ಬಂಟ್ವಾಳ: ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್ ನ ಬೃಹತ್ ಅಮ್ಜದಿ ಸಂಗಮ ಹಾಗೂ ಜಾಮಿಅಃ ಅಮ್ಜದಿಯ್ಯಃ ರಝ್ವಿಯ್ಯಃ ದ ಮುತವ್ವಲ್ ಕೋರ್ಸ್ ಗೆ ಪ್ರವೇಶ ಪರೀಕ್ಷೆ ಕಾವಳಕಟ್ಟೆ ಅಲ್ ಖಾದಿಸಾ ವಿದ್ಯಾಸಂಸ್ಥೆ ಯಲ್ಲಿ ಫೆಬ್ರವರಿ 12 ಸೋಮವಾರದಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.

ಕರ್ನಾಟಕ ರಾಜ್ಯ ಅಮ್ಜದೀಸ್ ಅಸೋಸಿಯೇಷನ್‌ನ ರಾಜ್ಯಾಧ್ಯಕ್ಷ ಎ ಕೆ ರಝಾ ಅಮ್ಜದಿ ಉಪ್ಪಿನಂಗಡಿ ಅಧ್ಯಕ್ಷತೆ ವಹಿಸುವರು ಕಾವಳಕಟ್ಟೆ ಹಝ್ರತ್ ಸಭೆಯನ್ನು ಉದ್ಘಾಟಿಸುವರು ನಿರ್ಧೇಶಕರಾದ ಯೂಸುಫ್ ರಝಾ ಅಮ್ಜದಿ ದಾವಣಗೆರೆ ಮುಖ್ಯ ಪ್ರಭಾಷಣಗೈಯ್ಯಲಿರುವರು ಎಂದು ಅಮ್ಜದೀಸ್ ಅಸೋಸಿಯೇಷನ್ ನ ರಾಜ್ಯ ಕಾರ್ಯದರ್ಶಿ ಹಾಫಿಳ್ ಮುಈನುದ್ದೀನ್ ಅಮ್ಜದಿ ಉಳ್ಳಾಲ ಪತ್ರಿಕಾ ಪ್ರಕಟಣೆ ಯಲ್ಲಿ ತಿಳಿಸಿದ್ದಾರೆ.