ಬಂಟ್ವಾಳ: ವಿಶ್ವ ಹಿಂದೂ ಪರಿಷದ್ ಬಜರಂಗದಳ ದುರ್ಗಾಂಭ ಶಾಖೆ ಮಂಡಾಡಿ ಬಂಟ್ವಾಳ ಪ್ರಖಂಡ ಇದರ ನೂತನ ಕಟ್ಟೆಯ ಲೋಕಾರ್ಪಣೆ ಮಂಡಾಡಿ ವಿದ್ಯಾಗಿರಿ ಶಾಲಾ ಬಳಿ ನಡೆಯಿತು.


ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯಧ್ಯಕ್ಷರಾದ ಭಾಸ್ಕರ್ ಧರ್ಮಸ್ಥಳ ಬಜರಂಗದಳದ ಕಟ್ಟೆಯನ್ನು ಲೋಕಾರ್ಪಣೆ ಮಾಡಿದರು. ಬಜರಂಗದಳದ ಜಿಲ್ಲಾ ಸಹಸಂಚಾಲಕರಾದ ಗುರುರಾಜ್ ಬಂಟ್ವಾಳ್, ಬಜರಂಗದಳದ ಪ್ರಖಂಡ ಸಂಚಾಲಕ್ ಶಿವಪ್ರಸಾದ್ ತುಂಬೆ, ಸಂತೋಷ್ ಸರಪಾಡಿ, ದೀಪಕ್ ಅಜೆಕಳ, ಕಿರಣ್ ಕಾಪಿಕಾಡ್, ಹರೀಶ್ ಅಮ್ಟಾಡಿ, ಹರೀಶ್ ಮಂಡಾಡಿ, ಲಕ್ಷ್ಮಣ್ ಮಂಡಾಡಿ, ಅನಿಲ್ ಮಂಡಾಡಿ ಹಾಗೂ ಘಟಕದ ಕಾರ್ಯಕರ್ತರು ಉಪಸ್ಥಿತರಿದ್ದರು.

