Wednesday, February 12, 2025

ಕಟ್ಟೆಮಾರು ಮಂತ್ರದೇವತಾ ಸಾನಿಧ್ಯದಲ್ಲಿ ದೊಂಧಿ ಬೆಳಕಿನ ವಾರ್ಷಿಕ ಕೋಲೋತ್ಸವ

ಕಲ್ಲಡ್ಕ: ಧಾರ್ಮಿಕ ಕ್ಷೇತ್ರದಲ್ಲಿ ಸಿಗುವ ಸಂತೃಪ್ತಿ ಬೇರೆ ಯಾವ ಕ್ಷೇತ್ರದಲ್ಲೂ ಸಿಗುವುದಿಲ್ಲ, ಮಾಡುವ ಯಾವುದೇ ಕೆಲಸ ದೇವರಿಗೆ ಹಿತವಾಗಿರಲಿ ಎಂದು ಮಾಡಿದಾಗ ಆ ಕೆಲಸಕ್ಕೆ ದೇವರ ಆಶೀರ್ವಾದ ಖಂಡಿತ ಸಿಗುತ್ತೆ. ವೈದ್ಯರು ಮಾಡದ ಕೆಲಸ ದೈವದೇವರ ಅನುಗ್ರಹದಿಂದ ಸಾಧ್ಯವಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ರವರು ಹೇಳಿದರು.

ಅವರು ಬಂಟ್ವಾಳ ತಾಲೂಕಿನ ಕಟ್ಟೆಮಾರ್ ಮಂತ್ರದೇವತಾ ಸಾನಿಧ್ಯದಲ್ಲಿ ದೊಂಧಿ ಬೆಳಕಿನಲ್ಲಿ ನಡೆಯುವ ವಾರ್ಷಿಕ ಕೋಲೋತ್ಸವದ ಧಾರ್ಮಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ತನ್ನ ಸ್ವಂತ ಅನುಭವವನ್ನು ವಿವರಿಸುತ್ತಾ,ಕಟ್ಟೆಮಾರು ಕ್ಷೇತ್ರದ ಮಹಿಮೆ ಅಪಾರವಾದದ್ದು ಕಷ್ಟದ ಕಾಲದಲ್ಲಿ ಕೈ ಹಿಡಿದ ತಾಯಿ ಆಶೀರ್ವದಿಸಿದಳು, ರಾಜಕೀಯ ಧಾರ್ಮಿಕ ಸಾಮಾಜಿಕ ಕಾರ್ಯಗಳಿಗೆ ಆಶೀರ್ವಾದ ನೀಡಿದ್ದು ಗುಂಪಲದ ಶ್ರೀ ಕೃಷ್ಣ ದೇವಾಲಯದ ಸಾಮಾನ್ಯ ಕಾರ್ಯಕರ್ತನಿಗೆ ಇವತು ರಾಷ್ಟ್ರೀಯ ಪಕ್ಷದ ಜಿಲ್ಲಾ ಅಧ್ಯಕ್ಷ ಸ್ಥಾನ ತಲುಪಲು ಸಾಧ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಮೋಹನ್ ರಾಜ್ ಚೌಟ ಪುಂಚೋಳಿಮಾರು ಗುತ್ತು ರವರು ವಹಿಸಿದರು.

ಈ ಸಂದರ್ಭದಲ್ಲಿ ಕ್ಷೇತ್ರದ ಜನಸೇವಾ ಟ್ರಸ್ಟಿನ ಮುಖಾಂತರ 9 ಬಡ ಕುಟುಂಬಗಳಿಗೆ ಸಹಾಯ ಹಸ್ತ ನೀಡಲಾಯಿತು.

ಪುಣ್ಯಭೂಮಿ ಟ್ರಸ್ಟ್ ವತಿಯಿಂದ ನಿರ್ಮಾಣವಾಗುತ್ತಿರುವ ಬಡ ಮಹಿಳೆಯ ಮನೆಯ ಕೆಲಸಕ್ಕೆ ಸಹಾಯಧನ ನೀಡಲಾಯಿತು. ತಂತ್ರಜ್ಞಾನದ ಮೂಲಕ ಶೈಕ್ಷಣಿಕ ಪ್ರಗತಿ ಸಾಗಿಸಲು ಅನುಕೂಲವಾಗುವಂತೆ ಸರಕಾರಿ ಪ್ರಾಥಮಿಕ ಶಾಲೆ ಮಜಿ ವಿರಕಂಬ ಇಲ್ಲಿಗೆ ಸ್ಮಾರ್ಟ್ ಟಿವಿ ಕೊಡುಗೆಯಾಗಿ ನೀಡಲಾಯಿತು.

ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು. ರಾಜಕೇಶ್ವರಿ ಸಂಘಟನೆ ಬೆಳ್ತಂಗಡಿ ವತಿಯಿಂದ ನಡೆಯುವ ಬೆಳ್ತಂಗಡಿ ಉತ್ಸವ ಹಾಗೂ ಕೃಷಿ ಮೇಳದ ಆಮಂತ್ರಣ ಪತ್ರಿಕೆಯನ್ನು ಘನ್ಯರ ಸಮ್ಮುಖದಲ್ಲಿ ಬಿಡುಗಡೆಗೊಳಿಸಲಾಯಿತು.

ಮಂತ್ರ ಕ್ರಿಯೇಶನ್ ವತಿಯಿಂದ “ಮಾಯದಪ್ಪೆ” ಹಾಗೂ ಕ್ಷೇತ್ರದ ಕಿಶೋರ್ ಕುಮಾರ್ ಕಟ್ಟೆಮಾರ್ ಹಾಡಿರುವ “ಕರಿಕಲ್ಲ ಪುರ್ಪ ” ಆಲ್ಬಮ್ ಸಾಂಗ್ ಬಿಡುಗಡೆಗೊಳಿಸಲಾಯಿತು.

ಭವಿಷ್ ಬಿಡಿಸಿದ ಮಂತ್ರ ದೇವತೆಯ ಪೆನ್ಸಿಲ್ ಆರ್ಟ್ ಚಿತ್ರವನ್ನು ಮನೋಜ್ ಕತ್ತೆಮಾರ್ ರವರಿಗೆ ಹಸ್ತಾಂತರ ಮಾಡಲಾಯಿತು.

ವೇದಿಕೆಯಲ್ಲಿ ಹೆಬ್ಬೆವ್ ಫಾರ್ಮ್ಸ್ ಪೆನ್ ಕೊಡ ತೆಲಂಗಾಣದ ಅಶ್ರೀತ್ ಕಿಶನ್, ರೈತ ಸಂಘ ಬೆಂಗಳೂರಿನ ಸಂಚಾಲಕರಾದ ಕೆ ಎಲ್ ಗೋಪಾಲಕೃಷ್ಣ, ಬಂಟ್ವಾಳ ಕ್ಷೇತ್ರ ನೂತನ ಬಿಜೆಪಿ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್,ನಟೇಶ್ ಪೂಜಾರಿ ಉದ್ಯಮಿ ಬೆಂಗಳೂರು, ಹರೀಶ್ ಶೆಟ್ಟಿ ಉದ್ಯಮಿ ಮುಂಬೈ, ನಂದಾವರ ದೇವಸ್ಥಾನದ ವ್ಯವಸ್ಥೆಪನ ಸಮಿತಿಯ ಮಾಜಿ ಅಧ್ಯಕ್ಷರಾದ ಅರವಿಂದ ಭಟ್ ಪದ್ಯಾಣ , ಅಶೋಕ್ ಕರ್ಕೇರ ಉದ್ಯಮಿ ಬೊಂಬಾಯಿ, ಪ್ರವೀಣ್ ಕಕ್ಕೇರ, ವಿದ್ಯಾಧರ ಪೂಜಾರಿ ಕಡೇಶಿವಾಲಯ, ಭೂಸೇನೆಯ ಸೈನಿಕ ವಸಂತ ಪೂಜಾರಿ ಅಟ್ಟದಡ್ಕ, ಬಂಟ್ವಾಳ ಪಂಚಾಯತ್ ರಾಜ್ ಇಂಜಿನಿಯರ್ ಉಪ ವಿಭಾಗದ ಎ ಇ ಇ ತಾರಾನಾಥ ಸಾಲಿಯನ್, ರಾಜೇಶ್ ಕಣ್ಣೂರು, ಸಂದೀಪ್ ಬೆಳ್ತಂಗಡಿ, ಜಗದೀಶ್ ಬಜ್ಜಾರ್, ವಿಜಯವಾಣಿ ಬೆಳ್ತಂಗಡಿ, ಜಯಂತ್ ವೈ ಪೆರ್ಲ,ಕಿಶೋರ್ ಕುಮಾರ್ ಕಟ್ಟೆಮಾರ್, ಸಂದೀಪ್ ಕುಪ್ಪೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.

ಕಟ್ಟೆಮರು ಕ್ಷೇತ್ರದ ಧರ್ಮದರ್ಶಿ ಮನೋಜ್ ಕುಮಾರ್ ಕಟ್ಟೆಮರ್ ಪ್ರಾಸ್ತಾವಿಕದೊಂದಿಗೆ ಗಣ್ಯರನ್ನು ಸ್ವಾಗತಿಸಿ, ಪ್ರಜ್ಞ ಪೂಜಾರಿ ಓಡಿಲ್ನಾಲ ವಂದಿಸಿ ಕಾರ್ಯಕ್ರಮ ನೀರೂಪಿಸಿದರು ನಂತರ ಶ್ರೀಮಂತ್ರದೇವತೆಗೆ ದೊಂದಿ ಬೆಳಕಿನಲ್ಲಿ ವೈಭವದ ಕೋಲೋತ್ಸವ ಜರಗಿತು

. ಈ ಸಂದರ್ಭದಲ್ಲಿ ದೈವ ನರ್ತಕ ಕಮಲಾಕ್ಷ ರವರಿಗೆ ಕ್ಷೇತ್ರದ ವತಿಯಿಂದ ಬಂಗಾರದ ಕೈ ಕಡಗ ನೀಡಿ ಗೌರವಿಸಲಾಯಿತು. ಅರುಣ್ ಕುಮಾರ್ ಪುತ್ತಿಲ ಸೇರಿದಂತೆ ಗಣ್ಯಾತಿಗಣ್ಯರು ಆಗಮಿಸಿ ದೈವದ ಗಂದ ಪ್ರಸಾದ ಸ್ವೀಕರಿಸಿದರು.

More from the blog

ಚಾಲಕನಿಗೆ ಮೂರ್ಚೆ ರೋಗ ಬಂದು ಡಿವೈಡರ್ ಮೇಲೆ ಹತ್ತಿದ ಲಾರಿ

ಬಂಟ್ವಾಳ: ರಾ.ಹೆ.75ರ ತುಂಬೆ ಸಮೀಪ ಚಾಲಕನಿಗೆ ಮೂರ್ಛೆ ರೋಗ ಬಂದು ಲಾರಿಯೊಂದು ಡಿವೈಡರ್ ಮೇಲೆ ಹತ್ತಿ ಸುಮಾರು 100 ಮೀ.ನಷ್ಟು ಚಲಿಸಿ ನಿಂತಿದ್ದು,‌ ಸೀಟಿನಲ್ಲಿ ಬಿದ್ದಿದ್ದ ಚಾಲಕನನ್ನು ಸ್ಥಳೀಯರು ತುಂಬೆ ಆಸ್ಪತ್ರೆಗೆ ‌ಕರೆದುಕೊಂಡು...

ನೇಣು ಬಿಗಿದು ಯುವಕ ಆತ್ಮಹತ್ಯೆ

ಬಂಟ್ವಾಳ: ಖಿನ್ನತೆಯಿಂದ ಅವಿವಾಹಿತ ವ್ಯಕ್ತಿಯೊರ್ವನು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಮ್ಟಾಡಿ ನಿವಾಸಿ ಮೆಕ್ಸಿನ್ ತಾವ್ರೋ ಅವರ ಮಗ ಜೀವನ್  ತಾವ್ರೋ ( 37) ಆತ್ಮಹತ್ಯೆ ಮಾಡಿಕೊಂಡ ಯುವಕ. ‌‌‌ಜೀವನ್ ಅವರು ಅಗಾಗ...

ಅಕ್ರಮ ಮಸೀದಿ ನಿರ್ಮಾಣ ಆರೋಪ: ಕರಿಯಂಗಳ ಗ್ರಾ.ಪಂ.ಗೆ ಮುತ್ತಿಗೆ

ಬಂಟ್ವಾಳ: ಗ್ರಾಮ ಪಂಚಾಯತ್ ಅನುಮತಿ ಇಲ್ಲದೆ ಅಕ್ರಮವಾಗಿ ಸರಕಾರಿ ಜಾಗದಲ್ಲಿ ಕಟ್ಟಡ ನಿರ್ಮಿಸಿ ಅದರಲ್ಲಿ ಮದರಸ ಮಾಡಲು ಮುಂದಾಗಿದ್ದರೆ ಎಂದು ಆರೋಪಿಸಿದ ಗ್ರಾಮಸ್ಥರು ಇದನ್ನು ತಡೆಯುವಂತೆ ಗ್ರಾಮ ಪಂಚಾಯತ್ ಗೆ ಮುತ್ತಿಗೆ ಹಾಕಿದ...

ಪುರಸಭೆ ಎಡವಿದೆಲ್ಲಿ? ಬ್ಯಾನರ್ ವಿವಾದ!

ಬಂಟ್ವಾಳ: ಬಂಟ್ವಾಳ ಪುರಸಭೆ ನಿಯಮ ಉಲ್ಲಂಘಿಸಿ ಹಾಕಲಾದ ಫ್ಲೆಕ್ಸ್ ತೆರವು ಕಾರ್ಯಾಚರಣೆಯನ್ನು ತಡವಾಗಿ ಪ್ರಾರಂಭಿಸಿದೆ. ಜನವರಿ 29ರಂದು ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ಕುರಿತು ಪುರಸಭೆಯ ಮುಖ್ಯಾಧಿಕಾರಿ ತೆರವು ಕಾರ್ಯಾಚರಣೆ ನಡೆಸುವುದಾಗಿ ಘೋಷಿಸಿ,...