ಸೃಷ್ಟಿಯ ಸೊಬಗು ಅಂತರಂಗ ಸೊಗಸು
ಪ್ರತಿ ಹೂಗಳು ಪ್ರತಿನಿಧಿಸುವುದಂತೆ ನಿನ್ನೆ ಬಂದಿಲ್ಲಿ ಚೂರು ಹೇಳೆ ನೀ ಅದು ಹೇಗೆ
ಸ್ವರ್ಗದ ಕಡೆ ಕನಸಿನ ನಡೆ ವಿಹಾರ ಹೆಣ್ಣೆ

ಮಲ್ಲಿಗೆಗೆ ಮುದ ತಂದಿತ್ತು ಮೊಗ್ಗಿನ ಜಡೆ
ಪುಳಕದಿ ನರಳಿತು ಶೃಂಗಾರ ಮೈ ಬೆಣ್ಣೆ
ಮೈಸೂರು ಮಂಗಳೂರು ನಿನ್ನ ತವರೂರು
ಜಾಜಿ ದುಂಡು ಮಲ್ಲಿಗೆ ಚೆಂಡು ನೀ ಹೆಣ್ಣೆ
ಕಣಗಿಲೆ ಕಣ್ಣಿಗೆ ತಂಪು ಸಿದ್ಧ ಕಣ್ಣುಕಪ್ಪು
ಮಿಟುಕಿಸಿದಂತೆ ರೆಪ್ಪೆ ಮಿಡಿಯುವ ಪಕಳೆ
ಉಲಿಯುವ ಎಸಳಿನ ಮಾತೇ ದಾಸವಾಳ
ವಾಸಿಯಾದವು ನೂರು ಹೃದಯ ಬೇನೆ
ಋತುಮಾನ ತಕ್ಕಂತೆ ಬದಲಾಗುವ ಅಂದ
ದಿನದಿಂದ ದಿನಕ್ಕೆ ಗಾಢ ನಿನ್ನ ಚೆಲುವು ನಲ್ಲೆ
ನಕ್ಕಂತೆ ಬೀರುವ ಸುವಾಸನೆ ಕೆಂಡಸಂಪಿಗೆ
ಬಿಳಿ ಬೂದು ಹಳದಿ ಎಲ್ಲಾ ನಿನ್ನ ಬಣ್ಣವೆ
ಸುಗಂಧರಾಜ ಹಬ್ಬಿದ ದ್ರವ್ಯ ಗೊಂಚಲು
ಬಿಸಿಲಿಗೆ ಅರಳಿ ಲಲ್ಲಿ ಹೊಡೆದೆಯಾ ಲಲ್ಲೆ
ನೀನಿಲ್ಲದೆ ಇರದು ಭೂವಿಯಲ್ಲಿ ಏನು
ಹಬ್ಬ ದಿಬ್ಬಗಳ ಇಂಬು ಮೀರಿದ ಎಲ್ಲೆ
ಕಷ್ಟ ನೋವಿಗೆ ಔಷಧಿ ಗುಣಗಳ ತುಂಬೆ
ಹಾವಭಾವ ಹಾರ ಕನಕಾಂಬರ ನಿನ್ನಲ್ಲಿಯೆ
ಕೊಡವಿ ಎದ್ದ ಅಪರೂಪದ ನೀಲಕುರಿಂಜಿ
ಅಸ್ತಿತ್ವದ ಅಸ್ಮಿತೆ ನಾಗಪುಷ್ಪವು ನೀ ಹೆಣ್ಣೆ

ಬಸವರಾಜ ಕಾಸೆ