Tuesday, July 8, 2025

ಕಾವಳಮೂಡೂರು ವ್ಯ.ಸೇ. ಸ. ಸಂಘ: ಕಾಂಗ್ರೆಸ್ ಬೆಂಬಲಿತ ಸದಸ್ಯರ ಅವಿರೋಧ ಆಯ್ಕೆ

ಬಂಟ್ವಾಳ: ಬಂಟ್ವಾಳ ತಾಲೂಕು ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಲ್ಲಿರುವ ಕಾವಳಮೂಡೂರು ವ್ಯವಸಾಯ ಸೇವಾ ಸಹಕಾರ ಸಂಘ ಇದರ ಆಡಳಿತ ಮಂಡಳಿಗೆ ಮುಂದಿನ 5 ವರ್ಷಗಳ ಅವಧಿಗೆ ಕಾಂಗ್ರೆಸ್ ಬೆಂಬಲಿತ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಆಡಳಿತ ಮಂಡಳಿ ಆಯ್ಕೆಗೆ ಜ.24 ರಂದು ನಡೆಯಬೇಕಾಗಿದ್ದ ಚುನಾವಣೆಗೆ ಸಂಘದ ಉಪನಿಯಮಗಳ ಪ್ರಕಾರ ಸ್ಪರ್ಧಿಸಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳು ಸರಿ ಸಮಾನರಾಗಿರುವುದರಿಂದ ಅವಿರೋಧವಾಗಿ ಈ ಆಯ್ಕೆ ನಡೆಸಲಾಗಿದೆ ಎಂದು ಜ.18 ರಂದು ಸಂಘದ ಕಚೇರಿಯಲ್ಲಿ ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಚುನಾವಣಾಧಿಕಾರಿ ಅವರು ಘೋಷಿಸಿದ್ದಾರೆ.
ಒಟ್ಟು 12 ಸ್ಥಾನಗಳಿಗೆ ಸಂಘದ ಹಾಲಿ ಅಧ್ಯಕ್ಷ, ಜಿ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್ ಅವರ ನೇತೃತ್ವದ ಸಂಗಳು ಆಡಳಿತ ಮಂಡಳಿಗೆ ಆಯ್ಕೆಯಾಗಿದ್ದಾರೆ. ಸಹಕಾರಿ ರತ್ನ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಮತ್ತು ಮಾಜಿ ಸಚಿವ ಬಿ.ರಮಾನಾಥ ರೈ ಅವರ ಅವರ ಮಾರ್ಗದರ್ಶನದಲ್ಲಿ ಇದುವರೆಗೂ ಇಲ್ಲಿ ಕಾಂಗ್ರೆಸ್ ಬೆಂಬಲಿತರು ಆಡಳಿತ ನಡೆಸುತ್ತಿದೆ ಎಂದು ಬಿ. ಪದ್ಮಶೇಖರ ಜೈನ್ ಅವರು ತಿಳಿಸಿದ್ದಾರೆ.
ಸಾಲಗಾರ ಸಾಮಾನ್ಯ ಸ್ಥಾನದಿಂದ ಬಿ.ಪದ್ಮಶೇಖರ ಕುಮಾರ್, ಹೇಮಂತ ಕುಮಾರ್, ದಯಾನಂದ ಶೆಟ್ಟಿ, ಪ್ರಮೋದ್ ಕುಮಾರ್, ನಾರಾಯಣ ಶೆಟ್ಟಿ, ಹಿಂದುಳಿದ ವರ್ಗದಿಂದ ಶ್ವನಾತ ಪೂಜಾರಿ, ಮಹಮ್ಮದ್ ಸಾಲಿಯಾ, ಮಹಿಳಾ ಸ್ಥಾನದಿಂದ ಗಾಯತ್ರಿ ಅರುಣ್, ರೇವತಿ, ಪ.ಜಾತಿ ಸ್ಥಾನದಿಂದ ಉಮಣ, ಪ. ಪಂಗಡದಿಂದ ಕೃಷ್ಣ ನಾಯ್ಕ, ಸಾಲಗಾರರಲ್ಲದ ಸ್ಥಾನದಿಂದ ಚಂದ್ರಹಾಸ ಅವರು ಆಯ್ಕೆಯಾಗಿದ್ದಾರೆ.
ರಿಟರ್ನಿಂಗ್ ಅಧಿಕಾರಿ, ಸಹಕಾರಿ ಸಂಘಗಳ ಉಪನಿಬಂಧಕರ ಕಚೇರಿಯ ಅಧಿಕಾರಿ ನಾಗೇಂದ್ರ ಅವರ ನೇತೃತ್ವದಲ್ಲಿ ಚುನಾವಣಾ ಪ್ರಕ್ರಿಯೆ ನಡೆಯಿತು. ಮುಖ್ಯ ಕಾರ್ಯನಿರ್ವಹಣಾಧಿಕಾರಿ, ಸಿಬಂದಿ ವರ್ಗ ಸಹಕರಿಸಿದರು.

More from the blog

Bantwal: ಅಪ್ರಾಪ್ತ ಬಾಲಕ ನೇಣಿಗೆ ಶರಣು:ಕಾರಣ ನಿಗೂಡ

ಬಂಟ್ವಾಳ: ಅಪ್ರಾಪ್ತ ಬಾಲಕನೊರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ತುಂಬೆ ಗ್ರಾಮದ ಪರ್ಲಕ್ಕೆ ಎಂಬಲ್ಲಿ ಜುಲೈ 7 ರಂದು ಸಂಜೆ ವೇಳೆ ನಡೆದಿದೆ. ತುಂಬೆ ಪರ್ಲಕ್ಕೆ ನಿವಾಸಿ ಕರುಣಾಕರ ಗಟ್ಟಿ ಅವರ...

ಕುಜ್ಲುಬೆಟ್ಟು ಶಾಲೆ : ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮ

ಬಂಟ್ವಾಳ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ.) ಬಂಟ್ವಾಳ ಹಾಗೂ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಮತ್ತು ಶಾಲಾಭಿವೃದ್ಧಿ ಸಮಿತಿ ಕುಜ್ಲುಬೆಟ್ಟು ಇದರ ಸಹಯೋಗದೊಂದಿಗೆ ಇಂದು ಶಾಲಾ ಪರಿಸರದಲ್ಲಿ...

Puttur : ನಾಪತ್ತೆಯಾಗಿದ್ದ ಯುವತಿ ಮನೆಗೆ ಬಿಜೆಪಿ ಪ್ರಮುಖರು, ಹಿಂದೂ ಸಂಘಟನೆಯ ಮುಖಂಡರು ಭೇಟಿ..

ಪುತ್ತೂರು: ಪುತ್ತೂರಿನಿಂದ ಇತ್ತೀಚೆಗೆ ನಾಪತ್ತೆಯಾಗಿದ್ದು, ನಂತರ ಬೆಂಗಳೂರಿನಲ್ಲಿ ಪತ್ತೆಯಾದ ಯುವತಿ ರೂಪ ಅವರ ಮನೆಗೆ ಬಿಜೆಪಿ ಪ್ರಮುಖರು ಹಾಗೂ ಹಿಂದೂ ಸಂಘಟನೆಯ ಮುಖಂಡರು ಭೇಟಿ ನೀಡಿದ್ದಾರೆ. ಯುವತಿಯ ಪತ್ತೆಯಾದ ನಂತರ, ಹಿಂದೂ ಸಂಘಟನೆಯ ಮುಖಂಡರು,...

ಬೂಡಾ ಸಹಾಯಕ ಕಾರ್ಯದರ್ಶಿಯಾಗಿ ಗಾಯತ್ರಿ ಡೊಂಬರ್ ಅಧಿಕಾರ ಸ್ವೀಕಾರ..

ಬಂಟ್ವಾಳ : ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಸಹಾಯಕ ಕಾರ್ಯದರ್ಶಿಯಾಗಿ ಶ್ರೀಮತಿ ಗಾಯತ್ರಿ ಡೊಂಬರ್ ಅಧಿಕಾರ ಸ್ವೀರಕರಿಸಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ಮತ್ತು ಸಿಬಂಧಿವರ್ಗ ಉಪಸ್ಥಿತರಿದ್ದರು.