Thursday, February 13, 2025

ಗಜಲ್ 74

ಮುಂಗಾರು ಮಳೆಯಲ್ಲಿ ಮೊಳಕೆಯೊಡೆವ ಪ್ರೇಮಕಥೆ ಹುಡುಕುತ್ತಿರುವೆ ಎಲ್ಲೆಲ್ಲೂ/
ಹಾಳು ಕೊಚ್ಚೆಯಲ್ಲಿ ಕೊಚ್ಚಿ ಹೋಗುವ ಸಪ್ಪೆ ಅಲೆಗಳೇ ಕಾಣುತ್ತಿವೆ ಎಲ್ಲೆಲ್ಲೂ//

ಬರಡು ಮನಸ್ಸಿಗೆ ಹನಿ ಹನಿ ನೀರಾವರಿ ಜಡಿ ಸಾಲುಗಳ ತುಂತುರು ಬಂಧ/
ಕೋಟಿ ಜನರ ನಡುವೆ ಬೆಸೆದರೂ ಸಿಂಚನ ಅತೃಪ್ತ ಸಂಬಂಧಗಳಿವೆ ಎಲ್ಲೆಲ್ಲೂ//

ನಾನಾ ವಿಧಗಳ ಮುಖ ಪ್ರೀತಿ ಹೆಸರಿಗಷ್ಟೇ ರಾರಾಜಿಸುವ ಎರಡಕ್ಷರದ ಪದ/
ಒಳ ವಿಕೃತ ಹೊರ ಸುಂದರ ತೊಡಿಸಿದರೂ ಬಟ್ಟೆ ಬೆತ್ತಲೆಯಾಗಿವೆ ಎಲ್ಲೆಲ್ಲೂ//

ಸಿನೀಮಯ ಶೈಲಿ ಪ್ರಸ್ತುತ ರೀತಿ ವಾಸ್ತವದ ನೀತಿ ಆಗುವುದು ಹೆಚ್ಚೆಚ್ಚು/
ಕಳಚಿಕೊಂಡ ಋಣಗಳ ಮರು ಜೋಡಣೆ ಲೆಕ್ಕ ಮಾಯಾವಾಗಿವೆ ಎಲ್ಲೆಲ್ಲೂ//

ಹೇಳಲು ಮರುಕ ಹುಟ್ಟಿ ಕಣ್ಣೀರಾದ ಸಂಗತಿಗಳ ಮುಗಿಯದ ದುಗುಡ/
ಆರ್ಭಟಿಸುವ ಸ್ವಾರ್ಥಗಳಲ್ಲಿ ನೊಂದ ಜೀವಗಳು ಕೇಳಲು ಸಿಕ್ಕಿವೆ ಎಲ್ಲೆಲ್ಲೂ//

ಬಸವರಾಜ ಕಾಸೆ

More from the blog

ಗಣಿ ಇಲಾಖೆ ಅಧಿಕಾರಿ ವಿರುದ್ಧ ಕ್ರಮಕ್ಕೆ ಸೂಚನೆ

ಬಂಟ್ವಾಳ : ಬಂಟ್ವಾಳದಲ್ಲಿ ಫೆ. 5 ರಂದು ನಡೆದ ಜನತಾದರ್ಶನಕ್ಕೆ ಗೈರು ಹಾಜರಾದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್...

ಯುವ ಕಾಂಗ್ರೆಸ್ ಚುನಾವಣೆ ಫಲಿತಾಂಶ ಪ್ರಕಟ : ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಹಾಶೀರ್ ಪೇರಿಮಾರ್ ಗೆ ಮೊದಲ ಸ್ಥಾನ

ಮಂಗಳೂರು: ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ನಡೆದ ಚುನಾವಣೆಯಲ್ಲಿ ಕರ್ನಾಟಕ ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರು, ಮಂಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಯು.ಟಿ ಖಾದರ್ ಫರೀದ್ ಅವರ...

ಕುಂಭಮೇಳದಲ್ಲಿ ಕಾಲ್ತುಳಿತ : ಮೃತಪಟ್ಟ ಭಕ್ತರಿಗೆ ಕಿಶೋರ್ ಕುಮಾರ್ ಪುತ್ತೂರು ತೀವ್ರ ಸಂತಾಪ

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ನಾನು ತೀವ್ರ ಸಂತಾಪವನ್ನು ವ್ಯಕ್ತಪಡಿಸುತ್ತಿದ್ದೇನೆ. ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿಯನ್ನು ಕುಟಂಬದವರಿಗೆ ಭಗವಂತ ನೀಡಲಿ ಎಂದು ಎಂದು ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್...

ದುಬೈನಿಂದ ಮಂಗಳೂರಿಗೆ ಭೇಟಿ ನೀಡಿದ್ದ ವ್ಯಕ್ತಿಗೆ ಮಂಕಿಪಾಕ್ಸ್ ದೃಢ

ಮಂಗಳೂರು: 40 ವರ್ಷದ ವ್ಯಕ್ತಿಯಲ್ಲಿ ಮಂಕಿಪಾಕ್ಸ್‌ ಸೋಂಕು ಪತ್ತೆ ಆಗಿದೆ. ಆ ಮೂಲಕ ಕರ್ನಾಟಕದಲ್ಲಿ ಪತ್ತೆಯಾದ ಮೊದಲ ಮಂಕಿಪಾಕ್ಸ್ ಪ್ರಕರಣವಾಗಿದೆ. ದುಬಾೖಯಿಂದ ಜ.17ರಂದು ಹಿಂದಿರುಗಿದ್ದ 40 ವರ್ಷದ ವ್ಯಕ್ತಿಯಲ್ಲಿ ಮಂಕಿ ಪಾಕ್ಸ್‌ ರೋಗ ಲಕ್ಷಣಗಳು...