ಜೋಗು ಜೋಗು ಜೋಳಿಗೆ ಈ ಪ್ರಪಂಚ
ಜಗ್ಗದೆ ಹಾಕುವ ಸೋಗುಗಳು ನೂರಿಲ್ಲಿ
ಎಗ್ಗು ಸಿಗ್ಗುಗಳ ಜೊಳ್ಳು ಹೊರ ಮುಖ
ಜಿಗಿದಾಡಿ ಜೊಲ್ಲು ಸುರಿಸುವ ಜುಗ್ಗರಲ್ಲಿ

ಕೋಟಿ ಇದ್ದು ಇಲ್ಲದೆ ನರಳುವವರು
ಪಡೆಯಲು ನೆಮ್ಮದಿ ಸಿಗದ ಪ್ರೀತಿಗೆ
ಏನು ಇಲ್ಲದೆ ಸುಖವಾಗಿ ಇರುವವರು
ಉಂಟು ಇದ್ದುರಲ್ಲಿಯೆ ಆನಂದ ತಣ್ಣಗೆ
ಒಂದಲ್ಲ ಒಂದಕ್ಕೆ ಬೇಡಲೇಬೇಕಣ್ಣಾ
ಬಂದ ಮೇಲೆ ಇಲ್ಲಿ ಒಬ್ಬರಲ್ಲ ಒಬ್ಬರಿಗೆ
ಜನ್ಮವಿದು ಬಯಸಿ ತಂದ ಒಲವಿನ ಕಕ್ಷೆ
ಕಾಣುವ ದೇವರ ಜೋಲು ಕರುಳಿನ ಭಿಕ್ಷೆ
ನಾನು ನೀಡೆನು ಅಷ್ಟಿಷ್ಟು ಆದದ್ದನ್ನ
ಹಿಡಿದಿದೆ ಜಿಗುಟು ಜುಟ್ಟುಗಳ ಜೋರಿಗೆ
ನೀಡಿರಿ ಕೊಡುಗೆ ಮಾನವೀಯತೆ ಜಾರಿಗೆ
ಜಾಳಿಗೆಗೆ ಸೋಸುವ ಜಿರಲೆಗಳ ಜೀರಿಗೆ

- ಬಸವರಾಜ ಕಾಸೆ
