Thursday, June 26, 2025

ಒಂದು ಪ್ರೇಮ ಪ್ರಸಂಗ

ಅರಗಿಣಿ ಕಾಲೇಜು ಹತ್ರ
ದಿನ ಅಡ್ಡಾ ಹಾಕುತ್ತಿದ್ದೆ ನಾನು
ಹೋಗಿ ಬರುವ ಚಿಟ್ಟೆಗಳಿಗೆ
ಬಣ್ಣ ಬಣ್ಣದ ಕಾಗೆ ಹಾರಿಸುತ್ತಿದೆ ನಾನು

ಏನು ಮಾಡೋದು ಹೇಳಿ ಕೇಳಿ
ಹಾಳುಮುಳು ಯೌವ್ವನ ನಂದು
ಪ್ರೀತಿಸಬೇಕು ಎನಿಸಿತು ಕಣ್ರಿ
ಒಂದು ಹೃದಯವನ್ನಾದರೂ ಕದ್ದು

ಅಂತೂ ಇಂತೂ ಒಂದು ಹಕ್ಕಿ
ತಿನ್ನತೊಡಗಿತು ಚೂರು ಚೂರೇ ಕಾಳು
ನೋಡು ನೋಡುತ್ತಲೇ ಮಾದಕ ಮೈಮಾಟ
ಬಾಯಿ ಮೇಲೆ ಇಟ್ಟು ಕೈ ಕಚ್ಚಿಕೊಂಡೆ ಬೆರಳು

ಅವರಜ್ಜಿ ಹಿಡಿಸಿ ಬಿಟ್ಟಳು ಕಣ್ರಿ
ಹಗಲಿರುಳು ಎರ್ರಾಬಿರ್ರಿ ಹುಚ್ಚು
ಮಂತ್ರಕ್ಕೆ ಉದುರುವಂತೆ ಮಾವಿನಕಾಯಿ
ಬಿಡು ಬಿಡುತ್ತಲೇ ಓಳು ಹಚ್ಚಿಕೊಂಡೆ ಹೆಚ್ಚೆಚ್ಚು

ಜೇಬಲ್ಲಿ ಇರದಿದ್ದರೂ ಒಂದು ರೂಪಾಯಿ
ನಾನಿರಲಿಲ್ಲ ಯಾವುದಕ್ಕೂ ಕಮ್ಮಿ
ಕೊಡುತ್ತಿದ್ದೆ ದೊಡ್ಡ ದೊಡ್ಡ ಪೋಜು
ಕೊಚ್ಚಿಕೊಳ್ಳುತ್ತಿದ್ದೆ ಬರೀ ಜಂಭ ಹೆಚ್ಚು ಕಮ್ಮಿ

ಅಪ್ಪನ ಜೇಬಿನಿಂದ ದುಡ್ಡು ಹೊಡೆದು
ಅಮ್ಮ ಅಕ್ಕನ ಹತ್ರ ಉಗಿಸಿಕೊಂಡು
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ
ಮಾಡಿಸುತ್ತಿದ್ದೆ ಕಣ್ರಿ ಅಲ್ಲಿಲ್ಲಿ ಸುತ್ತಾಡಿಸಿಕೊಂಡು

ಚಿನ್ನ ರನ್ನ ಎಂದು ಮುದ್ದಾಡುತ್ತಿದ್ದೆ
ಅವಳಿಗೆ ಆಗದಂತೆ ಬೇಸರವೂ ಸ್ವಲ್ಪ
ಹೇಳಿದಂತೆ ಕೇಳಿ ನಡೆಯುತ್ತಿದ್ದೆ
ಬರಬಾರದೆಂದು ಕೋಪ ತಾಪ

ಕೊನೆಗೆ ಸರಿಯಿಲ್ಲ ನೀ ಬೇಜವಾಬ್ದಾರಿ ನಿನಗೆ
ಎಂದು ನಡು ನೀರಲ್ಲಿ ಕೈ ಬಿಟ್ಟಳು ಕಣ್ರಿ
ಅವಳ ಮಾತಿಗೊಂದಿಷ್ಟು ಬೆಣ್ಣೆ ಹಚ್ಚಾ
ಎಲ್ಲಾ ಮುಂಡಾ ಮೊಚ್ಕೊಂಡು ಹೋಯ್ತು ಹೋಗ್ರಿ

ಬಸವರಾಜ ಕಾಸೆ

More from the blog

Installation Ceremony : ವಕೀಲರ ಸಂಘ (ರಿ ) ಬಂಟ್ವಾಳ ಇದರ ನೂತನ ಪದಾಧಿಕಾರಿಗಳ ಪದಗ್ರಹಣ..

ಬಂಟ್ವಾಳ : ವಕೀಲರ ಸಂಘ (ರಿ ) ಬಂಟ್ವಾಳ ಇದರ 2025-2027 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜೂ.26 ರಂದು ಪ್ರಧಾನ ಸಿವಿಲ್ ನ್ಯಾಯಾಧೀಶರ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ...

ಸತತ 3ನೇ ಬಾರಿಗೆ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಕೀರ್ತಿ ಆಯ್ಕೆ..

ವಿಟ್ಲ : ವಿಟ್ಲ ಪಡೂರು ಗ್ರಾಮದ ಕುಕ್ಕಿಲ ಮನೆ ಶ್ರೀಮತಿ ವನಿತಾ ಲಕ್ಷ್ಮಣ ಗೌಡ ದಂಪತಿಯ ಪುತ್ರಿ ಕೀರ್ತಿ ಇವರು ಸತತ 3ನೇ ಬಾರಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ. ಮಾದರಿ ಹಿರಿಯ ಪ್ರಾಥಮಿಕ...

Crop Insurance : ಅಡಿಕೆ, ಕರಿಮೆಣಸು ಬೆಳೆಗಳಿಗೆ ಹವಾಮಾನ ಆಧಾರಿತ ಬೆಳೆ ವಿಮೆ ಪ್ರಿಮಿಯಂ ಪ್ರಾರಂಭ..

ಬಂಟ್ವಾಳ : ಕರಾವಳಿಯ ದಕ್ಸಿಣ ಕನ್ನಡ ಮತ್ತು ಉಡುಪಿ ಜೆಲ್ಲೆಯಲ್ಲಿ ತೋಟಾಗಾರಿಕೆ ಬೆಳೆ ಬೆಳೆದ ರೈತರು ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟ ಸಂಭವಿಸಿದಲ್ಲಿ ನಷ್ಟ ಪರಿಹಾರವನ್ನು ತುಂಬಿಸಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಜಾರಿಗೊಳಿಸಿದ...

ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ರಾಜೀನಾಮೆಗೆ ಪ್ರಭಾಕರ ಪ್ರಭು ಆಗ್ರಹ..

ಬಂಟ್ವಾಳ : ರಾಜ್ಯದ ವಸತಿ ಇಲಾಖೆಯ ಅಧಿನದಲ್ಲಿರುವ ರಾಜೀವ ಗಾಂಧಿ ವಸತಿ ನಿಗಮದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳ ಬಗ್ಗೆ ಆಡಳಿತ ಪಕ್ಷದ ಕಾಂಗ್ರೆಸ್ ಶಾಸಕರಾದ ಬಿ. ಆರ್. ಪಾಟೀಲ್ ಯವರು ವಸತಿ ಸಚಿವರಾದ ಜಮೀರ್...