Monday, January 26, 2026

ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ 2020ರ ಜ.30ರಂದು ಬ್ರಹ್ಮಕಲಶೋತ್ಸವ

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ದೇವಸ್ಥಾನಗಳಲ್ಲಿ ಒಂದಾದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವದ ಸೋಮವಾರದಂದು ಕಟೀಲು ದೇವರಿಗೆ ಅಷ್ಟಬಂಧ ನಡೆದು, ಸಾನ್ನಿಧ್ಯ ಕಲಶಾಭಿಷೇಕ, ಚಿನ್ನದ ರಥೋತ್ಸವ ಸಂಪನ್ನಗೊಂಡಿದೆ. ಶ್ರೀ ಕ್ಷೇತ್ರದಲ್ಲಿ ಪ್ರತಿ ದಿನ ರಂಗಪೂಜೆ ನಡೆಯಲಿದ್ದು, ಮುಂದಿನ ಮೂರು ವರುಷಗಳಿಗಾಗುವಷ್ಟು ರಂಗಪೂಜೆಗಳು ಮುಂಗಡ ನೋಂದಣಿಯಾಗಿರುವುದರಿಂದ ಅಷ್ಟಬಂಧ ಸಾನ್ನಿಧ್ಯ ಕಲಶ ನಡೆದ ಬಳಿಕ ಪ್ರತಿದಿನ ಹನ್ನೆರಡು ರಂಗಪೂಜೆಗಳು ನಡೆಯಲಿವೆ.
ಸಂಭ್ರಮಕ್ಕೆ ಪೆ.22 ರಂದು ಅದ್ದೂರಿ ಚಾಲನೆ ದೊರಕಿದೆ. ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡ ನಡೆಯಲಿವೆ. ಕಳೆದ 18 ವರ್ಷಗಳ ಹಿಂದೆ ಅಂದರೆ 2007ರ ಏಪ್ರಿಲ್‌ನಲ್ಲಿ ಬ್ರಹ್ಮಕಲಶೋತ್ಸವ ನಡೆದಿತ್ತು.


ಕಟೀಲು ದೇವಿಯ ಮೂಲ ಸಾನ್ನಿಧ್ಯ ಭ್ರಾಮರೀ ವನದಲ್ಲಿ ಪೂರ್ವಸಿದ್ಧತೆ ಪೂರ್ಣಗೊಂಡಿದೆ. ಬ್ರಹ್ಮಕಲಶೋತ್ಸವ ಸಂದರ್ಭ ನಡೆಯುವ ಮೂರು ಪ್ರಮುಖ ಧಾರ್ಮಿಕ ವಿಧಿಗಳಾದ ಫೆ.1ರ ನಾಗಮಂಡಲೋತ್ಸವ, ಫೆ.2ರ ಕೋಟಿ ಜಪಯಜ್ಞ ಸಮಾಪ್ತಿ ಹಾಗೂ ಫೆ.3ರಂದು ಹತ್ತು ಮಹಾಕುಂಡಗಳಲ್ಲಿ ಸಹಸ್ರ ಚಂಡಿಕಾ ಯಾಗಗಳು ಭ್ರಾಮರೀ ವನದಲ್ಲಿಯೇ ನಡೆಯಲಿದೆ. ಹತ್ತು ಮಹಾ ಕುಂಡಗಳಲ್ಲಿ ನಡೆಯಲಿರುವ ಸಹಸ್ರ ಚಂಡಿಕಾಯಾಗಕ್ಕೆ ಸಿದ್ಧತೆ ನಡೆಯುತ್ತಿದೆ.
ಬ್ರಹ್ಮಕಲಶಕ್ಕೆ 1127 ಬೆಳ್ಳಿ ಕಲಶ ಸಿದ್ಧವಾಗಿದೆ. ಜ.30ರಂದು ಬೆಳಗ್ಗೆ 9.37ರ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಪ್ರಧಾನ ಸ್ವರ್ಣಕಲಶ ಹಾಗೂ 1,127 ಬೆಳ್ಳಿ ಕಲಶಗಳಿಂದ ಶ್ರೀದೇವಿಗೆ ಅಭಿಷೇಕ ನಡೆಯಲಿದೆ. ಕಲಶಮಂಡಲ ಪೂಜೆಯ ವೇಳೆ ಪ್ರಧಾನ ಸ್ವರ್ಣ ಕಲಶವನ್ನು ಮಂಡಲ ಮಧ್ಯೆ ಪ್ರತಿಷ್ಠಾಪಿಸಲಾಗುತ್ತದೆ. 27 ದೊಡ್ಡ ಗಾತ್ರದ ಬೆಳ್ಳಿಯ ಖಂಡ ಕಲಶಗಳು ಹಾಗೂ 1100 ಬೆಳ್ಳಿಯ ಸಣ್ಣ ಕಲಶಗಳನ್ನು ಮಂಡಲದಲ್ಲಿಇರಿಸಿ ಪೂಜಿಸಿ ಬಳಿಕ ದೇವಿಗೆ ಅಭಿಷೇಕ ಮಾಡಲಾಗುತ್ತದೆ.
ಕ್ಷೇತ್ರದ ಮಹಾಲಕ್ಷಿತ್ರ್ಮೕ ಆನೆಗೆ ಸುಮಾರು 50 ವರ್ಷ ಹಳೆಯ ಕಟ್ಟಡವನ್ನು ತೆರವುಗೊಳಿಸಿ ಅದೇ ಜಾಗದಲ್ಲಿ9 ಮೀ. ಎತ್ತರದ ನೂತನ ಗಜಾಲಯ ನಿರ್ಮಿಸಲಾಗಿದೆ. ಆನೆಗೆ ಸ್ನಾನಕ್ಕೆ ಶವರ್‌ಬಾತ್‌ ವ್ಯವಸ್ಥೆ, ಲೈಟ್‌, ಫ್ಯಾನ್‌, ಕುಡಿಯುವ ನೀರಿನ ಟ್ಯಾಂಕ್‌ ಹಾಗೂ ನೀರು ಸರಬರಾಜು ಸಂಪರ್ಕ, ಸುಲಭ ಸ್ವಚ್ಛತಾ ವ್ಯವಸ್ಥೆಗೆ ಅನ್ವಯಿಸುವಂತೆ ನೆಲದ ಕಾಮಗಾರಿ ನಿರ್ವಹಿಸಲಾಗಿದೆ. ಬ್ರಹ್ಮರಥ-ಬೆಳ್ಳಿರಥಕ್ಕೆ ನೂತನ ಕೊಠಡಿ: ರಥಬೀದಿಯಲ್ಲಿದೇವಾಲಯದ ಬ್ರಹ್ಮರಥ ಹಾಗೂ ಬೆಳ್ಳಿರಥಗಳ ಸುಸಜ್ಜಿತ ಕೊಠಡಿ ನಿರ್ಮಾಣಗೊಂಡಿದೆ. ಪ್ರತ್ಯೇಕ ಸ್ಥಳಗಳಲ್ಲಿದ್ದ ಎರಡು ಕೊಠಡಿಗಳನ್ನು ತೆರವುಗೊಳಿಸಿ, ರಥಬೀದಿಯಲ್ಲಿಬ್ರಹ್ಮರಥ ಹಾಗೂ ಬೆಳ್ಳಿರಥಕ್ಕೆ ಸುಸಜ್ಜಿತ ಕೊಠಡಿ ನಿರ್ಮಿಸಲಾಗಿದೆ.


ಕ್ಷೇತ್ರದಲ್ಲಿ ನಡೆಯಲಿರುವ ಪ್ರಮುಖ ಕಾರ್ಯಕ್ರಮಗಳು:
ಜ.22ರಂದು ತೋರಣ ಮುಹೂರ್ತ, ಉಗ್ರಾಣ ಮುಹೂರ್ತ
ಜ.23ರಂದು ಸಹಸ್ರ ಚಂಡಿಕಾ ಸಪ್ತಶತೀ ಪಾರಾಯಣ, ಕೋಟಿ ಜಪ ಯಜ್ಞ
ಜ.24ರಂದು ನೂತನ ಸುವರ್ಣ ಧ್ವಜಪ್ರತಿಷ್ಠೆ,
ಜ.25ರಿಂದ 29ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು,
ಜ.30ರಂದು ಬೆಳಗ್ಗೆ 9.37ಕ್ಕೆ ಮೀನ ಲಗ್ನದ ಶುಭ ಮುಹೂರ್ತದಲ್ಲಿ ಬ್ರಹ್ಮಕಲಶಾಭಿಷೇಕ ಹಾಗೂ ಅದೇ ದಿನ ಸಂಜೆ ಮಹಾರಥೋತ್ಸವ
ಫೆ.1ರಂದು ಸಂಜೆ 7 ಗಂಟೆಗೆ ಸಗ್ರಿ ಗೋಪಾಲಕೃಷ್ಣ ಸಾಮಗರ ನೇತೃತ್ವದಲ್ಲಿ ಮದ್ದೂರು ಕೃಷ್ಣಪ್ರಸಾದ ವೈದ್ಯ ಬಳಗದ ಸಹಕಾರದಲ್ಲಿ ನಾಗಮಂಡಲೋತ್ಸವ
ಫೆ.2ರಂದು ಬೆಳಗ್ಗೆ ಸಹಸ್ರ ನಾರಿಕೇಳ ಗಣಯಾಗ, ಕೋಟಿ ಜಪಯಜ್ಞ ಪರಿಸಮಾಪ್ತಿ
ಫೆ.3ರಂದು ಸಹಸ್ರ ಚಂಡಿಕಾಯಾಗ ಪೂರ್ಣಾಹುತಿ ನಡೆಯಲಿದೆ.
ಜ.22ರಿಂದ ಫೆ.3ರವರೆಗೆ ಪ್ರತಿದಿನ ಸಂಜೆ ಧಾರ್ಮಿಕ ಸಭೆ ನಡೆಯಲಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಕೂಡಾ ನಡೆಯಲಿವೆ.

More from the blog

ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ..

ಬಂಟ್ವಾಳ : ಗೋಳ್ತಮಜಲು, ಬಾಳ್ತಿಲ, ಅಮ್ಟೂರು ಗ್ರಾಮಗಳನ್ನೊಳಗೊಂಡ ಗೋಳ್ತಮಜಲು ಮಂಡಲದ ಹಿಂದು ಸಂಗಮ ಕಾರ್ಯಕ್ರಮ ಗೋಪೂಜೆಯ ಮೂಲಕ ಭವ್ಯ ಶೋಭಾಯಾತ್ರೆಗೆ ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್ ಚಾಲನೆ...

ಯುವಶಕ್ತಿಗೆ ವೇದಿಕೆಯಾದ ಕೋಟಿ ಚೆನ್ನಯ ಕ್ರೀಡೋತ್ಸವ : ಬಿ. ಜನಾರ್ದನ ಪೂಜಾರಿ

ಬಂಟ್ವಾಳ : ಕೋಟಿ ಚೆನ್ನಯ ಕ್ರೀಡೋತ್ಸವವು ಯುವಜನತೆಯಲ್ಲಿ ಶಿಸ್ತು, ಆರೋಗ್ಯ ಹಾಗೂ ಸಹಭಾವನೆಯನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ. ಇಂತಹ ಕ್ರೀಡೋತ್ಸವಗಳ ಮೂಲಕ ಯುವಶಕ್ತಿ ಒಗ್ಗೂಡಿ ಸಮಾಜದ ಅಭಿವೃದ್ಧಿಗೆ ಸ್ಪೂರ್ತಿದಾಯಕ ದಿಕ್ಕು ನೀಡುತ್ತದೆ” ಎಂದು...

ಭಾರತದ ಸಂಸ್ಕೃತಿ ಉಳಿಸಿ ಬೆಳೆಸುವ ಜವಾಬ್ದಾರಿ ಯುವಪೀಳಿಗೆಗಿದೆ : ಭಕ್ತಿಭೂಷಣ್ ದಾಸ್ ಸ್ವಾಮೀಜಿ

ಬಂಟ್ವಾಳ: ಬಂಟ್ವಾಳ ತಾಲೂಕು ಹಿಂದು ಸಂಗಮ ಆಯೋಜನಾ ಸಮಿತಿಯ ಸಂಗಬೆಟ್ಟು , ಕರ್ಪೆ, ಕುಕ್ಕಿಪಾಡಿ, ಎಲಿಯನಡುಗೋಡು ಗ್ರಾಮಗಳನ್ನೊಳಗೊಂಡ ಸಂಗಬೆಟ್ಟು ಮಂಡಲದ ವತಿಯಿಂದ ಹಿಂದು ಸಂಗಮ ಕಾರ್ಯಕ್ರಮ ಸಿದ್ದಕಟ್ಟೆ ಕೇಂದ್ರ ಮೈದಾನದಲ್ಲಿ ರವಿವಾರ ನಡೆಯಿತು. ಗೋ...

ವಿಟ್ಲ : ಜಾತ್ರೆಯ ಪ್ರಯುಕ್ತ ನೇಮೋತ್ಸವ..

ವಿಟ್ಲ : ಮಹತೋಭಾರ ಶ್ರೀ ಪಂಚಲಿಂಗೇಶ್ವರ ದೇವಸ್ಥಾನ ವಿಟ್ಲ ಇದರ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯ ಪ್ರಯುಕ್ತ ಅರಸು ಮುಂಡಾಲತ್ತಾಯ, ಮಲರಾಯ ದೈವ, ಕೊಡಮಣಿತ್ತಾಯ ಹಾಗೂ ಪಿಲಿಚಾಮುಂಡಿ ದೈವಕ್ಕೆ ದೇವಸ್ಥಾನದ ಎದುರು ನೇಮೋತ್ಸವ...