡುಗು ಗುಲ್ ಮೊಹರ್ ಸೊಬಗು//
ದಳಗಳ ಬಿಡಿಸುವ ಕೋಳಿ ಜಗಳ ಆಗಾಗ ಮರದಡಿ ಉದುರಿದ ಹಾಸಿನ ರಂಗು/
ವಾಲುವ ಚಿತ್ತ ಸೆಳೆಯುವ ಕಣ್ಮನ ಬಿಡದ ಕೆಲಸಗಳ ಒಗ್ಗು ಗುಲ್ ಮೊಹರ್ ಕೂಗು//
ಮುಡಿ ಏರದೆ ಬಳಕೆಯಾಗದೆ ಉಳಿದರೂ ಇರುವಷ್ಟು ನೆಮ್ಮದಿ ಗೊಂಚಲಿನ ತೇಗು/
ಎದ್ದು ಬಿದ್ದು ಸೋತು ಗೆದ್ದು ಬದುಕುವ ಪ್ರೀತಿಗೂ ಗುಲ್ ಮೊಹರ್ ಈವರೆಗೂ//

ಬಸವರಾಜ ಕಾಸೆ