Wednesday, July 9, 2025

ಕಾವಳಪಡೂರು : ಅತಿಕ್ರಮಣ ಸರಕಾರಿ ಜಮೀನು ತೆರವುಗೊಳಿಸಿ ನಿವೇಶನ ರಹಿತ ಎಸ್ಸಿ, ಎಸ್ಟಿಗಳಿಗೆ ಹಂಚಿಕೆ ಮಾಡುವಂತೆ ಆಗ್ರಹ

ಬಂಟ್ವಾಳ: ತಾಲೂಕಿನ ಕಾವಳಪಡೂರು ಗ್ರಾಮದ ಕಾರಿಂಜ ದರ್ಖಾಸು ಎಂಬಲ್ಲಿ ಸರಕಾರಿ ಜಮೀನನ್ನು ಅತಿಕ್ರಮಣವಾಗಿರುವುದನ್ನು ತೆರವುಗೊಳಿಸಿ ಪ.ಜಾತಿ ಮತ್ತು ಪಂಗಡದ ವರಿಗೆ ನಿವೇಶನಕ್ಕಾಗಿ ಕಾದಿರಿಸುವಂತೆ ಸ್ಥಳೀಯ ನಿವಾಸಿಗಳಾಗ ಸುಂದ ಮುಗೇರ,ಜನಾರ್ದನರವರು ಆಗ್ರಿಹಿಸಿದ್ದಾರೆ.

ಮಂಗಳವಾರ ಬಿ.ಸಿ.ರೋಡಿನಲ್ಲಿ‌ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಈ ಬಗ್ಗೆ ಬಂಟ್ವಾಳ ತಹಶೀಲ್ದಾರರಿಗೂ ಮನವಿ ಸಲ್ಲಿಸಲಾಗಿದೆ ಎಂದರು.

ಕಾವಳಪಡೂರು ಗ್ರಾಮದ ಸ.ನಂ.190/1 ರಲ್ಲಿ‌1.60 ಎಕ್ರೆ ಜಮೀನು ಇಲ್ಲಿನ ದಿನೇಶಗೌಡ‌ ಎಂಬವರಿಗೆ ಅಕ್ರಮ – ಸಕ್ರಮದಲ್ಲಿ ಮಂಜೂರಾಗಿದ್ದು, ಅದೇ ಸ.ನಂಬರನಲ್ಲಿ 2.34 ಎಕ್ರೆ ಉಳಿಕೆಯಾಗಿತ್ತು.ಇದೀಗ ದಿನೇಶಗೌಡ ಅವರು ತನಗೆ ಮಂಜೂರಾದ ಮತ್ತು ಉಳಿಕೆ ಜಮೀನನ್ನು ಖಾಸಗಿ ವ್ಯಕ್ತಿಯೋರ್ವರಿಗೆ ಮಾರಾಟ ಮಾಡಲಾಗಿದ್ದು‌, ಅದರ ಸುತ್ತು‌ ಬೇಲಿ ನಿರ್ಮಿಸಿ ಅತಿಕ್ರಮಣಗೊಳಿಸಲಾಗಿದೆ ಎಂದು ಅಪಾದಿಸಿರುವ ಸುಂದರ ಮುಗೇರ ಮತ್ತು ಜನಾರ್ದನ ಅವರು ಈ ಉಳಿಕೆ 2.34 ಜಮೀನನ್ನು ಅತಿಕ್ರಮಣ ಜಮೀನನ್ನು ತೆರವುಗೊಳಿಸಿ ಇಲ್ಲಿರುವ ನಿವೇಶನ ರಹಿತ ಎಸ್ .ಸಿ.,ಎಸ್.ಟಿ.ಬಡ ಕುಟುಂಬಗಳಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿದ್ದಾರೆ.

8 ತಿಂಗಳ ಹಿಂದೆಯೇ ಈ ಬಗ್ಗೆ ಸ್ಥಳೀಯ ಗ್ರಾ.ಪಂ.,ತಹಶೀಲ್ದಾರರಿಗೆ ದೂರು ಸಲ್ಲಿಸಿದ್ದರೂ ಅವರು ಈ ವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ, ಈ ಸರಕಾರಿ ಖಾಲಿ ಜಮೀನಿನಲ್ಲಿ ನಿವೇಶನ ರಹಿತ ಎಸ್ಸಿ ಕುಟುಂಬಗಳು ಡೇರೆ ಹಾಕಿ ಕುಳಿತಾಗ ಕಾನೂನು ಕ್ರಮ ಜರಗಿಸುವ ಎಚ್ಚರಿಕೆ ನೀಡಿ‌ ಅಲ್ಲಿಂದ ತೆರವುಗೊಳಿಸಿರುವ ಗ್ರಾಮಕರಣಿಕರು,ಇದೀಗ ಖಾಸಗಿ ವ್ಯಕ್ತಿಯೋರ್ವರು ಸರಕಾರಿ ಜಮೀನನ್ನು‌ ಅತಿಕ್ರಮಿಸಿದಾಗ ಗ್ರಾಮ ಪಂಚಾಯತ್ ಕಣ್ಣುಮುಚ್ಚಿ ಕುಳಿತಿದೆ ಎಂದು ಆರೋಪಿಸಿದರು. ತಹಶೀಲ್ದಾರರು ಕೂಡ ತಮ್ಮ ಮನವಿ ಸ್ವೀಕರಿಸಿ,ಸಮಸ್ಯೆ ಆಲಿಸುವ ಕನಿಷ್ಠ ಸೌಜನ್ಯವನ್ನು ತೋರಿಲ್ಲ ಎಂದು ಸುಂದರ ಹಾಗೂ ಜನಾರ್ದನ ಅವರು ಆರೋಪಿಸಿದ್ದು, ಈ ಜಮೀನು ಒತ್ತುವರಿಯನ್ನು ತೆರವುಗೊಳಿಸಿ ನಿವೇಶನರಹಿತ ಎಸ್ಸಿ,ಎಸ್ಟಿ ಸಮುದಾಯಕ್ಕೆ ಹಂಚಿಕೆ ಮಾಡದಿದ್ದಲ್ಲಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.ಇಲ್ಲವೇ ಲೋಕಾಯಕ್ತರ ಮೊರೆ ಹೋಗುವುದಾಗಿ ತಿಳಿಸಿದ್ದಾರೆ. ಸುದ್ದಿಗೋಷ್ಠೊಯಲ್ಲಿ ನಿತಿನ್ ಉಪಸ್ಥಿತರಿದ್ದರು.

More from the blog

ಭಾರೀ ಮಳೆ ಮುನ್ಸೂಚನೆ : ಒಂದು ವಾರ ಕರ್ನಾಟಕದ ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್..

ಮಂಗಳೂರು : ರಾಜ್ಯದ ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳಲ್ಲಿ ಇಂದಿನಿಂದ ಜುಲೈ 14ರವರೆಗೆ ಭಾರಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು,...

ಕುಡ್ತಮುಗೇರು: ಬಸ್ಸಿನಿಂದ ರಸ್ತೆಗೆ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೆ ಸಾವು 

ವಿಟ್ಲ: ಖಾಸಗಿ ಬಸ್ಸಿನಿಂದ ಬಿದ್ದ ವ್ಯಕ್ತಿಯೋರ್ವರು ಚಿಕಿತ್ಸೆಗೆ ಸ್ಪಂಧಿಸದೆ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಕುಡ್ತಮುಗೇರು ಎಂಬಲ್ಲಿ ನಡೆದಿದೆ. ಬಂಟ್ವಾಳ ತಾಲೂಕು ಕೊಳ್ನಾಡು ಗ್ರಾಮದ ಕೊಡಂಗೆ ನಿವಾಸಿ ಚಿದಾನಂದ ರೈ (43 ವ.) ಮೃತಪಟ್ಟವರು. ಜು.7ರಂದು ಬೆಳಗ್ಗೆ...

ನಾಯಕತ್ವ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ, ತಾಳ್ಮೆ ರೂಡಿಸಿಕೊಂಡಾಗ ಯಶಸ್ಸು ಸಾಧ್ಯ : ರೋ. ರಾಘವೇಂದ್ರ ಭಟ್

ಬಂಟ್ವಾಳ : ನಾಯಕತ್ವದ ಬೆಳವಣಿಗೆಗೆ ಶ್ರಮದೊಂದಿಗೆ ನಿಷ್ಠೆ ಮತ್ತು ತಾಳ್ಮೆ ರೂಡಿಸಿಕೊಳ್ಳಬೇಕು ಈ ನಿಟ್ಟಿನಲ್ಲಿ ಅವಕಾಶ ಗಳನ್ನು ಹುಡುಕಿಕೊಂಡು, ದೇಶದ ಇತಿಹಾಸದಲ್ಲಿ ಕಾಣುವ ವಿವಿಧ ಕ್ಷೆತ್ರದಲ್ಲಿ ಗಣನೀಯ ಸೇವೆ ಗೈದರವರ ಆದರ್ಶ ಗಳನ್ನು...

ಜು.10ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಆಯೋಜನೆ

ಬಿ.ಸಿ. ರೋಡ್ : ಸಮಸ್ತ ಜಗತ್ತು ಯುದ್ಧದತ್ತ ಸಾಗುತ್ತಿದೆ. ಭಾರತದಲ್ಲಿಯೂ ಜಿಹಾದಿ ಭಯೋತ್ಪಾದಕರು ಹಿಂದೂಗಳನ್ನು ಹತ್ಯೆ ಮಾಡಿ, ಭಾರತವನ್ನು ಯುದ್ಧಕ್ಕೆ ಪ್ರೇರೇಪಿಸುತ್ತಿದ್ದಾರೆ. ಶ್ರೀರಾಮ, ಶ್ರೀಕೃಷ್ಣನಂತಹ ಅವತಾರಗಳಿಂದ ಹಿಡಿದು ಛತ್ರಪತಿ ಶಿವಾಜಿ ಮಹಾರಾಜ, ಮಹಾರಾಣಾ...