Thursday, June 26, 2025

ಕ್ಷೇತ್ರದ ಮಹಿಮೆ ಎತ್ತಿ ಹಿಡಿದ ಕಟ್ಟೆಮಾರು ಶ್ರೀ ಮಂತ್ರದೇವತಾ, ಸ್ವಾಮಿ ಕೊರಗಜ್ಜ ಶ್ರೀ ಗುಳಿಗ ಸಾನಿಧ್ಯ

ಕಲ್ಲಡ್ಕ: ಬಂಟ್ವಾಳ ತಾಲೂಕಿನ ಕಟ್ಟೆಮಾರ್ ಶ್ರೀ ಮಂತ್ರದೇವತಾ,ಸ್ವಾಮಿ ಕೊರಗಜ್ಜ, ಶ್ರೀ ಗುಳಿಗ ಸಾನಿಧ್ಯ ಕ್ಷೇತ್ರವು ತನ್ನ ಮಹಿಮೆಯನ್ನು ತೊರ್ಪಡಿಸಿದ ಅಪರೂಪದ ಘಟನೆ ಒಂದು ಸಂಭವಿಸಿದೆ.

ಫೆಬ್ರವರಿ10 ರಂದು ಸಾನಿಧ್ಯದಲ್ಲಿ ನಡೆದ ವಾರ್ಷಿಕ ಕೋಲೊತ್ಸವ ಸಂದರ್ಭದಲ್ಲಿ ಕ್ಷೇತ್ರದ ಭಕ್ತಿಯಾಗಿ ಆಗಮಿಸಿದ ಸುಳ್ಯ ಸಂಪಾಜೆಯ ಧನ್ಯ ಎಂಬ ಮಹಿಳೆಯ ಬ್ಯಾಗಿನಿಂದ ಸುಮಾರಿ 23 ಸಾವಿರ ರೂಪಾಯಿ ಹಣ ಕಳವಾಗಿತ್ತು.

ಈ ಬಗ್ಗೆ ನೊಂದ ಮಹಿಳೆ ಶ್ರೀ ಮಂತ್ರ ದೇವತೆ ಹಾಗೂ ಸ್ವಾಮಿ ಕೊರಗಜ್ಜನ ಕೋಲೊತ್ಸವದಲ್ಲಿ ದೈವದ ಮುಂದೆ ಹರಕೆ ಮಾಡಿದ್ದರು.

ಧೈವವು ಕಳೆದುಕೊಂಡದ್ದನ್ನು ಆದಷ್ಟು ಬೇಗ ಒದಗಿಸುವುದಾಗಿ ಅಭಯ ನೀಡಿದ್ದು ಕೇವಲ ಒಂದೇ ದಿನದಲ್ಲಿ ತನ್ನ ಮಹಿಮೆಯನ್ನು ತೋರಿಸಿದೆ. ಇವತ್ತು ಬೆಳಿಗ್ಗೆ ಕ್ಷೇತ್ರದಲ್ಲಿ ಸಂಕ್ರಮಣ ನಿಮಿತ್ತ ಪೂಜಾ ಕಾರ್ಯಕ್ರಮ ನಡೆಯುತ್ತಿರುವಾಗ ಕಾಣಿಕೆ ಡಬ್ಬಿಯ ಅಡಿಯಲ್ಲಿ 23000 ರೂಪಾಯಿ ಕಟ್ಟು ಒಂದನ್ನು ನೂಳಿನಲ್ಲಿ ಕಟ್ಟಿ ಇಟ್ಟದ್ದು ಗಮನಕ್ಕೆ ಬಂತು.

More from the blog

Bantwal : ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ” ಅಭಿಯಾನ – 2025 ಕಾರ್ಯಕ್ರಮ..

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ, ಬಂಟ್ವಾಳ ವೃತ್ತದ ಪೋಲೀಸ್ ಠಾಣೆಯ ಹಾಗೂ ಶಿಕ್ಷಣ ಇಲಾಖೆ, ರೋಟರಿ ಕ್ಲಬ್ ಬಂಟ್ವಾಳ ಲೊರೆಟ್ಟೊ ಹಿಲ್ಸ್, ಬಂಟ್ವಾಳ ಟೌನ್ ಮೊಡಂಕಾಪು ಇವರ ಸಂಯುಕ್ತ ಆಶ್ರಯದಲ್ಲಿ " ಮಾದಕ...

Netravathi River : ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆ – ಎಚ್ಚರಿಕೆ ವಹಿಸಲು ಸೂಚನೆ..

ಬಂಟ್ವಾಳ: ನೇತ್ರಾವತಿ ನದಿ‌ ನೀರಿನ ಮಟ್ಟ ಏಕಾಏಕಿ ಏರಿಕೆಯಾಗಿದ್ದು 7.4 ಆಗಿದೆ. ಬೆಳಿಗ್ಗೆ 6 ಗಂಟೆಯ ವೇಳೆಗೆ 6.7 ರಲ್ಲಿ ಹರಿಯುತ್ತಿದ್ದ ನದಿ ನೀರು ಸುಮರು 8.30 ಗಂಟೆಗೆ 7.5 ಕ್ಕೆ ಏರಿಕೆಯಾಗಿದೆ. ಅಪಾಯದ...

Bantwal Police :ಜೂನ್ 26 ರಂದು ” ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ ” ಅಭಿಯಾನ 2025 ಕಾರ್ಯಕ್ರಮ

ಬಂಟ್ವಾಳ: ದ.ಕ.ಜಿಲ್ಲಾ ಪೋಲೀಸ್ ಇಲಾಖೆ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಇಲಾಖೆಯ ವತಿಯಿಂದ ಬಿಸಿರೋಡಿನಲ್ಲಿ ಜೂನ್ 26 ರಂದು " ಮಾದಕ ದ್ರವ್ಯ ಮುಕ್ತ ಸಮಾಜಕ್ಕಾಗಿ " ಅಭಿಯಾನ 2025 ಕಾರ್ಯಕ್ರಮ ನಡೆಯಲಿದೆ...

Kalladka : ಕಲ್ಲಡ್ಕ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತ..

ಬಂಟ್ವಾಳ : ಬಂಟ್ವಾಳ ತಾಲೂಕಿನ ಕಲ್ಲಡ್ಕದ ಪ್ಲೈ ಓವರ್ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಬಿಸಿರೋಡು - ಅಡ್ಡಹೊಳೆ ಅತೀ ಉದ್ದದ ಪ್ಲೈ ಓವರ್ ಸಂಪೂರ್ಣವಾಗಿ ಸಂಚಾರಕ್ಕೆ ಮುಕ್ತವಾಗಿದೆ. ಕಳೆದ 25 ದಿನಗಳ ಹಿಂದೆ...